ಮುದಗಲ್‌ನ ಹಳೇಪೇಟೆಯ ಶ್ರೀ ವೀರಭದ್ರೇಶ್ವರ ಕಾರ್ತಿಕೋತ್ಸವದ ನಿಮಿತ್ತ ಕಳಶ ಮೆರವಣಿಗೆ ಹಾಗೂ ಪುರವಂತಿಕೆ ಸೇವೆ ನಡೆಯತು. ಪ್ರಮುಖರಾದ ಶರಣಪ್ಪ ಚಿತ್ರನಾಳ, ಈರಣ್ಣ ಗುಡೂರು, ಚಂದ್ರಶೇಖರಯ್ಯ ರೇವಳಮಠ, ರಾಚಪ್ಪ ಗುಡೂರು ಇತರರಿದ್ದರು. 
ರಾಯಚೂರು

ವೀರಭದ್ರೇಶ್ವರ ಕಾರ್ತಿಕೋತ್ಸವ ಸಂಪನ್ನ

ಪ್ರಮುಖ ಮುಖ್ಯಾಂಶಗಳು

  • ಕಾರ್ತಿಕೋತ್ಸವ
  • ವೀರಭದ್ರೇಶ್ವರ
  • ಕಳಸಾರೋಹಣ

ವೀರಭದ್ರೇಶ್ವರ ಕಾರ್ತಿಕೋತ್ಸವ ಸಂಪನ್ನ

ಮುದಗಲ್: ಪಟ್ಟಣದ ಹಳೇಪೇಟೆಯ ಅರಾಧ್ಯ ದೈವ ಶ್ರೀ ವೀರಭದ್ರೇಶ್ವರ ಕಾರ್ತಿಕೋತ್ಸವ ಮಂಗಳವಾರ ಅದ್ದೂರಿಯಾಗಿ ಜರುಗಿತು.
ಬೆಳಗ್ಗೆ ವೀರಭದ್ರೇಶ್ವರ ಶಿಲಾಮೂರ್ತಿಗೆ ರುದ್ರಾಭಿಷೇಕ, ಬಿಲ್ವಾರ್ಚನೆ, ಎಲೆಚೆಟ್ಟು ಸೇವೆ, ವಿಶೇಷ ಅಲಂಕಾರ, ಮಹಾಮಂಗಳಾರತಿ ಸೇರಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಮಟ್ಟೂರಿನ ಬಸಲಿಂಗಯ್ಯ ಚನ್ನಬಸಯ್ಯ ಸ್ವಾಮಿ ನೆರವೇರಿಸಿದರು.
ನಂತರ ಹಳೇಪೇಟೆಯ ದೇವರ ಬಾವಿಯಲ್ಲಿ ಪೂಜೆ ಸಲ್ಲಿಸಿ ಮಹಿಳೆಯರ ಕಳಸ, ಪುರವಂತಿಕೆ ಹಾಗೂ ಜನಪದ ವಾದ್ಯಮೇಳದೊಂದಿಗೆ ಪ್ರಮುಖ ಬೀದಿಗಳಲ್ಲಿ ಮೂರ್ತಿ ಮೆರವಣಿಗೆ ಮಾಡಲಾಯಿತು. ಭಕ್ತರು ಇಷ್ಟಾರ್ಥ ಸಿದ್ಧಿಗಾಗಿ ಶಸ್ತ್ರ ಹಾಕಿಸಿಕೊಂಡು ಭಕ್ತಿ ಮೆರೆದರು.
ರಾತ್ರಿ ವೀರಭದ್ರೇಶ್ವರ ದೇವಸ್ಥಾನದ ಕಳಸಾರೋಹಣ ನೆರವೇರಿಸಲಾಯಿತು.
ಪ್ರಮುಖರಾದ ಚಂದ್ರಯ್ಯ, ತೋಟಪ್ಪ ವಂದಲಿ, ಮಹಾಂತೇಶ ಬನ್ನಿಗೋಳ, ಶರಣಗೌಡ ಡಾಬಾ, ಶಶಿ ವಂದಾಲಿ, ಬಸವರಾಜ ವಂದಾಲಿ, ದೊಡ್ಡಬಸವ, ಮಹೇಶ ಇತರರಿದ್ದರು.