ರಾಯಚೂರಿನ ಪಂ.ಸಿದ್ಧರಾಮ ರಂಗಮಂದಿರದಲ್ಲಿ ಆಯೋಜಿಸಿದ್ದ ನಾಟಕೋತ್ಸವ, ಬಯಲಾಟ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ತಹಸೀಲ್ದಾರ್ ಅಬ್ದುಲ್ ವಾಹೀದ್ ಚಾಲನೆ ನೀಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಉತ್ತರಾದೇವಿ ಹಿರೇಮಠ, ಸಿರವಾರ ಶಿರಸ್ತೇದಾರ್ ಜುಬೇರ ಬಿನ್ ಶಾಲಂ ಹಾಗೂ ವಿದ್ಯಾರ್ಥಿಗಳು ಇದ್ದರು. 
ರಾಯಚೂರು

ರಂಗಭೂಮಿಕಲೆ ಸಮಾಜದ ಕೈಗನ್ನಡಿ

ರಾಯಚೂರು: ರಂಗಭೂಮಿ, ಬಯಲಾಟ, ನೃತ್ಯ ಜೀವಂತ ಕಲೆಯಾಗಿದ್ದು, ಸಮಾಜದ ಕೈಗನ್ನಡಿಯಂತಿವೆ. ಇಂಥ ಕಲೆಗಳಿಗೆ ಸಮಾಜದ ಪ್ರೋತ್ಸಾಹ ಅಗತ್ಯ ಎಂದು ಮಾನ್ವಿ ತಹಸೀಲ್ದಾರ್ ಅಬ್ದುಲ್ ವಾಹೀದ್ ಹೇಳಿದರು.
ನಗರದ ಪ.ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಪಂ, ಮಹಾನಗ ಪಾಲಿಕೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಆಯೋಜಿಸಿದ್ದ ನಾಟಕೋತ್ಸವ, ಬಯಲಾಟ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಗುರುವಾರ ಮಾತನಾಡಿದರು. ಜಿಲ್ಲೆಯ ಇತಿಹಾಸ, ಐತಿಹಾಸಿಕ ಕಲೆ, ಸಂಸ್ಕೃತಿ, ಸಾಹಿತ್ಯ ಪರಂಪರೆಯನ್ನು ಪ್ರತಿಯೊಬ್ಬರೂ ಅರಿಯಬೇಕಿದೆ. ಎಡೆದೊರೆ ನಾಡಿನ ಸಂಸ್ಕೃತಿ ಈ ನಾಡಿಗೆ ಪರಿಚಯಿಸುವ ದೃಷ್ಟಿಯಿಂದ ಉತ್ಸವ ಆಯೋಜಿಸಲಾಗಿದೆ. ಯಾವುದೇ ಊರಿಗೆ ತನ್ನದೆಯಾದ ಇತಿಹಾಸ, ಸಂಸ್ಕೃತಿ ಇರುತ್ತದೆ. ಅದನ್ನು ಅಲಕ್ಷ್ಯ ಮಾಡುವುದು ನಮ್ಮತನ ಮರೆತಂತೆ. ಎಲ್ಲರೂ ನಮ್ಮ ನಾಡಿನ ನೆಲ, ಜಲ, ಭಾಷೆ ಬಗ್ಗೆ ಕಾಳಜಿ, ಪ್ರೀತಿ ಹೊಂದಬೇಕು ಎಂದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಉತ್ತರಾದೇವಿ ಹಿರೇಮಠ, ಸಿರವಾರ ಶಿರಸ್ತೇದಾರ್ ಜುಬೇರ ಬಿನ್ ಶಾಲಂ, ಸರ್ಕಾರಿ ನೌಕರರ ಸಂಘದ ರಾಜ್ಯ ನಿರ್ದೇಶಕ ಐಸಾನ್ ಉಲ್‌ಹಕ್, ವೈಶಂಪಾಯನ ಜೋಷಿ, ಪ್ರಸನ್ನ ಕುಮಾರ ಇದ್ದರು.
ನಾಟಕ ಪ್ರದರ್ಶನ: ಅಲ್ತಾಫ್ ರಂಗಮಿತ್ರ ತಂಡ ಕಿತ್ತೂರುರಾಣಿ ಚನ್ನಮ್ಮ ನಾಟಕ ಪ್ರದರ್ಶನ ನೀಡಿತು. ಅಲ್ಲದೆ ವಿ.ಎನ್.ಅಕ್ಕಿ, ಪ್ರವೀಣರೆಡ್ಡಿ ಗುಂಜಹಳ್ಳಿ, ಲಕ್ಷ್ಮಣ ಮಂಡಲಗೇರಾ, ಹನುಮಂತಪ್ಪ ಜಾಲಿಬೆಂಚಿ, ಉರುಕುಂದಪ್ಪ, ಈರಣ್ಣ ಸೇನನಪಲ್ಲಿ, ಅಣವೀರಯ್ಯ, ರಂಗಸ್ವಾಮಿ, ಬಯಲಾಟ, ವೆಂಕಟನರಸಿಂಹಲು, ಪೌರಾಣಿಕ ನಾಟಕ, ರಂಗಚೇತನ ಸಾಂಸ್ಕೃತಿಕ ಕಲಾಸಂಘ, ದೇವಣ್ಣ ಎಲೆಬಿಚ್ಚಾಲಿ ತಂಡದಿಂದ ನಾಟಕ ಪ್ರದರ್ಶನ ನಡೆಯಿತು.