ಮುದಗಲ್‌ನ ಪಿಎಂಶ್ರೀ ಜವಾಹರ ನವೋದಯ ವಿದ್ಯಾಲಯದಲ್ಲಿ ಏರ್ಪಡಿಸಿದ್ದ ಮೈತ್ರಿ ಸಂಭ್ರಮ ಕಾರ್ಯಕ್ರಮದಲ್ಲಿ ಉಪನ್ಯಾಸಕ ಗಿರಿಧರ ಪೂಜಾರ್ ಅವರು ಮಕ್ಕಳೊಂದಿಗೆ ಸಂವಾದ ನಡೆಸಿದರು.
ಮುದಗಲ್: ಸ್ಪರ್ಧಾತ್ಮಕ ಯುಗದಲ್ಲಿ ಸೈದ್ಧಾಂತಿಕ ನೆಲೆಗಟ್ಟಿನ ಆಧಾರದ ಮೇಲೆ ಮೌಲ್ಯಾಧಾರಿತ ಜೀವನ ನಡೆಸಲು ಜೆಎನ್‌ವಿಯಲ್ಲಿ ಪಡೆದ ಶಿಕ್ಷಣ ಸಹಕಾರಿಯಾಗಿದೆ ಎಂದು ಉಪನ್ಯಾಸಕ ಗಿರಿಧರ್ ಪೂಜಾರ್ ಅಭಿಪ್ರಾಯಪಟ್ಟರು.
ಪಟ್ಟಣದ ಪಿಎಂಶ್ರೀ ಜವಾಹರ ನವೋದಯ ವಿದ್ಯಾಲಯದಲ್ಲಿ ಭಾನುವಾರ ಏರ್ಪಡಿಸಿದ್ದ ಮೈತ್ರಿ ಸಂಭ್ರಮ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದರು. ಜವಾಹರ ನವೋದಯ ವಿದ್ಯಾಲಯ (ಜೆಎನ್‌ವಿ)ದಲ್ಲಿ ಮಕ್ಕಳಿಗೆ ಶಿಸ್ತು, ಸಂಸ್ಕಾರ, ಮಹತ್ವಾ ಕಾಂಕ್ಷೆ ಜವಾಬ್ದಾರಿ ಹಾಗೂ ಜೀವನ ರೂಪಿಸಿಕೊಳ್ಳಲು ಮೌಲ್ಯಧಾರಿತ ವಿಷಯ ಗಳನ್ನು ತಿಳಿಸಲಾಗುತ್ತದೆ. ಹೀಗಾಗಿ ಇಲ್ಲಿ ಶಿಕ್ಷಣ ಪಡೆದವರು ರಾಜ್ಯ ಹಾಗೂ ಅಂತರ ರಾಜ್ಯಗಳಲ್ಲಿ ಉನ್ನತ ಹುದ್ದೆಗಳನ್ನು ಅಲಂಕರಿಸುತ್ತಿದ್ದಾರೆ ಎಂದರು.
ಉಪನ್ಯಾಸಕ ರಾದ ಎ.ಕೆ. ಬಸವರಾಜ್, ಸೂರ್ಯವಂಶಿ, ಉಪಪ್ರಾಚಾರ್ಯ ಮುನೀಂದ್ರ ಕುಮಾರ್, ರಮೇಶ್ ಮಟ್ಟಣ್ಣವರ್ ಮಾತನಾಡಿದರು. ಪಿಟಿಸಿ ಸದಸ್ಯರಾದ ಶ್ರೀಕಾಂತ್ ಮಸ್ಕಿ ಹಾಗೂ ಜಗದೀಶ ಹಿರೇಮಠ್, ಸುರೇಶ್ ಇತರರಿದ್ದರು.