ರಾಯಚೂರಿನ ನಿಜಲಿಂಗಪ್ಪ ಕಾಲೋನಿಯ ಆಟೋ ನಿಲ್ದಾಣದಲ್ಲಿ ಬಸವ ಶ್ರೀನೌಕರರ ಪತ್ತಿನ ಸಹಕಾರ ಸಂಘದ ರಾಯಚೂರು ಶಾಖಾವತಿಯಿಂದ ಶುದ್ಧ ಕುಡಿಯುವ ನೀರಿನ ಅರವಟ್ಟಿಗೆಯನ್ನು ಬುಧವಾರ ಆರಂಭಿಸಲಾಯಿತು. ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಡಾ.ಶಂಕರಗೌಡ ಎಸ್.ಪಾಟೀಲ್, ಮುಖ್ಯ ಕಾರ್ಯನಿರ್ವಾಹಕ ವೀರೇಶ ಎನ್. ಹೊಸೂರು, ಸಂಘದ ನಿರ್ದೇಶಕ ಶರಣಪ್ಪ , ನಿರ್ದೇಶಕ ಮಲ್ಲಿಕಾರ್ಜುನ, ಗ್ರಾಹಕರಾದ ಚಂದ್ರಶೇಖರ ,ರೇವಣಸಿದ್ದಣ್ಣ ,ಮಹೇಶ್, ಕಲ್ಲಯ್ಯ ತಾತಾ, ಶಾಖಾ ವ್ಯವಸ್ಥಾಪಕ ಆದನಗೌಡ , ಸಿಬ್ಬಂದಿಗಳಾದ ಶಿವರಾಜ,ಮಹಾಂತೇಶ ,ಆನಂದ, ವೀರೇಶ್, ಶರಣಬಸವ, ಶಿವಪುತ್ರ ,ಸುನಿಲ ಕುಮಾರ ಇದ್ದರು. 
ರಾಯಚೂರು

ನೀರಿನ ಅರವಟ್ಟಿಗೆ ಪ್ರಾರಂಭ

ರಾಯಚೂರು ನಗರದ ನಿಜಲಿಂಗಪ್ಪ ಕಾಲೋನಿಯ ಆಟೋ ನಿಲ್ದಾಣದಲ್ಲಿ ಬಸವ ಶ್ರೀನೌಕರರ ಪತ್ತಿನ ಸಹಕಾರ ಸಂಘದ ರಾಯಚೂರು ಶಾಖಾವತಿಯಿಂದ ಶುದ್ಧ ಕುಡಿಯುವ ನೀರಿನ ಅರವಟ್ಟಿಗೆಯನ್ನು ಬುಧವಾರ ಆರಂಭಿಸಲಾಯಿತು.
ನೀರಿನ ಅರವಟ್ಟಿಗೆಯನ್ನು ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಡಾ.ಶಂಕರಗೌಡ ಎಸ್.ಪಾಟೀಲ್ ಉದ್ಘಾಟಿಸಿ ಮಾತನಾಡಿ,ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಬಿಸಿಲಿನ ತಾಪಮಾನ ಹೆಚ್ಚಾಗುತ್ತಿದ್ದು
ನಗರದ ವ್ಯಾಪಾರ ವಹಿವಾಟಿಗಾಗಿ ಬರುವ ಸಾರ್ವಜನಿಕರ ದಾಹ ತಣಿಸಲು ಪ್ರತಿ ವರ್ಷದಂತೆ ಈ ವರ್ಷವೂ ನೀರಿನ ಅರವಟಿಗೆಯನ್ನು ಪ್ರಾರಂಭಿಸಿದ್ದೇವೆ ಹಾಗೂ ನಮ್ಮ ಸಂಸ್ಥೆಯ ಶಾಖೆಗಳನ್ನು ಹೊಂದಿರುವ ನಗರದ ಹಾಗೂ ಪಟ್ಟಣದಲ್ಲಿ ಕುಡಿಯುವ ನೀರಿನ ಅರವಟ್ಟಿಗೆಯನ್ನು ಆರಂಭಿಸಲಾಗಿದೆ ಎಂದರು.