ಲಿಂಗಸುಗೂರಿನಲ್ಲಿ ಜೈ ಭೀಮ್ ರೆಜಿಮೆಂಟ್ ಪಥ ಸಂಚಲನ ನಡೆಯಿತು. ಪ್ರಮುಖರಾದ ದಾನಪ್ಪ ಮಸ್ತಿ, ಚಿದಾನಂದ, ಹೆಚ್.ಎನ್.ಬಡಿಗೇರ, ದೊಡ್ಡಪ್ಪ ಮಸ್ತಿ, ಮೌಲಾನಾ ಮುಪ್ತಿ, ಮೀನಾ ಕುಮಾರಿ, ಗಂಗಮ್ಮ ಕಟ್ಟಿಮನಿ, ನಿಂಗಪ್ಪ ಪರಂಗಿ ಇತರರಿದ್ದರು.
- ಹೋರಾಟಗಾರ ಆರ್.ಮಾನಸಯ್ಯ ಹೇಳಿಕೆ
- ಲಿಂಗಸುಗೂರಿನಲ್ಲಿ ಕೊರೇಗಾಂವ್ ವಿಜಯೋತ್ಸವ
ಲಿಂಗಸುಗೂರು: ಗುಲಾಮಗಿರಿ, ಅನ್ಯಾಯದ ವಿರುದ್ಧ ಬಸವಣ್ಣ, ಅಲ್ಲಮಪ್ರಭು ಸೇರಿ 770 ಶರಣರು ಹೋರಾಡಿದರು ಎಂದು ಚಿಂತಕ, ಹೋರಾಟಗಾರ ಆರ್.ಮಾನಸಯ್ಯ ತಿಳಿಸಿದರು.
ಪಟ್ಟಣದ ಬಸ್ ನಿಲ್ದಾಣದ ಸರ್ಕಲ್‌ನ ವೇದಿಕೆಯಲ್ಲಿ ಗುರುವಾರ ಆಯೋಜಿಸಿದ್ದ ಭೀಮಾ ಕೋರೆಗಾಂವ್ ವಿಜಯೋತ್ಸವ ಹಾಗೂ 208ನೇ ಶೌರ್ಯ ದಿನದ ಬಹಿರಂಗ ಸಭೆಯಲ್ಲಿ ಮಾತನಾಡಿದರು.
ಅಂಬೇಡ್ಕರ್ ಎಂದರೆ ಹೋರಾಟ, ಹೋರಾಟ ಎಂದರೆ ಅಂಬೇಡ್ಕರ್. ಅವರು ಸಮ ಸಮಾಜ ನಿರ್ಮಾಣಕ್ಕೆ ಜೀವನ ಮುಡಿಪಿಟ್ಟರು. ಭೀಮಾ ಕೋರೆಂಗಾವ್ ಯುದ್ಧವು ಜಾತಿ, ಅಸ್ಪಶ್ಯತೆ, ತಾರತಮ್ಯ ವಿರುದ್ಧ ನಿಂತು, ಮಾನವೀಯ ಮೌಲ್ಯಗಳನ್ನು ಪಡೆದುಕೊಳ್ಳಲು ನಡೆದ ಯುದ್ಧ ಎಂದು ಹೇಳಿದರು.
ಇಂದಿನ ಪಥ ಸಂಚಲನದಲ್ಲಿ ಭಾಗವಹಿಸಿದವರು ನಮ್ಮ ಮುಂದಿನ ನಾಯಕರು, ಇವರಿಗೆ ಹೋರಾಟ, ಸಾಮಾಜಿಕ, ಶಿಸ್ತು, ಸಂಸ್ಕೃತಿ, ಕಲೆಯ ತರಬೇತಿ ಅಗತ್ಯವಾಗಿದೆ. ಮಾನ್ಯಾ, ದಾನಮ್ಮ ಹತ್ಯೆ ಹೇಯ ಕೃತ್ಯವಾಗಿದ್ದು, ನಿತ್ಯ ದಲಿತರ ಹತ್ಯೆಗಳು ನಡೆಯುತ್ತಿವೆ. ಬಹಿರಂಗವಾಗಿ ಅಸ್ಪಶ್ಯತೆ ನಡೆಯುತ್ತಿದ್ದು, ಇವೆಲ್ಲವುಗಳ ವಿರುದ್ಧ ಹೋರಾಟ ನಡೆಯಬೇಕಿದೆ. ಅಸಮಾನತೆ ವಿರುದ್ಧ ಸಮಾನತೆ ಗೆಲ್ಲಬೇಕಾಗಿದೆ. ದ್ವೇಷದ ವಿರುದ್ಧ ಪ್ರೀತಿ ಗೆಲ್ಲಬೇಕಾಗಿದೆ. ಇವೆಲ್ಲ ಗೆಲ್ಲಲು ಇತಿಹಾಸದ ಪ್ರೇರಣೆ ನಮಗೆ ಬೇಕಾಗಿದೆ ಎಂದರು.
ಪ್ರಮುಖರಾದ ದಾನಪ್ಪ ಮಸ್ಕಿ, ಚಿದಾನಂದ, ಎಚ್.ಎನ್.ಬಡಿಗೇರ, ದೊಡ್ಡಪ್ಪ ಮಸ್ಕಿ, ಮೌಲಾನಾ ಮುಪ್ತಿ, ಮೀನಾಕುಮಾರಿ, ಗಂಗಮ್ಮ ಕಟ್ಟಿಮನಿ, ನಿಂಗಪ್ಪ ಪರಂಗಿ, ಪ್ರಭುಲಿಂಗ ಮೇಗಳಮನಿ, ಪರಶುರಾಮ ನಗನೂರು, ಎಚ್.ಬಿ.ಮುರಾರಿ, ಪಾಮಯ್ಯ ಮುರಾರಿ, ರಮೇಶ ಗೋಸ್ಲೆ, ಶರಣಪ್ಪ ಹುನಕುಂಟಿ, ಆದೇಶ ನಗನೂರು, ಶಿವಪ್ಪ ಮಾಚನೂರು, ಗುಂಡಪ್ಪ ಯರಡೋಣ ಇತರರಿದ್ದರು.