ರಾಯಚೂರಿನ ಜಿಪಂ ಸಭಾಂಗಣದಲ್ಲಿ ಶನಿವಾರ ಜಿಪಂ ಸಿಇಓ ಈಶ್ವರ ಕುಮಾರ ಕಾಂದೊ ಅಧ್ಯಕ್ಷತೆಯಲ್ಲಿ ವಿಕಸಿತ ಭಾರತ ಗ್ಯಾರಂಟಿ ಫಾರ್ ರೋಜಗಾರ ಅಂಡ್ ಆಜೀವಿತ ಮಿಷನ್ ಗ್ರಾಮೀಣ ಯೋಜನೆ ಕುರಿತು ಒಂದು ದಿನದ ತರಬೇತಿ ನಡೆಯಿತು. ಜಿಪಂ ಯೋಜನಾ ನಿರ್ದೇಶಕ ಶರಣಬಸವರಾಜ, ಉಪಕಾರ್ಯದರ್ಶಿ ಹಾಲಸಿದ್ದಪ್ಪ ಪೂಜಾರಿ, ಮುಖ್ಯ ಲೆಕ್ಕಾಧಿಕಾರಿ ವಿಜಯಶಂಕರ ಇದ್ದರು. 
ರಾಯಚೂರು

ವಿಕಸಿತ ಭಾರತ ಯೋಜನೆ ಕುರಿತು ತರಬೇತಿ

ರಾಚಯ್ಯ ಸ್ವಾಮಿ
ರಾಯಚೂರು
ಜುಲೈ 1ರಿಂದ ಜಾರಿಗೆ ಬರಲಿರುವ ವಿಕಸಿತ ಭಾರತ ಗ್ಯಾರಂಟಿ ಫಾರ್ ರೋಜಗಾರ್ ಅಂಡ್ ಆಜೀವಿತ ಮಿಷನ್ ಗ್ರಾಮೀಣ ಯೋಜನೆಯನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರದ ಮಾನ ದಂಡಗಳ ಆಧಾರದ ಮೇಲೆ ಜಿಲ್ಲೆಯಲ್ಲಿ ಜಾರಿಗೊಳಿಸಲು ಅಗತ್ಯ ಸಿದ್ದತೆಗಳನ್ನು ಮಾಡಿಕೊಳ್ಳಬೇಕೆಂದು ಜಿಪಂ ಸಿಇಓ ಈಶ್ವರ ಕುಮಾರ ಕಾಂದೊ ಹೇಳಿದರು.

ನಗರದ ಜಿಪಂ ಸಭಾಂಗಣದಲ್ಲಿ ಶನಿವಾರ ವಿಕಸಿತ ಭಾರತ ಗ್ಯಾರಂಟಿ ಫಾರ್ ರೋಜಗಾರ ಅಂಡ್ ಆಜೀವಿತ ಮಿಷನ್ ಗ್ರಾಮೀಣ ಯೋಜನೆ ಕುರಿತು ಒಂದು ದಿನದ ತರಬೇತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
2026-27ನೇ ಸಾಲಿಗೆ ಸಂಬಂಧಿಸಿ ಕ್ರಿಯಾ ಯೋಜನೆ ಇದುವರೆಗೂ ಯಾವ ತಾಲೂಕಿನಿಂದ ಸಲ್ಲಿಕೆಯಾಗಿಲ್ಲ, ಶೀಘ್ರವೇ ಸಲ್ಲಿಸಬೇಕು. ಕೇಂದ್ರ ಸರ್ಕಾರದ ಈ ಯೋಜನೆ ಸಮರ್ಪಕವಾಗಿ ಅನುಷ್ಠಾನಗೊಳಿಸಲು ಈಗಾಗಲೇ ಕೇಂದ್ರದಿಂದ ಮಾರ್ಗ ಸೂಚಿಗಳನ್ನು ನೀಡಿದ್ದು, ಈ ಕುರಿತು ಸರ್ಮಪಕವಾಗಿ ಅಧ್ಯಯನ ಮಾಡಿ ಅನುಷ್ಠಾನ ಮಾಡಬೇಕೆಂದರು.

ನರೇಗಾ ಯೋಜನೆಯಡಿಯಲ್ಲಿ ಓಂಬುಡ್ಸಮನ್ ಪ್ರಕರಣಗಳನ್ನು ವಿಲೇವಾರಿ ಮಾಡಬೇಕು. ಸಾಮಾಜಿಕ ಲೆಕ್ಕ ಪರಿಶೋಧನೆ ವಸೂಲಾತಿ ಮೊತ್ತವನ್ನು ಶೀಘ್ರವೇ ನರೇಗಾ ಖಾತೆಗೆ ಜಮಾ ಮಾಡಬೇಕು. ತಾಲೂಕುವಾರು ನೀಡಿರುವ ಮಾನವ ದಿನಗಳ ಗುರಿ ಅನುಗನವಾಗಿ ಸೃಜನೆ ಮಾಡಬೇಕೆಂದು ತಿಳಿಸಿದರು.

ತಾಲೂಕವಾರು ತೆರಿಗೆ ವಸೂಲು ಮಾಡುವ ಬಗ್ಗೆ ಜಿಲ್ಲಾ ಪಂಚಾಯತ ವತಿಯಿಂದ ತಂಡ ರಚನೆ ಮಾಡಿ ಪರಿಶೀಲನೆ ಮಾಡಲು ದಿನಾಂಕ ನಿಗದಿಪಡಿಸಬೇಕು ಎಂದರು.

ಜಿಪಂ ಯೋಜನಾ ನಿರ್ದೇಶಕ ಶರಣಬಸವರಾಜ ಮಾತನಾಡಿ, ವಿಕಸಿತ ಭಾರತ ಗ್ಯಾರಂಟಿ ಫಾರ್ ರೋಜಾಗಾರ್ ಅಂಡ್ ಆಜೀವಿತ ಮಿಷನ್ ಗ್ರಾಮೀಣ ಯೋಜನೆ ಕುರಿತು ಕಾಯ್ದೆ, ಅದರ ಉದ್ದೇಶಗಳು, ಪ್ರಮುಖ ಅಂಶಗಳು ಹಾಗೂ ಪರಿಣಾಮಕಾರಿ ಅನುಷ್ಠಾನದ ಕುರಿತು ಸಮಗ್ರವಾಗಿ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಜಿಪಂ ಉಪಕಾರ್ಯದರ್ಶಿ ಹಾಲಸಿದ್ದಪ್ಪ ಪೂಜಾರಿ, ಮುಖ್ಯ ಲೆಕ್ಕಾಧಿಕಾರಿ ವಿಜಯಶಂಕರ ಸೇರಿ ಅನೇಕರು ಇದ್ದರು.