ದೇವದುರ್ಗ: ಗಬ್ಬೂರು ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಹಲವು ತಿಂಗಳಿಂದ ನನೆಗುದಿಗೆ ಬಿದ್ದಿದ್ದ ಹೈಟೆಕ್ ಶೌಚಗೃಹ ಕಾಮಗಾರಿಗೆ ಮತ್ತೆ ಚಾಲನೆ ಸಿಕ್ಕಿದೆ.
ಶೌಚಗೃಹ ನಿರ್ಮಾಣಕ್ಕೆ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯಿಂದ 20 ಲಕ್ಷ ರೂ. ಬಿಡುಗಡೆಯಾಗಿತ್ತು. ಕೆಆರ್‌ಐಡಿಎಲ್ ಅಪೂರ್ಣ ಕೆಲಸ ಮಾಡಿತ್ತು. ಈ ಕುರಿತು ಪ್ರಾಚಾರ್ಯರು ಹಲವು ಸಲ ಸಂಬಂಧಿಸಿದ ಇಲಾಖೆ ಅಧಿಕಾರಿಗಳಿಗೆ ಪತ್ರ ಬರೆದು ಮನವಿ ಮಾಡಿದ್ದರೂ ಸ್ಪಂದಿಸಿರಲಿಲ್ಲ. ಕಳೆದ ಜೂನ್‌ನಲ್ಲಿ ‘ವಿಜಯವಾಣಿ’ಯಲ್ಲಿ ‘ಹೈಟೆಕ್ ಶೌಚಗೃಹ ಕಟ್ಟಡಕ್ಕೆ ಗ್ರಹಣ’ ಶೀರ್ಷಿಕೆಯಡಿ ಸುದ್ದಿಪ್ರಕಟಿಸಿ ಸಮಸ್ಯೆ ಮೇಲೆ ಬೆಳಕು ಚೆಲ್ಲಿತ್ತು. ಇದರಿಂದ ಎಚ್ಚೆತ್ತುಕೊಂಡ ಅಧಿಕಾರಿಗಳು ಬಾಕಿ ಕಾಮಗಾರಿ ಮಾಡಲು ಮುಂದಾಗಿದ್ದಾರೆ.