ಬಸನಗೌಡ ಬಾದರ್ಲಿ 
ರಾಯಚೂರು

ವಿಬಿ ಜಿ ರಾಮ್ ಜಿ ಕಾಯ್ದೆ ರದ್ದುಗೊಳಿಸಲಿ

ರುದ್ರಪ್ಪ ವಾಲಿ

ಪ್ರಮುಖ ಮುಖ್ಯಾಂಶಗಳು

  • ಪ್ರಧಾನಿ
  • ಕಸಿದು
  • ಉದ್ಯೋಗ
ಸಿಂಧನೂರು: ಯುಪಿಎ ಸರ್ಕಾರ ಜಾರಿಗೆ ತಂದಿದ್ದ ಮನರೇಗಾ ಯೋಜನೆ ಹೆಸರು ಬದಲಿಸಿ ಜಾರಿಗೆ ತಂದಿರುವ ವಿಬಿ ಜಿ ರಾಮ್ ಜಿ ಕಾಯ್ದೆಯನ್ನು ರದ್ದುಗೊಳಿಸಬೇಕು ಎಂದು ಒತ್ತಾಯಿಸಿ ಜ.16 ರಂದು ತಾಲೂಕು ಆಡಳಿತ ಸೌಧ ಕಚೇರಿ ಮುಂದೆ ಒಂದು ದಿನದ ನಿರಶನ ನಡೆಸಲಾಗುವುದು ಎಂದು ಎಂಎಲ್ಸಿ ಬಸನಗೌಡ ಬಾದರ್ಲಿ ತಿಳಿಸಿದರು.
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಾಂಗ್ರೆಸ್ ಸರ್ಕಾರ ಒಳ್ಳೆಯ ಉದ್ದೇಶವಿಟ್ಟುಕೊಂಡು ಮನರೇಗಾ ಯೋಜನೆ ಜಾರಿಗೆ ತಂದಿತ್ತು. ಆದರೀಗ ಪ್ರಧಾನಿ ನರೇಂದ್ರಮೋದಿ ಉದ್ಯೋಗ ಕಸಿದು ನಿರುದ್ಯೋಗ ಸೃಷ್ಟಿಸುವ ಮತ್ತು ಗ್ರಾಮಗಳನ್ನು ಬಿಟ್ಟು ಮಹಾನಗರಗಳಿಗೆ ಗುಳೆ ಕಳಿಸುವ ಕುತಂತ್ರ ನಡೆಸಿದ್ದಾರೆ.
ಎಐಸಿಸಿ, ಕೆಪಿಸಿಸಿ ಹಾಗೂ ಸಿಎಂ, ಡಿಸಿಎಂ ಅವರು ಸಭೆ ನಡೆಸಿ ಈ ಕಾಯ್ದೆ ವಿರುದ್ಧ ವಿವಿಧ ಹಂತಗಳಲ್ಲಿ ಆಂದೋಲನ ನಡೆಸಲು ಕರೆ ನೀಡಿದ್ದಾರೆ. ಜ.16ರಂದು ತಾಲೂಕು ಆಡಳಿತ ಸೌಧ ಮುಂದೆ ನಿರಶನ, ಜ.18 ರಿಂದ 29 ರವರೆಗೆ ಗ್ರಾಪಂ ಮಟ್ಟದಲ್ಲಿ ಜನಸಂಪರ್ಕ ಸಭೆ, ಜ.29 ರಂದು ಜನಜಾಗೃತಿ ಮೂಡಿಸಲಾಗವುದು ಎಂದರು.
ಪ್ರಮುಖರಾದ ಶಿವಕುಮಾರ ಜವಳಿ, ಶರಣಯ್ಯಸ್ವಾಮಿ ಕೋಟೆ, ವೆಂಕಟೇಶ ರಾಗಲಪರ್ವಿ, ಅಮರೇಶ ಗಿರಿಜಾಲಿ, ವೀರರಾಜು ಬೂದಿವಾಳ ಕ್ಯಾಂಪ್, ಹಬೀಬ್ ಖಾಜಿ, ಹನುಮಂತ ಕರ್ನಿ, ಯೂಸೂಫ್ ಏತ್ಮಾರಿ, ಚನ್ನಬಸವ ಕೋಟೆ, ಸಂಗಮೇಶ ಇತರರಿದ್ದರು.