- ಶಾಸಕ ಜಿ. ಹಂಪಯ್ಯ ನಾಯಕ ಮಾಹಿತಿ
ಸಿರವಾರ: ತಾಲೂಕಿನ ಬಲ್ಲಟಗಿ ಗ್ರಾಮದಲ್ಲಿ ಮೇ 9ರಂದು ಮಹರ್ಷಿ ವಾಲ್ಮೀಕಿ ಕಂಚಿನ ಮೂರ್ತಿ ಅನಾವರಣ ಹಾಗೂ ವೃತ್ತ ಉದ್ಘಾಟನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಶಾಸಕ ಜಿ. ಹಂಪಯ್ಯ ನಾಯಕ ಹೇಳಿದರು.
ಪಟ್ಟಣದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದ ಪುರಿ ಸ್ವಾಮೀಜಿ ಹಾಗೂ ಗೋಲಪಲ್ಲಿ ಮಠದ ವರಧನೇಶ್ವರ ಸ್ವಾಮೀಜಿ ಮತ್ತು ಕರೆಗುಡ್ಡ ಮಠದ ವಿಜಯ ಮಹಾಂತೇಶ್ವರ ಶ್ರೀಗಳು ಸಾನ್ನಿಧ್ಯ ವಹಿಸುವರು.
ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ, ಜಿಲ್ಲಾ ಉಸ್ತುವಾರಿ ಸಚಿವ ಡಾ. ಶರಣಪ್ರಕಾಶ ಪಾಟೀಲ್, ಸಣ್ಣ ನೀರಾವರಿ ಸಚಿವ ಎನ್.ಎಸ್. ಬೋಸರಾಜು, ಸಂಸದ ಜಿ. ಕುಮಾರ ನಾಯಕ, ಮಾಜಿ ಶಾಸಕ ಗಂಗಾಧರ ನಾಯಕ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ತಾಲೂಕಾಧ್ಯಕ್ಷ ಬ್ರಿಜೇಶ್ ಪಾಟೀಲ್, ಸಿರವಾರ ಪಪಂ ಅಧ್ಯಕ್ಷೆ ಹಾಜಿಚೌದ್ರಿ, ಪಪಂ ಮಾಜಿ ಅಧ್ಯಕ್ಷ ವೈ. ಭೂಪನಗೌಡ, ಮುಖಂಡರಾದ ಚುಕ್ಕಿ ಶಿವಕುಮಾರ ಸಾಹುಕಾರ, ಅಚ್ಚಾ ವೈಜನಾಥ, ಜಿ.ವೀರೇಶ್, ಎಂ. ನಿಂಬೆಯ್ಯ ಸ್ವಾಮಿ, ಕಲ್ಲೂರು ಬಸವರಾಜ ನಾಯಕ, ಸೂರಿ ದುರುಗಣ್ಣ ನಾಯಕ, ಉಮಾಶಂಕರ ನಾಯಕ, ಬೆಳವಿನೂರ ಶಿವರಾಜ ಗೌಡ, ಹಸೇನ್ ಅಲಿಸಾಬ್, ಮೌಲಾಸಾಬ್ ವರ್ಚಸ್ಸು, ಅಬ್ರಹಾಂ ಹೊನ್ನಟಗಿ, ವೆಂಕಟೇಶ ದೊರೆ, ರಂಗನಾಥ ಭೋವಿ ಇತರರಿದ್ದರು.