raichur, 
ರಾಯಚೂರು

ವಿವಿಯ ಅಂತರ ಮಹಾವಿದ್ಯಾಲಯಗಳ ಪಂದ್ಯಾವಳಿ ಯಶಸ್ವಿ

ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ವ್ಯಾಪ್ತಿಯ ಏಳು ಕೃಷಿ ಮಹಾವಿದ್ಯಾಲಯಗಳ ಅಂತರ ಮಹಾವಿದ್ಯಾಲಯ ಗುಂಪು ಪಂದ್ಯಾವಳಿಗಳು ನಗರದ ಕೃಷಿ ವಿವಿಯ ಆವರಣದಲ್ಲಿ ಕೃಷಿ ತಾಂತ್ರಿಕ ಮಹಾವಿದ್ಯಾಲಯದ ವತಿಯಿಂದ ಡಿ.6 ರಂದು ಪ್ರಾರಂಭಗೊಂಡು ಗುರುವಾರ ಪೂರ್ಣಗೊಂಡವು.
2025-26ನೇ ಸಾಲಿನ ಅಂತರ ಮಹಾವಿದ್ಯಾಲಯಗಳ ಪುರುಷರ ಹಾಗೂ ಮಹಿಳೆಯರ ಟೇಬಲ್ ಟೇನ್ನಿಸ್, ಕಬಡ್ಡಿ, ವಾಲಿಬಾಲ್ ಮತ್ತು ಖೋ-ಖೋ ಸ್ಪರ್ಧೆಗಳಲ್ಲಿ ಏಳು ಕೃಷಿ, ಸ್ನಾತಕೋತ್ತರ ಮಹಾವಿದ್ಯಾಲಯಗಳಿಂದ 320 ಪುರುಷ ಮತ್ತು 200 ಮಹಿಳಾ ಕ್ರೀಡಾ ಪಟುಗಳು ಭಾಗವಹಿಸಿದ್ದರು.

ಸಮಾರೋಪ ಸಮಾರಂಭದಲ್ಲಿ ಕುಲಪತಿ ಡಾ.ಎಂ.ಹನುಮಂತಪ್ಪ ಮಾತನಾಡಿ, ಕ್ರೀಡಾ ಮನೋಭಾವ ಮತ್ತು ಶಿಸ್ತಿನ ಬಗ್ಗೆ ವಿದ್ಯಾರ್ಥಿಳಿಗೆ ಸಲಹೆ ಮಾಡಿದರು. ವಿದ್ಯಾರ್ಥಿಗಳು ಶೈಕ್ಷಣಿಕ ಮತ್ತು ಕ್ರೀಡಾ ಚಟುವಟಿಕೆಗಳಲ್ಲಿ ಸಮಾನವಾಗಿ ತೊಡಗಿಸಿಕೊಳ್ಳಬೇಕೆಂದರು.

ಈ ಸಂದರ್ಭದಲ್ಲಿ ಕೃಷಿ ವಿವಿಯ ಅಧಿಕಾರಿ ಡಾ. ನಾರಾಯಣರಾವ್ ಕೆ., ಡೀನ್ ಡಾ.ಎಂ.ಎಸ್.ಅಯ್ಯನಗೌಡರ್, ಕೃಷಿ ತಾಂತ್ರಿಕ ಮಹಾವಿದ್ಯಾಲಯದ ಡೀನ್ ಡಾ.ಯು.ಸತೀಶ ಕುಮಾರ್, ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಡೀನ್ ಡಾ.ಜಾಗೃತಿ ಬಿ. ದೇಶಮಾನ್ಯ, ಆಡಳಿತ ಅಧಿಕಾರಿ ಡಾ. ರಾಜಣ್ಣ, ಕೃವಿವಿಯ ದೈಹಿಕ ಶಿಕ್ಷಣ ವಿಭಾಗ ಉಪ ನಿರ್ದೇಶಕರು ಹಾಗೂ ಪ್ರಾಧ್ಯಾಪಕರು ಸೇರಿ ಅನೇಕರು ಇದ್ದರು.