ಮಸ್ಕಿಯ ಗಾಂಧಿ ನಗರದಲ್ಲಿ ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್ ಅವರು ಎಸ್‌ಐಆರ್ ಮಹಾಸಂಪರ್ಕ ಅಭಿಯಾನದ ಭಾಗವಾಗಿ ಮತದಾರರ ಪಟ್ಟಿ ಕುರಿತು ಜಾಗೃತಿ ಮೂಡಿಸಿದರು. ಪ್ರಮುಖರಾದ ಶರಣಯ್ಯ ಸೊಪ್ಪಿಮಠ, ಸುರೇಶ ಹರಸೂರು, ಬಸವರಾಜ ಡೋಣಮರಡಿ, ಸಿದ್ದಣ್ಣ ಹೂವಿನಬಾವಿ ಇತರರಿದ್ದರು. 
ರಾಯಚೂರು

ಮತದಾರರು ತಪ್ಪದೆ ಹೆಸರು ನೋಂದಾಯಿಸಿ

ಶ್ರೀನಾಥ

ಪ್ರಮುಖ ಮುಖ್ಯಾಂಶಗಳು

  • ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್ ಸಲಹೆ
  • ಮಸ್ಕಿ ಎಸ್‌ಐಆರ್ ಮಹಾಸಂಪರ್ಕ ಅಭಿಯಾನ
ಮಸ್ಕಿ: ಪಟ್ಟಣದಲ್ಲಿ ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್ ನೇತೃತ್ವದಲ್ಲಿ ಬಿಜೆಪಿ ಮುಖಂಡರು ಮನೆಮನೆಗೆ ಭೇಟಿ ನೀಡಿ ಎಸ್‌ಐಆರ್ ಮಹಾಸಂಪರ್ಕ ಅಭಿಯಾನ ನಡೆಸಿದರು.
ಗಾಂಧಿನಗರದಲ್ಲಿ ಮನೆಮನೆಗೆ ತೆರಳಿ ಮತದಾರರ ಪರಿಷ್ಕರಣೆ ಕುರಿತು ಮಾಹಿತಿ ನೀಡಿದ ಪ್ರತಾಪಗೌಡ ಪಾಟೀಲ್ ಅವರು, ಪ್ರತಿಯೊಬ್ಬರೂ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿಕೊಂಡು, ಮತದಾನ ಹಕ್ಕು ಇರುವಿಕೆ ಬಗ್ಗೆ ಖಚಿತಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಬಿಜೆಪಿ ಮಂಡಲ ಅಧ್ಯಕ್ಷ ಶರಣಯ್ಯ ಸೊಪ್ಪಿಮಠ, ಪುರಸಭೆ ಅಧ್ಯಕ್ಷ ಸುರೇಶ ಹರಸೂರು, ಬಿಎಲ್‌ಎ-1 ಬಸವರಾಜ ಡೋಣಮರಡಿ, ಪ್ರಮುಖರಾದ ಸಿದ್ದಣ್ಣ ಹೂವಿನಬಾವಿ, ಮಸೂದ್ ಪಾಷಾ, ಸಂತೋಷ ಪತ್ತಾರ, ಮಲ್ಲಿಕಾರ್ಜುನ ಬ್ಯಾಳಿ, ಅಭಿಜಿತ್ ಮಾಲಿಪಾಟೀಲ್, ಗಂಗಾಧರ ಕಂಬಾಳಿಮಠ, ಪ್ರಶಾಂತ ಮೂರಾರಿ, ಶಿವಕುಮಾರ ಶಾಸ್ತ್ರೀ ಇತರರಿದ್ದರು.
1,93,107 ಮತದಾರರ ಪರಿಷ್ಕರಣೆ: ಮಸ್ಕಿ ಕ್ಷೇತ್ರದಲ್ಲಿ 2,14,049 ಮತದಾರರ ಪೈಕಿ 20,942 ಮತದಾರರ ಡಿಜಿಟಲೀಕರಣ ಮಾತ್ರ ಬಾಕಿ ಇದೆ. ಈಗಾಗಲೇ ಚುನಾವಣಾ ಆಯೋಗದ ಮಾರ್ಗದರ್ಶನದಂತೆ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯ ಅತ್ಯಂತ ಯಶಸ್ವಿಯಾಗಿ ನಡೆದಿದೆ. ಮತದಾರರ ಪಟ್ಟಿ ಪರಿಷ್ಕರಣೆ ದಿನಾಂಕವನ್ನು ಆ.8ರವರೆಗೆ ವಿಸ್ತರಿಸಿದ್ದು, ಉಳಿದ ಮತದಾರರು ಬಿಎಲ್‌ಒಗಳಿಗೆ ಸರಿಯಾದ ಮಾಹಿತಿ ನೀಡಿ ಸಹಕರಿಸಲು ಎಂದು ತಹಸೀಲ್ದಾರ್ ಮಂಜುನಾಥ ಭೋಗಾವತಿ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.