ಸಿಂಧನೂರು ತಾಲೂಕಿನ 40ನೇ ಉಪಕಾಲುವೆ ರಸ್ತೆ ರಿಪೇರಿ ಕಾಮಗಾರಿಗೆ ಮಸ್ಕಿ ಶಾಸಕ ಆರ್. ಬಸನಗೌಡ ತುರ್ವಿಹಾಳ ಭೂಮಿ ಪೂಜೆ ನೆರವೇರಿಸಿದರು. ಪಪಂ ಸದಸ್ಯ ಬಾಪುಗೌಡ ದೇವರಮನಿ, ಸಿರಾಜ ಪಾಷಾ, ಮರಿಸ್ವಾಮಿ ಹತ್ತಿಗುಡ್ಡ, ಗುತ್ತಿಗೆದಾರ ಶರಣೇಗೌಡ ಬುಕ್ಕನಹಟ್ಟಿ, ಮಹಾಂತೇಶ ಸಾಹುಕಾರ, ಶರಣಪ್ಪ ಹೊಸಗೌಡ್ರ ಇತರರಿದ್ದರು.
ಸಿಂಧನೂರು: ಅವಧಿಯೊಳಗೆ ಗುತ್ತಿಗೆದಾರರು ಗುಣಮಟ್ಟದ ಕಾಮಗಾರಿ ನಿರ್ವಹಿಸಬೇಕು ಎಂದು ಮಸ್ಕಿ ಶಾಸಕ ಆರ್.ಬಸನಗೌಡ ತುರ್ವಿಹಾಳ ಹೇಳಿದರು.
ತಾಲೂಕಿನ 40ನೇ ಉಪಕಾಲುವೆ ರಸ್ತೆಗೆ ಮರಂ ಹಾಕುವುದು, ಜಂಗಲ್ ಕಟಿಂಗ್ 8 ಕೋಟಿ ರೂ. ವೆಚ್ಚದ ಕಾಮಗಾರಿಗೆ ಗುರುವಾರ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
ಕಾಲುವೆ ರಸ್ತೆ, ಅಕ್ಕಪಕ್ಕದಲ್ಲಿ ಜಾಲಿ ಗಿಡಗಳು ಬೆಳೆದು ರೈತರು ತೊಂದರೆ ಅನುಭವಿಸುತ್ತಿದ್ದರು. ಈ ಬಗ್ಗೆ ನಮ್ಮ ಗಮನಕ್ಕೂ ತಂದಿದ್ದರೂ, ಈಗ ರಸ್ತೆ ಹಾಗೂ ಜಂಗಲ್ ಕಟಿಂಗ್ ಮಾಡಿಸಿ, ಅನುಕೂಲ ಮಾಡಿಕೊಡಲಾಗುವುದು. ರೈತರ ಸಮಸ್ಯೆಗಳಿಗೆ ಸ್ಪಂದಿಸಲಾಗುತ್ತಿದೆ. ಈಗಾಗಲೇ ತುಂಗಭದ್ರಾ ಕ್ರಸ್ಟ್‌ಗೇಟ್‌ಗಳ ಕಾಮಗಾರಿ ಚುರುಕಿನಿಂದ ಸಾಗಿದೆ.
ರೈತರಿಗೆ ಅನುಕೂಲವಾಗುವಂತೆ ನೀರು ಹರಿಸಲಾಗುವುದು. ಕುಡಿವ ನೀರಿಗೂ ಆದ್ಯತೆ ನೀಡಲಾಗಿದೆ ಎಂದರು. ಪಪಂ ಸದಸ್ಯ ಬಾಪುಗೌಡ ದೇವರಮನಿ, ಸಿರಾಜ್‌ಪಾಷಾ, ಮರಿಸ್ವಾಮಿ ಹತ್ತಿಗುಡ್ಡ, ಗುತ್ತಿಗೆದಾರ ಶರಣೇಗೌಡ ಬುಕ್ಕನಹಟ್ಟಿ, ಮಹಾಂತೇಶ ಸಾಹುಕಾರ, ಶರಣಪ್ಪ ಹೊಸಗೌಡ್ರ, ಅರವಿಂದ ರಡ್ಡಿ, ಫಕೀರಪ್ಪ ಭಂಗಿ ಇದ್ದರು.