ಲಿಂಗಸುಗೂರು ಸಮೀಪದ ಯಲಗಲದಿನ್ನಿ ಮಾತಾ ಮಾಣಿಕೇಶ್ವರ ಆಶ್ರಮದಲ್ಲಿ ಏರ್ಪಡಿಸಿದ್ದ ಮನೆ ಬೆಳಗಿದ ಮಗಳು ನಾಟಕ ಪ್ರದರ್ಶನ ಉದ್ಘಾಟನೆ ಕಾರ್ಯಕ್ರಮದಲ್ಲಿ ಸಂತೆಕೆಲ್ಲೂರು ಘನಮಠದ ಗುರುಬಸವ ಸ್ವಾಮೀಜಿ ಮಾತನಾಡಿದರು. ಗದಗ ವೀರೇಶ್ವರ ಪುಣ್ಯಾಶ್ರಮದ ಡಾ.ಕಲ್ಲಯ್ಯಜ್ಜ, ಮಾತಾ ಮಾಣಿಕೇಶ್ವರಿ ಆಶ್ರಮದ ಮಾತಾ ನಂದೀಶ್ವರಿ ಅಮ್ಮ ಇದ್ದರು. 
ರಾಯಚೂರು

ನಾಟಕ ನೋಡಿ ಕಲಾವಿದರ ಪ್ರೋತ್ಸಾಹಿಸಿ

ಪ್ರಮುಖ ಮುಖ್ಯಾಂಶಗಳು

  • ನಾಟಕಗಳು ಸಮಾಜದ ಪ್ರತಿಬಿಂಬ
  • ಸಂತೆಕೆಲ್ಲೂರು ಘನಮಠದ ಗುರುಬಸವ ಸ್ವಾಮೀಜಿ
ಲಿಂಗಸುಗೂರು: ನಾಟಕಗಳು ಸಮಾಜದ ಪ್ರತಿಬಿಂಬವಿದ್ದಂತೆ. ಧಾರಾವಾಹಿ, ಸಿನಿಮಾಗಳನ್ನು ನೋಡಿದಂತೆ ನಾಟಕಗಳನ್ನು ನೋಡಿ ರಂಗಕಲಾವಿದರನ್ನು ಪ್ರೋತ್ಸಾಹಿಸಬೇಕು ಎಂದು ಸಂತೆಕೆಲ್ಲೂರು ಘನಮಠದ ಗುರುಬಸವ ಸ್ವಾಮೀಜಿ ಹೇಳಿದರು.
ಯಲಗಲದಿನ್ನಿ ಮಾತಾ ಮಾಣಿಕೇಶ್ವರ ಆಶ್ರಮದಲ್ಲಿ ಗದಗ ವೀರೇಶ್ವರ ಪುಣ್ಯಾಶ್ರಮದ ಡಾ.ಕಲ್ಲಯ್ಯಜ್ಜ  ವಿರಚಿತ ‘ಮನೆ ಬೆಳಗಿದ ಮಗಳು: ಸಾಮಾಜಿಕ ನಾಟಕ ಉದ್ಘಾಟಿಸಿ ಮಾತನಾಡಿದ ಅವರು, ಸಮಾಜ ಪರಿವರ್ತನೆಗೆ ನಾಟಕಗಳು ಅಗತ್ಯ. ಈ ಹಿಂದೆ ಗ್ರಾಮಾಂತರ ಪ್ರದೇಶಗಳಲ್ಲಿ ಅತಿಹೆಚ್ಚು ನಾಟಕ ಪ್ರದರ್ಶನಗಳು ನಡೆಯುತ್ತಿದ್ದವು. 
ಸಮಾಜದ ಅಂಕುಡೊಂಕು ತಿದ್ದುವ ಉದ್ದೇಶವಿರುತ್ತಿತ್ತು. ಇಂದು ಪ್ರದರ್ಶನಗೊಳ್ಳುವ ‘ಮನೆ ಬೆಳಗಿದ ಮಗಳು’ ನಾಟಕ ಸಮಾಜಕ್ಕೆ ಒಳ್ಳೆಯ ಸಂದೇಶ ತಲುಪಿಸುತ್ತದೆ. ಶ್ರೀ ಕುಮಾರೇಶ್ವರ ಕೃಪಾ ಪೋಷಿತ ಪಂಡಿತ ಪಂಚಾಕ್ಷರ ಗವಾಯಿಗಳ ನಾಟ್ಯಸಂಘ ಅನೇಕ ಕಡೆ ನಾಟಕ ಪ್ರದರ್ಶನ ಮಾಡಿರುವುದು ಶ್ಲಾಘನೀಯ ಎಂದರು. 
ಗದಗ ವೀರೇಶ್ವರ ಪುಣ್ಯಾಶ್ರಮದ ಡಾ.ಕಲ್ಲಯ್ಯಜ್ಜ, ಮಾತಾ ಮಾಣಿಕೇಶ್ವರಿ ಆಶ್ರಮದ ಮಾತಾ ನಂದೀಶ್ವರಿ ಅಮ್ಮ ಇದ್ದರು.