ರಾಯಚೂರಿನ ಕೃಷಿ ವಿವಿಯ ಸಭಾಂಗಣದಲ್ಲಿ ಸೋಮವಾರ ಅಬಕಾರಿ ಇಲಾಖೆಯಿಂದ ಅಬಕಾರಿ ಸನ್ನದುಗಳ ಇ-ಹರಾಜು ಪ್ರಕ್ರಿಯೆ ಕಾರ್ಯಕ್ರಮವನ್ನು ಅಪರ ಜಿಲ್ಲಾಧಿಕಾರಿ ಶಿವಾನಂದ ಉದ್ಘಾಟಿಸಿದರು. ಕೊಪ್ಪಳದ ಅಬಕಾರಿ ಉಪ ಆಯುಕ್ತ ಕೆ. ಪ್ರಶಾಂತಕುಮಾರ, ಸಂಪನ್ಮೂಲ ವ್ಯಕ್ತಿ ಸತೀಶ ಕುಮಾರ, ಸಿ.ಕೆ.ಮಹೇಂದ್ರ, ಕೆ.ರವಿ ಇದ್ದರು. 
ರಾಯಚೂರು

ಪಾರದರ್ಶಕತೆಗಾಗಿ ಅಬಕಾರಿ ಸನ್ನದುಗಳ ಇ-ಹರಾಜು ತರಬೇತಿ: ಅಪರ ಜಿಲ್ಲಾಧಿಕಾರಿ ಶಿವಾನಂದ

ರಾಚಯ್ಯ ಸ್ವಾಮಿ
ರಾಯಚೂರು ಅಬಕಾರಿ ಇಲಾಖೆಯ ಮಹಾತ್ವಾಕಾಂಕ್ಷೆಯ ಕಾರ್ಯಕ್ರಮವಾದ ಮತ್ತು ರಾಜ್ಯದಲ್ಲಿ ಸ್ಥಗಿತಗೊಂಡಿರುವ ಒಟ್ಟು 477 ಸಿಎಲ್-2ಎ ಮತ್ತು 92 ಸಿಎಲ್-9ಎ ಸನ್ನದುಗಳನ್ನು ಘನ ಸರ್ಕಾರವು ಈ ಹರಾಜು ಮೂಲಕ ವಿಲೇವಾರಿ ಮಾಡಲು ಉದ್ದೇಶಿಸಿ ಅಧಿಸೂಚನೆ ಹೊರಡಿಸಿದೆಂದು ಅಪರ ಜಿಲ್ಲಾಧಿಕಾರಿ ಶಿವಾನಂದ ಹೇಳಿದರು.
ನಗರದ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ಸೋಮವಾರ ಅಬಕಾರಿ ಇಲಾಖೆಯಿಂದ ಅಬಕಾರಿ ಸನ್ನದುಗಳ ಇ-ಹರಾಜು ಪ್ರಕ್ರಿಯೆ ಕುರಿತು ಸಾರ್ವಜನಿಕರಿಗೆ ಮತ್ತು ಸನ್ನದುದಾರರಿಗೆ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಈ ಸನ್ನದುಗಳನ್ನು ಹೇಗೆ ಯಾವ ರೀತಿಯಲ್ಲಿ ಈ ಹರಾಜು ಪ್ರಕ್ರಿಯೆ ಮೂಲಕ ವಿಲೇವಾರಿ ಮಾಡಲಾಗುತ್ತದೆ ಎಂಬುದರ ಬಗ್ಗೆ ತಿಳಿಸಲು ಮತ್ತು ಪಾರದರ್ಶಕತೆ ಕಾಯ್ದುಕೊಳ್ಳಲು ರಾಯಚೂರು ಹಾಗೂ ಕೊಪ್ಪಳ ಅಬಕಾರಿ ಉಪ ಆಯುಕ್ತರ ಕಚೇರಿಯಿಂದ ಹಮ್ಮಿಕೊಂಡ ಈ ತರಬೇತಿ ಮಹತ್ವದ್ದಾಗಿದ್ದು, ಸಾರ್ವಜನಿಕರು ಮತ್ತು ಸನ್ನದುದಾರರು ಇದರ ಸದುಪಯೋಗ ಪಡೆಯಬೇಕೆಂದು ಸಲಹೆ ನೀಡಿದರು.
ಕೊಪ್ಪಳದ ಅಬಕಾರಿ ಉಪ ಆಯುಕ್ತ ಕೆ. ಪ್ರಶಾಂತಕುಮಾರ ಮಾತನಾಡಿ, ರಾಯಚೂರು ಜಿಲ್ಲೆಗೆ ಒಟ್ಟು 08 ಸಿಎಲ್-2ಎ ಮತ್ತು 1 ಸಿಎಲ್-9ಎ ಸನ್ನದುಗಳ ಹಂಚಿಕೆ ಮಾಡಲಾಗಿದೆ. ಕೇಂದ್ರ ಸರ್ಕಾರದ ಸಂಸ್ಥೆಯಾದ ಎಂಎಸ್‌ಟಿಸಿ ಸಂಸ್ಥೆಯ ತಂತ್ರಜ್ಞರಿಂದ ಇ-ಹರಾಜು ಪ್ರಕ್ರಿಯೆ ಬಗ್ಗೆ ತಿಳಿಸಲು ಕ್ರಮ ವಹಿಸಲಾಗಿದೆ ಎಂದು ಮಾಹಿತಿ ನೀಡಿದರು.
ಸಂಪನ್ಮೂಲ ವ್ಯಕ್ತಿ ಸತೀಶ ಕುಮಾರ ಮಾತನಾಡಿ, ಇ-ಹರಾಜು ಪ್ರಕ್ರಿಯೆಗೆ ಸಂಬಂಧಿಸಿದ ವೆಬ್ ಪೋರ್ಟಲ್ ಮಾಹಿತಿ ಹಾಗೂ ಇ-ಹರಾಜು ಪ್ರಕ್ರಿಯೆಯಲ್ಲಿನ ಪಾರದರ್ಶಕತೆಯ ಅಂಶಗಳ ಬಗ್ಗೆ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಅಬಕಾರಿ ಉಪ ಆಯುಕ್ತ ಸಿ.ಕೆ.ಮಹೇಂದ್ರ, ಕೆ ರವಿ ಸೇರಿ ಅನೇಕರು ಇದ್ದರು.