ಹೇರುಂಡಿ ಗ್ರಾಮದಲ್ಲಿ ವಿಬಿ ಜಿ ರಾಮ್ ಜಿ ಯೋಜನೆ ಜಾಗೃತಿ ಹಾಗೂ ಜಾಬ್‌ಕಾರ್ಡ್ ಮೇಳ ನಡೆಯಿತು. ತಾಪಂ ಐಇಸಿ ಸಂಯೋಜಕ ಅಮರೇಶ, ಕರವಸೂಲಿಗಾರ ಮೌನೇಶ, ಡೇಟಾ ಎಂಟ್ರಿ ಆಪರೇಟರ್ ವೆಂಕೋಬ, ಆರ್‌ಜಿ ಪೋಲೋ ಪಂಪಾಪತಿ, ಗ್ರಾಮಸ್ಥರು ಇದ್ದರು. 
ರಾಯಚೂರು

ಜಾಬ್‌ಕಾರ್ಡ್ ಇಲ್ಲದವರು ಗ್ರಾಪಂಗೆ ಅರ್ಜಿ ಸಲ್ಲಿಸಿ

ಪ್ರಮುಖ ಮುಖ್ಯಾಂಶಗಳು

  • ತಾಪಂ ಐಇಸಿ ಸಂಯೋಜಕ ಅಮರೇಶ ಸಲಹೆ
  • ದೇವದುರ್ಗ ಹೇರುಂಡಿ ವಿಬಿ ಜಿ ರಾಮ್ ಜಿ ಜಾಗೃತಿ
ದೇವದುರ್ಗ: ಗ್ರಾಮೀಣ ಭಾಗದ ಬಡವರು, ಕೂಲಿಕಾರರು ಹಾಗೂ ರೈತರ ಅನುಕೂಲಕ್ಕಾಗಿ ಸರ್ಕಾರ ವಿಬಿ ಜಿ ರಾಮ್ ಜಿ ಯೋಜನೆ ಅನುಷ್ಠಾನಕ್ಕೆ ತಂದಿದೆ. ಪ್ರತಿಯೊಬ್ಬರೂ ಯೋಜನೆ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ತಾಪಂ ಐಇಸಿ ಸಂಯೋಜಕ ಅಮರೇಶ ಹೇಳಿದರು.

ಹೇರುಂಡಿ ಗ್ರಾಮದಲ್ಲಿ ವಿಬಿ ಜಿ ರಾಮ್ ಜಿ ಜಾಗೃತಿ ಹಾಗೂ ಜಾಬ್‌ಕಾರ್ಡ್ ಮೇಳದಲ್ಲಿ ಮಾತನಾಡಿದರು. ಯೋಜನೆ ಬಗ್ಗೆ ಜಾಗೃತಿ ಮೂಡಿಸುವ ಜತೆಗೆ ಕೂಲಿಕಾರರಿಗೆ ಜಾಬ್‌ಕಾರ್ಡ್ ವಿತರಿಸಲು ಮೇಳ ಆಯೋಜಿಸಲಾಗಿದೆ. ಯೋಜನೆಯಡಿ ಅರ್ಹರು 125 ದಿನ ಕೆಲಸ ಮಾಡಬಹುದು. ಕೂಲಿ ಮೊತ್ತವನ್ನೂ ಹೆಚ್ಚಿಸಲಾಗಿದ್ದು, ವಿವಿಧ ಕಾಮಗಾರಿ ಕೈಗೊಳ್ಳಲು ಅವಕಾಶವಿದೆ. ಜಾಬ್‌ಕಾರ್ಡ್ ಹೊಂದಿರದ ಅರ್ಹ ಫಲಾನುಭವಿಗಳು ನಮೂನೆ-1ರಲ್ಲಿ ಅಗತ್ಯ ಮಾಹಿತಿ ತುಂಬಿ ಗ್ರಾಪಂಗೆ ಸಲ್ಲಿಸಬೇಕು ಎಂದು ಹೇಳಿದರು.