ಲಿಂಗಸುಗೂರು ಮೊಹಮ್ಮದೀಯ ಮಸ್ಜಿದ್‌ನಲ್ಲಿ ಇಫ್ತಾರ್ ಸೌಹಾರ್ದ ಕೂಟ ಕಾರ್ಯಕ್ರಮದಲ್ಲಿ ಇಳಕಲ್ ಪ್ರವಚನಕಾರ ಜನಾಬ್ ಲಾಲ್ ಹುಸೇನ್ ಸಾಬ್ ಕಂದಗಲ್ಲ ಮಾತನಾಡಿದರು. ಪಿಐ ಹೊಸಕೇರಪ್ಪ, ಸಿಂಧನೂರು ಲೆಕ್ಕ ಪರಿಶೋಧಕ ಅಧಿಕಾರಿ ಚಂದ್ರಶೇಖರ ಕುಂಬಾರ, ಮುಖ್ಯಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಶರಣಗೌಡ ಅಗಸಿಮುಂದಿನ ಇತರರಿದ್ದರು.
- ಪ್ರವಚನಕಾರ ಜನಾಬ್ ಲಾಲ್ ಹುಸೇನ್‌ಸಾಬ್ ಹೇಳಿಕೆ
- ಲಿಂಗಸುಗೂರಿನಲ್ಲಿ ಇಫ್ತಾರ್ ಕೂಟ
ಲಿಂಗಸುಗೂರು: ಪವಿತ್ರ ರಂಜಾನ್ ಮಾಸದಲ್ಲಿ ಸರ್ವಧರ್ಮ ತತ್ವಗಳ ಸಾರವನ್ನು ತಿಳಿದುಕೊಳ್ಳಲು ಇಫ್ತಾರ್ ಸೌಹಾರ್ದ ಕೂಟಗಳು ಅವಶ್ಯವಾಗಿವೆ ಎಂದು ಇಳಕಲ್ ಪ್ರವಚನಕಾರ ಜನಾಬ್ ಲಾಲ್ ಹುಸೇನ್‌ಸಾಬ್ ಕಂದಗಲ್ಲ ಹೇಳಿದರು.
ಪಟ್ಟಣದ ಮೊಹಮ್ಮದೀಯ ಮಸ್ಜಿದ್‌ನಲ್ಲಿ ಜಮಾತೆ ಇಸ್ಲಾಮಿ ಹಿಂದ್, ತಂಜಿಮುಲ್ ಮುಸ್ಲಿಮೀನ್ ಕಮಿಟಿ ಸಂಯುಕ್ತ ಆಶ್ರಯದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಇಫ್ತಾರ್ ಸೌಹಾರ್ದ ಕೂಟ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಮಾಜದಲ್ಲಿ ಶಾಂತಿ, ಸೌಹಾರ್ದ ಮತ್ತು ಪರಸ್ಪರ ಗೌರವ ಬೆಳೆಯಲು ನಾವೆಲ್ಲರೂ ಒಂದು ಎಂಬ ಭಾವನೆ ಎಲ್ಲರಲ್ಲೂ ಮೂಡಬೇಕು. ಪ್ರೀತಿ, ಬಾಂಧವ್ಯ ಹಾಗೂ ಬ್ರಾತೃತ್ವ ಭಾವನೆಯನ್ನು ಬೆಳೆಸುವ ಉದ್ದೇಶದಿಂದ ಇಫ್ತಾರ್ ಕೂಟ ಏರ್ಪಡಿಸಲಾಗಿದೆ. ಉಪವಾಸ, ದಾನ ಧರ್ಮಕ್ಕಿಂತ ಮನುಷ್ಯ ತನ್ನ ಹರಿಷಡ್ವರ್ಗಗಳನ್ನು ನಿಯಂತ್ರಣದಲ್ಲಿಟ್ಟುಕೊಂಡರೆ ಸ್ವರ್ಗದ ಬಾಗಿಲು ತೆರೆಯುತ್ತದೆ ಎಂದರು.
ಪಿಐ ಹೊಸಕೇರಪ್ಪ, ಸಿಂಧನೂರು ಲೆಕ್ಕ ಪರಿಶೋಧಕ ಅಧಿಕಾರಿ ಚಂದ್ರಶೇಖರ ಕುಂಬಾರ, ಮುಖ್ಯಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಶರಣಗೌಡ ಅಗಸಿಮುಂದಿನ, ತಂಜಿಮುಲ್ ಮುಸ್ಲಿಮೀನ್ ಕಮಿಟಿ ಉಪಾಧ್ಯಕ್ಷ ಖಾದರ್ ಬಾಷಾ, ಕಾರ್ಯದರ್ಶಿ ಹಾಜಿ ಅಬ್ದುಲ್ ಸತ್ತಾರಸಾಬ್, ಬಾಬಾ ಖಾಜಿ, ಡಾ.ಜಾವೇದ್, ಜಹೀರುದ್ದೀನ್ ಇದ್ದರು.