ಮಸ್ಕಿ ಪತ್ರಿಕಾ ಭವನದಲ್ಲಿ ಪತ್ರಿಕೆ ವಿತರಕರಿಗೆ ಲಯನ್ಸ್ ಕ್ಲಬ್‌ನಿಂದ ಸ್ವೆಟರ್ ವಿತರಿಸಲಾಯಿತು. ಲಯನ್ಸ್ ಕ್ಲಬ್ ಅಧ್ಯಕ್ಷ ವೀರೇಶ ಹಿರೇಮಠ, ಲಯನ್ಸ್ ಕ್ಲಬ್ ಉಪಾಧ್ಯಕ್ಷ ಬಸವಲಿಂಗ ಶಟ್ಟಿ, ಕಾರ್ಯದರ್ಶಿ ನಾಗರಾಜ ಕಂಬಾರ, ಸದಸ್ಯ ಆದಯ್ಯಸ್ವಾಮಿ ಕ್ಯಾತ್ನಟ್ಟಿ ಇತರರಿದ್ದರು. 
ರಾಯಚೂರು

ಪತ್ರಿಕೆ ವಿತರಿಸುವ ಕಾರ್ಯ ಶ್ಲಾಘನೀಯ

ಗಾಯತ್ರಿ ಮಾಲಿಪಾಟೀಲ್

ಪ್ರಮುಖ ಮುಖ್ಯಾಂಶಗಳು

  • ಪತ್ರಿಕೆ
  • ಪತ್ರಿಕೆ ವಿತರಿಸುವ ಕಾರ್ಯ
  • ಲಯನ್ಸ್ ಕ್ಲಬ್‌

ಪತ್ರಿಕೆ ವಿತರಿಸುವ ಕಾರ್ಯ ಶ್ಲಾಘನೀಯ

ಮಸ್ಕಿ: ಸಮಾಜ ಸೇವೆ ಮಾಡುವುದು ಮತ್ತು ಸೇವೆ ಮಾಡುವಂತೆ ಪ್ರೇರೇಪಿಸುವುದು ಲಯನ್ಸ್ ಕ್ಲಬ್‌ನ ಉದ್ದೇಶವಾಗಿದೆ ಎಂದು ಲಯನ್ಸ್ ಕ್ಲಬ್ ಸಂಸ್ಥೆ ಅಧ್ಯಕ್ಷ ವೀರೇಶ ಹಿರೇಮಠ ಹೇಳಿದರು.
ಪಟ್ಟಣದ ಪತ್ರಿಕಾ ಭವನದಲ್ಲಿ ಬುಧವಾರ ಪತ್ರಿಕೆ ವಿತರಕರಿಗೆ ಸ್ವೆಟರ್ ವಿತರಿಸಿ ಮಾತನಾಡಿದರು. ಆರೋಗ್ಯ ಸೇವೆ, ಪರಿಸರ ಸ್ವಚ್ಛತೆ, ವಿದ್ಯಾರ್ಥಿಗಳ ಕಲಿಕೆಗೆ, ಉತ್ತಮ ಶಿಕ್ಷಕರನ್ನು ಲಯನ್ಸ್ ಕ್ಲಬ್ ಗುರುತಿಸಿ ಪ್ರೋತ್ಸಾಹಿಸುತ್ತಿದೆ. ಮೈ ಕೊರೆವ ಚಳಿಯಲ್ಲೂ ಪತ್ರಿಕೆ ವಿತರಕರ ಕಾರ್ಯ ಶ್ಲಾಘನೀಯ ಎಂದರು.
ಲಯನ್ಸ್ ಕ್ಲಬ್ ಉಪಾಧ್ಯಕ್ಷ ಬಸವಲಿಂಗ ಶಟ್ಟಿ, ಕಾರ್ಯದರ್ಶಿ ನಾಗರಾಜ ಕಂಬಾರ, ಸದಸ್ಯ ಆದಯ್ಯಸ್ವಾಮಿ ಕ್ಯಾತ್ನಟ್ಟಿ, ಪ್ರಮುಖರಾದ ಡಾ.ಎಚ್.ಮಲ್ಲಿಕಾರ್ಜುನ, ಸೋಮಶೇಖರಯ್ಯ ಸಿರವಾರಮಠ, ಬಸನಗೌಡ ಪೊಲೀಸ್ ಪಾಟೀಲ್, ಅಬ್ದುಲ್ ಅಜೀಜ್, ಪ್ರಕಾಶ ಮಸ್ಕಿ, ಅಮರೇಶ ಪತ್ತಾರ, ಅಮರೇಶ ಸಾಲಿಮಠ, ಎಂ.ಎಸ್.ಬಗವಾನ್ ಇತರರಿದ್ದರು.