ರಾಯಚೂರು ಹೊಸ ಚಿತ್ರಗಳ ಪೈರಸಿ ತಡೆಯಲು ಯಾರಿಂದ ಸಾಧ್ಯವಿಲ್ಲ. ಇದರಿಂದ ಚಿತ್ರರಂಗಕ್ಕೆ ಹಾನಿಯಿದೆ. ಕೆಲವರು ಹೊಟ್ಟೆ ಪಾಡಿಗಾಗಿ ಎಲ್ಲೋ ಕುಳಿತು ಪೈರಸಿ ಮಾಡುತ್ತಿದ್ದಾರೆ. ಮಾಡಲಿ ಬಿಡಿ ಪಾಪ ಎಂದು ನಟ ಝೈದ್ ಖಾನ್ ಹೇಳಿದರು.
ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಕನ್ನಡ ಚಿತ್ರದ್ಯೋಮ ಚಿಕ್ಕದು. ಇಲ್ಲಿ ಎಲ್ಲರಿಗೂ ಹೊಟ್ಟೆ ತುಂಬಿದೆ. ನಾಯಕ ನಟರು ಸೇರಿದಂತೆ ನಿರ್ಮಾಪಕರು ತಮ್ಮ ಕೆಲಸವನ್ನು ಗಂಭೀರಾಗಿ ಪರಿಗಣಿಸುತ್ತಿಲ್ಲ. ಹಣವಿದ್ದವರು ಯಾರ್ಯಾರೋ ನಟ, ನಿರ್ದೇಶಕ ಸೇರಿದಂತೆ ಎಲ್ಲ ಕಾರ್ಯ ನಿಭಾಹಿಸುತ್ತಿದ್ದು, ಉತ್ತಮ ಚಿತ್ರಕಥೆ ಇಲ್ಲದ ಸಿನೆಮಾ ಮಾಡಿ ಪ್ರೇಕ್ಷಕರು ಥಿಯೇಟರ್ ಕಡೆ ಬರದಂತಾಗಿದೆ ಎಂದರು.
ಚಿತ್ರರಂಗದಲ್ಲಿ ಯಾವುದೇ ಸ್ಟಾರ್‌ವಾರ್ ಇಲ್ಲ. ಎಲ್ಲವೂ ಸರಿ ಹೋಗಿದೆ. ನಾವೆಲ್ಲರೂ ಒಂದೇ ಕುಟುಂಬದವರಾಗಿದ್ದೇವೆ. ರಾಜಕೀಯ ಕ್ಷೇತ್ರ ಸಮಾಜ ಸೇವೆ ಕ್ಷೇತ್ರವಲ್ಲ. ಅಲ್ಲಿ ಆಯಾ ಸಂದರ್ಭಕ್ಕೆ ತಕ್ಕಂತೆ ರಾಜಕಾರಣಿಗಳು ಸಮಾಜ ಸೇವೆ ಎಂದು ಹೇಳುತ್ತಾರೆ ವಿನ: ಅವರಾರು ಸಮಾಜ ಸೇವೆ ಮಾಡುವುದಿಲ್ಲ. ಹಾಗಾಗಿ ನಾನು ರಾಜಕೀಯಕ್ಕೆ ಬರುವುದಿಲ್ಲ ಎಂದರು.