ಮುದಗಲ್‌ನ ಕುಡಿವ ನೀರಿನ ಸಮಸ್ಯೆ ಪರಿಹರಿಸುವಂತೆ ಜಿಲ್ಲಾಧಿಕಾರಿ ಕೆ.ನಿತೀಶ್‌ಗೆ ಮಾಜಿ ಶಾಸಕ ಡಿ.ಎಸ್.ಹೂಲಗೇರಿ ಒತ್ತಾಯಿಸಿದರು. ಪ್ರಮುಖರಾದ ತಮ್ಮಣ್ಣ ಗುತ್ತೇದಾರ, ಎಂ.ಡಿ.ರಫಿ ಲಿಂಗಸಗೂರು ಇತರರಿದ್ದರು. 
ರಾಯಚೂರು

ಮುದಗಲ್‌ನಲ್ಲಿ ಹೆಚ್ಚುತ್ತಿದೆ ನೀರಿನ ಸಮಸ್ಯೆ

ಗಾಯತ್ರಿ ಮಾಲಿಪಾಟೀಲ್

ಪ್ರಮುಖ ಮುಖ್ಯಾಂಶಗಳು

  • ಮುದಗಲ್‌ನಲ್ಲಿ ಸಮಸ್ಯೆ

ಮುದಗಲ್‌ನಲ್ಲಿ ಹೆಚ್ಚುತ್ತಿದೆ ನೀರಿನ ಸಮಸ್ಯೆ

ಮುದಗಲ್: ಪಟ್ಟಣದಲ್ಲಿ ದಿನೇ ದಿನೆ ಕುಡಿವ ನೀರಿನ ಸಮಸ್ಯೆ ಬಿಗಡಾಯಿಸಿದ್ದು, ಬುಧವಾರ ಲಿಂಗಸಗೂರು ಕ್ಷೇತ್ರದ ಮಾಜಿ ಶಾಸಕ ಡಿ.ಎಸ್.ಹೂಲಗೇರಿ ಡಿಸಿ ಕಚೇರಿಗೆ ಭೇಟಿ ನೀಡಿ ಜಿಲ್ಲಾಧಿಕಾರಿ ಜತೆ ಸಮಸ್ಯೆ ಬಗ್ಗೆ ಕ್ರಮಕ್ಕೆ ಒತ್ತಾಯಿಸಿದರು.
24/7 ನೀರಿನ ಕಾಮಗಾರಿ ರದ್ದಾಗಿದ್ದು, ಮುದಗಲ್‌ನಲ್ಲಿ ನೀರಿನ ಸಮಸ್ಯೆ ಹೆಚ್ಚುತ್ತಿದೆ. ಆದ್ದರಿಂದ ಕೂಡಲೇ ಟ್ಯಾಂಕ್ ನಿರ್ಮಾಣ ಕಾಮಗಾರಿಗೆ ಮತ್ತು ನೀರಿನ ಸಮಸ್ಯೆ ಪರಿಹರಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಕೆ.ನಿತೀಶ್‌ಗೆ ಹೇಳಿದರು.
ಕುಡಿಯುವ ನೀರಿಗಾಗಿ ಡಿಎಂಎಫ್ ಅನುದಾನದಡಿ 1. 20 ಕೋಟಿ ರೂ. ಮೀಸಲಿರಿಸಿದ್ದು, ತ್ವರಿತ ಗತಿಯಲ್ಲಿ ಕಾಮಗಾರಿ ಕೈಗೊಳ್ಳಲಾಗುವುದು. ಜತೆಗೆ ಜಲ ಶುದ್ಧಿಕರಣ ಘಟಕದ ಉನ್ನತೀಕರಣಕ್ಕಾಗಿ 40.75 ಲಕ್ಷ ರೂ. ಅನುದಾನ ಬಿಡುಗಡೆಯಾಗಿದ್ದು, ಟೆಂಡರ್ ಪ್ರಕ್ರಿಯೆ ಹಂತದಲ್ಲಿದೆ ಎಂದು ಪ್ರತಿಕ್ರಿಯಿಸಿದರು.
ನವಲಿ ಜಾಕ್‌ವೆಲ್‌ನಲ್ಲಿ ಕುಡಿವ ನೀರಿನ ನಿರ್ವಹಣೆಗಾಗಿ ಶಾಶ್ವತ ಮೋಟಾರ್ ಪಂಪ್‌ಗಳಿಗೆ ಅಂದಾಜು 65 ಲಕ್ಷ ರೂ. ಮೀಸಲಿಟ್ಟಿದ್ದು, ಅಧಿಕಾರಿಗಳಿಗೆ ಅಂದಾಜು ಪತ್ರಿಕೆ ಸಲ್ಲಿಸಲು ಸೂಚಿಸಿದರು. ಪ್ರಮುಖರಾದ ತಮ್ಮಣ್ಣ ಗುತ್ತೇದಾರ, ಎಂ.ಡಿ.ರಫೀ ಇತರರಿದ್ದರು.