ದೇವದುರ್ಗದಲ್ಲಿ ಹಮ್ಮಿಕೊಂಡಿದ್ದ ವಂದೇಮಾತರಂ ಗೀತೆಯ 150ನೇ ವರ್ಷಾಚರಣೆ ಕಾರ್ಯಕ್ರಮವನ್ನು ಶಿರಸ್ತೇದಾರ್ ಭೀಮರಾಯ ಮೇಟಿ ಉದ್ಘಾಟಿಸಿದರು. ಪುರಸಭೆ ಮುಖ್ಯಾಧಿಕಾರಿ ಕೆ.ಹಂಪಯ್ಯ, ಪ್ರಾಧ್ಯಾಪಕ ಡಾ.ಸುಭಾಷ್ ಚಂದ್ರಪಾಟೀಲ್, ಪ್ರಾಚಾರ್ಯ ಸಿದ್ದಯ್ಯ ಸ್ವಾಮಿ, ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷ ನರಸಿಂಗ್ ರಾವ್ ಸರ್ಕಿಲ್ ಇತರರಿದ್ದರು. 
ರಾಯಚೂರು

ವಂದೇ ಮಾತರಂ ಏಕತೆಯ ರಾಷ್ಟ್ರಗೀತೆ

ಪ್ರಮುಖ ಮುಖ್ಯಾಂಶಗಳು

  • ರಾಷ್ಟ್ರಗೀತೆ
  • ವಂದೇ ಮಾತರಂ

ವಂದೇ ಮಾತರಂ ಏಕತೆಯ ರಾಷ್ಟ್ರಗೀತೆ

ದೇವದುರ್ಗ: ವಂದೇಮಾತರಂ ಗೀತೆ ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ದೇಶದ ಏಕತೆಯ ರಾಷ್ಟ್ರಗೀತೆ ಹಾಗೂ ಹೋರಾಟಕ್ಕೆ ಪ್ರೇರಣೆಯಾಗಿತ್ತು ಎಂದು ಶಿರಸ್ತೇದಾರ್ ಭೀಮರಾಯ ಮೇಟಿ ಹೇಳಿದರು.
ಪಟ್ಟಣದ ಖೇಣೇದ್ ಫಂಕ್ಷನ್ ಹಾಲ್‌ನಲ್ಲಿ ಕೇಂದ್ರ ಸಂವಹನ ಇಲಾಖೆ, ವಾರ್ತಾ ಮತ್ತು ಪ್ರಸಾರ ಸಚಿವಾಲಯ, ತಾಲೂಕು ಆಡಳಿತ, ತಾಪಂ, ಆರೋಗ್ಯ ಇಲಾಖೆ ಮತ್ತು ಪುರಸಭೆ ಸಹಯೋಗದಲ್ಲಿ ಬುಧವಾರ ಹಮ್ಮಿಕೊಂಡಿದ್ದ ವಂದೇ ಮಾತರಂ ಗೀತೆಯ 150ನೇ ವರ್ಷಾಚರಣೆ ಹಾಗೂ ಛಾಯಾಚಿತ್ರ ಪ್ರದರ್ಶನ ಕಾರ್ಯಕ್ರಮದಲ್ಲಿ ಮಾತನಾಡಿದರು.
ದೇಶವನ್ನು ಬ್ರಿಟಿಷರ ಕಪಿಮುಷ್ಠಿಯಿಂದ ಬಿಡಿಸಲು ಹೋರಾಡಿದ ವೀರರಿಗೆ ವಂದೇ ಮಾತರಂ ಗೀತೆ ಆತ್ಮಸ್ಥೈರ್ಯ ತುಂಬಿತ್ತು. ಜನಗಣಮನ ಹಾಗೂ ವಂದೇಮಾತರಂ ಗೀತೆ ಎಲ್ಲರಿಗೂ ಪ್ರೇರಣೆಯಾಗಿವೆ ಎಂದರು.
ತಾಪಂ ಇಒ ಬಸವರಾಜ ಹಟ್ಟಿ ಮಾತನಾಡಿ, ವಂದೇ ಮಾತರಂ ಗೀತೆ ಎಲ್ಲರೂ ಒಂದೇ ಎನ್ನುವ ಭಾವನೆ ಮೂಡಿಸುತ್ತಿದೆ. ಭಾರತೀಯರ ಏಕತೆಗೆ ಮಂತ್ರವಾಗಿದೆ ಎಂದು ತಿಳಿಸಿದರು.
ಪುರಸಭೆ ಮುಖ್ಯಾಧಿಕಾರಿ ಕೆ.ಹಂಪಯ್ಯ, ಪ್ರಾಧ್ಯಾಪಕ ಡಾ.ಸುಭಾಷ್ ಚಂದ್ರ ಪಾಟೀಲ್, ಪ್ರಾಚಾರ್ಯ ಸಿದ್ದಯ್ಯ ಸ್ವಾಮಿ, ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷ ನರಸಿಂಗ್ ರಾವ್ ಸರ್ಕಿಲ್, ಅಂಗನವಾಡಿ ಮೇಲ್ವಿಚಾರಕಿ ಗಂಗಮ್ಮ, ಲಕ್ಷ್ಮಣ ಇತರರಿದ್ದರು.