ರಾಯಚೂರು ಗುರುಪೂರ್ಣಿಮೆ ಅಂಗವಾಗಿ ನಗರದ ಓಂ ಸಾಯಿ ಧ್ಯಾನ ಮಂದಿರದಲ್ಲಿ ಜು.29 ಮತ್ತು 30 ರಂದು ಗುರುಪೂರ್ಣಿಮೆ ಮಹೋತ್ಸವ ಆಯೋಜಿಸಲಾಗಿದೆಂದು ಧ್ಯಾನಮಂದಿರದ ಸಂಸ್ಥಾಪಕ ಧರ್ಮಾಧಿಕಾರಿ ಸಾಯಿ ಕಿರಣ ಆದೋನಿ ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜು.29 ರಂದು ಬೆಳಗ್ಗೆ 6 ಗಂಟೆಯಿಂದ ವೀಶೇಷ ಪೂಜೆ, ಅಭಿಷೇಕ, ಪುಷ್ಪಾಭೀಷೇಕ ,ಆರತಿ ಹಾಗೂ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ.. ನಂತರ ಸರಿ ಸುಮಾರು 10 ಸಾವಿರ ಜನರಿಗೆ ಮಹಾ ಅನ್ನಸಂತರ್ಪಣೆ ನಡೆಸಲಾಗುತ್ತದೆ. ಈ ಬಾರಿ ವಿಶೇಷ ಆಕರ್ಷಣೆಯಾಗಿ ಶಿರಡಿಯಿಂದ ಶ್ರೀ ಸಾಯಿಬಾಬಾ ಧರಿಸಿದ್ದ ಪವಿತ್ರ ಕಾಫ್ರಿ ದರ್ಶನ ವ್ಯವಸ್ಥೆ ಮಾಡಲಾಗಿದೆ.
ಉದ್ಯಮಿಗಳಾದ ಅಭಿಲಾಷ ಚಕ್ಷಾ ಹಾಗೂ ಸಂತೋಷ ಪಾಟೀಲ್ ಸಹಯೋಗದಲ್ಲಿ ಪ್ರತಿಭಾವಂತ ಬಡ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣಕ್ಕಾಗಿ ಶೈಕ್ಷಣಿಕ ಸಹಾಯ ಧನ ಯೋಜನೆ ಪ್ರಾರಂಭಿಸಲು ನಿರ್ಧರಿಸಲಾಗಿದೆ. ಪಿಯುಸಿಯಲ್ಲಿ ಶೇ.90 ಅಂಕ ಪಡೆದ ವಿದ್ಯಾರ್ಥಿಗಳಿಗೆ ಲ್ಯಾಪ್‌ಟ್ಯಾಪ್ , ಕಂಪ್ಯೂಟರ್, ಟ್ಯಾಬ್ಲೆಟ್, ಶೈಕ್ಷಣಿಕ ಪಠ್ಯ ಪುಸ್ತಕ, ಶುಲ್ಕ ನೀಡಲು ಉದ್ದೇಶಿಸಲಾಗಿದೆ. ಧ್ಯಾನಮಂದಿರದಲ್ಲಿ ಎರಡು ದಿನ ಪ್ರದರ್ಶನ ನಡೆಯಲಿದ್ದು ಭಕ್ತರು ಆಗಮಿಸಿ ದರ್ಶನ ಪಡೆಯಬೇಕು ಎಂದರು.
ಈ ಸಂದರ್ಭದಲ್ಲಿ ಪ್ರಮುಖರಾದ ಉಮಕಾಂತ್, ಜಿ.ಕೇಶವಮೂರ್ತಿ, ರವೀಂದ್ರ ನಾಯಕ, ಈರಣ್ಣ ರಾಯಣ್ಣ ಇದ್ದರು.