ಹಂಚಿನಾಳಕ್ಯಾಂಪ್‌ನಲ್ಲಿ ಸಾಂಕ್ರಾಮಿಕ ರೋಗಗಳ ಕುರಿತು ಜಾಗೃತಿ ಕಾರ್ಯಕ್ರಮ ನಡೆಯಿತು. ತಾಲೂಕು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಗೀತಾ ಹಿರೇಮಠ, ಆರೋಗ್ಯ ಇಲಾಖೆಯ ಸುಮಾ ಪಾಟೀಲ್, ರೇಣುಕಾ, ಪದ್ಮಾವತಿ ಇದ್ದರು.
- ಆರೋಗ್ಯ ಶಿಕ್ಷಣಾಧಿಕಾರಿ ಗೀತಾ ಹಿರೇಮಠ ಸಲಹೆ
- ಸಿಂಧನೂರು ಹಂಚಿನಾಳಕ್ಯಾಂಪ್ ಜಾಗೃತಿ ಕಾರ್ಯಕ್ರಮ
ಸಿಂಧನೂರು: ಹಂಚಿನಾಳಕ್ಯಾಂಪ್‌ನಲ್ಲಿ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ತಾಲೂಕು ಆರೋಗ್ಯ ಅಧಿಕಾರಿಗಳ ಕಚೇರಿ, ಪ್ರಾಥಮಿಕ ಆರೋಗ್ಯ ಕೇಂದ್ರ ಗಾಂಧಿನಗರ ಸಹಯೋಗದಲ್ಲಿ ಸಾಂಕ್ರಾಮಿಕ ರೋಗಗಳ ಕುರಿತು ಜಾಗೃತಿ ಕಾರ್ಯಕ್ರಮ ನಡೆಯಿತು.
ತಾಲೂಕು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಗೀತಾ ಹಿರೇಮಠ ಮಾತನಾಡಿ, ಬೀದಿ ನಾಯಿಗಳು, ಸಾಕು ಪ್ರಾಣಿಗಳು ಕಚ್ಚುವುದರಿಂದ ಬರುವ ಸಾಂಕ್ರಾಮಿಕ ರೋಗಕ್ಕೆ ಲಸಿಕೆಯನ್ನು ಹಾಕಿಸುವುದು ಅಗತ್ಯ. ವಿಶೇಷವಾಗಿ ನಾಯಿ ಕಚ್ಚುವುದರಿಂದ ರೇಬಿಸ್ ರೋಗ ಬರುವ ಸಾಧ್ಯತೆ ಹೆಚ್ಚಾಗಿರುತ್ತದೆ. ಹೀಗಾಗಿ ನಾಯಿ ಕಚ್ಚಿದಾಗ ತಡಮಾಡದೆ ಹತ್ತಿರದ ಸರ್ಕಾರಿ ಆಸ್ಪತ್ರೆಗಳಿಗೆ ತೆರಳಿ ಆ್ಯಂಟಿ ರೇಬಿಸ್ ಲಸಿಕೆ ಪಡೆಯಬೇಕೆಂದರು. ಆರೋಗ್ಯ ಇಲಾಖೆಯ ಸುಮಾ ಪಾಟೀಲ್, ರೇಣುಕಾ, ಪದ್ಮಾವತಿ ಹಾಗೂ ಆಶಾ ಕಾರ್ಯಕರ್ತೆಯರು ಇದ್ದರು.