ಮಸ್ಕಿಯಲ್ಲಿ ಹಮ್ಮಿಕೊಂಡ ಕಸಾಪ 112ನೇ ಸಂಸ್ಥಾಪನಾ ದಿನಾಚರಣೆಯಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ಪ್ರಮುಖರಾದ ರುದ್ರಯ್ಯ ಸ್ವಾಮಿ ಹಿರೇಮಠ, ವಿದ್ಯಾವತಿ ವನಕಿ, ಎಸ್.ದೇವೇಂದ್ರಗೌಡ, ಮಾಹಾಂತೇಶ ಮಸ್ಕಿ, ಗುಂಡೂರಾವ್ ದೇಸಾಯಿ, ಘನಮಠದಯ್ಯ ಸಾಲಿಮಠ, ಕಳಕಪ್ಪ ಹಾದಿಮನಿ, ಸುಭಾಷಸಿಂಗ್ ಹಜಾರೆ, ಸಿದ್ದಲಿಂಗಯ್ಯ ಸೊಪ್ಪಿಮಠ ಇದ್ದರು.  
ರಾಯಚೂರು

ಸರ್ಕಾರ ಕನ್ನಡ ಶಾಲೆಗಳನ್ನು ಉಳಿಸುತ್ತಾ?

ಪ್ರಮುಖ ಮುಖ್ಯಾಂಶಗಳು

  • ಕನ್ನಡ ಸಾಹಿತ್ಯ ಪರಿಷತ್ತಿನ 112 ನೇ ಸಂಸ್ಥಾಪನಾ ದಿನ
  • ಸರ್ಕಾರವೇ ಕನ್ನಡ ಶಾಲೆಗಳಿಗೆ ಕುತ್ತು ತರುತ್ತಿದೆ !
  • ಕನ್ನಡ ಉಳಿಸುವ ಕಾರ್ಯ ನಿರಂತರವಾಗಿರಲಿ
ಮಸ್ಕಿ: ಪ್ರಸ್ತುತ ದಿನಗಳಲ್ಲಿ ಕನ್ನಡ ಶಾಲೆಗಳ ಸಂಖ್ಯೆ ಕಡಿಮೆಯಾಗುತ್ತಿದ್ದು, ಸರ್ಕಾರವೇ ಕನ್ನಡ ಶಾಲೆಗಳಿಗೆ ಕುತ್ತು ತರುತ್ತಿದೆ ಎಂದು ಕಸಾಪ ಜಿಲ್ಲಾ ಮಾಜಿ ಖಜಾಂಚಿ ಎಸ್.ದೇವೆಂದ್ರಗೌಡ ಆರೋಪಿಸಿದರು.
ಪಟ್ಟಣದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಮಂಗಳವಾರ ಆಯೋಜಿಸಿದ್ದ 112 ನೇ ಸಂಸ್ಥಾಪನಾ ದಿನಾಚರಣೆಯಲ್ಲಿ ಮಾತನಾಡಿದರು. ಕಸಾಪದಿಂದ ಕನ್ನಡ ಉಳಿಸುವ ಕಾರ್ಯ ನಿರಂತರವಾಗಿ ಸಾಗಬೇಕು. ಕನ್ನಡ ಶಾಲೆಗಳನ್ನು ಸರ್ಕಾರ ಉಳಿಸಬೇಕೆಂದು ಆಗ್ರಹಿಸಿದರು.
ಖಾಸಗಿ ಶಿಕ್ಷಣ ಸಂಸ್ಥೆ ಅಧ್ಯಕ್ಷ ರುದ್ರಯ್ಯ ಸ್ವಾಮಿ ಹಿರೇಮಠ ಮಾತನಾಡಿದರು. ಎಸ್ಸೆಸ್ಸೆಲ್ಸಿ ಕನ್ನಡದಲ್ಲಿ 125 ಅಂಕ ಪಡೆದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.
ಕಸಾಪ ತಾಲೂಕು ಅಧ್ಯಕ್ಷೆ ವಿದ್ಯಾವತಿ ವನಕಿ, ಹಿರಿಯ ಸಾಹಿತಿ ಮಾಹಾಂತೇಶ ಮಸ್ಕಿ, ಗುಂಡೂರಾವ್ ದೇಸಾಯಿ, ಕಸಾಪ ತಾಲೂಕು ಮಾಜಿ ಅಧ್ಯಕ್ಷ ಘನಮಠದಯ್ಯ ಸಾಲಿಮಠ, ಪ್ರಮುಖರಾದ ಕಳಕಪ್ಪ ಹಾದಿಮನಿ, ಸುಭಾಷಸಿಂಗ್ ಹಜಾರೆ, ಸಿದ್ದಲಿಂಗಯ್ಯ ಸೊಪ್ಪಿಮಠ ಇದ್ದರು.