ಅಡವಿ ಅಮರೇಶ್ವರ ಮಠದಲ್ಲಿ ಬುಧವಾರ ತೋಂಟದಾರ್ಯ ಶ್ರೀಗಳ ಜನ್ಮದಿನಾಚರಣೆ ಅಂಗವಾಗಿ ಸಸಸಿಗಳನ್ನು ನೆಡಲಾಯಿತು. ಪ್ರಮುಖರಾದ ಹಿರಿಯ ವಕೀಲ ಸಿದ್ದಲಿಂಗಪ್ಪ ಚಿಕ್ಕಕೊಟ್ನೆಕಲ್, ಎಸ್.ತಿಮ್ಮರಡ್ಡಿ, ಚಂದ್ರಶೇಖರ ಓತೂರು, ಸಜ್ಜನ್ ಬಸವರಾಜ ಇದ್ದರು.
ಮಾನ್ವಿ: ಯುವಕರು ದುಶ್ಚಟಗಳಿಂದ ದೂರವಿರುವ ಮೂಲಕ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಹಿರಿಯ ವಕೀಲ ಸಿದ್ದಲಿಂಗಪ್ಪ ಚಿಕ್ಕಕೊಟ್ನೆಕಲ್ ಹೇಳಿದರು.
ತಾಲೂಕಿನ ಅಡವಿ ಅಮರೇಶ್ವರ ಗ್ರಾಮದ ಸುವರ್ಣಗಿರಿ ವಿರಕ್ತಮಠ ಅಡವಿ ಅಮರೇಶ್ವರ ಮಠದ ತೋಂಟದಾರ್ಯ ಸ್ವಾಮಿಗಳ 26ನೇ ಜನ್ಮದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಅಡವಿ ಅಮರೇಶ್ವರ ಮಠವು ಈ ಭಾಗದಲ್ಲಿ ಶೈಕ್ಷಣಿಕ ಹಾಗೂ ಧಾರ್ಮಿಕ ಕಾರ್ಯಕ್ರಮಗಳ ಮೂಲಕ ಜನರಲ್ಲಿ ಉತ್ತಮ ಸಂಸ್ಕಾರ, ಅಕ್ಷರಜ್ಞಾನ ನೀಡುವ ಕಾರ್ಯ ಮಾಡುತ್ತಿರುವುದು ಶ್ಲಾಘನೀಯ ಎಂದರು. ಅಡವಿ ಅಮರೇಶ್ವರ ಮಠದ ಶ್ರೀಗಳು ಸೇರಿ ಭಕ್ತರು ರಕ್ತದಾನ ಮಾಡಿದರು. ಸರ್ಕಾರಿ ಶಾಲೆ ಹಾಗೂ ಶ್ರೀಮಠದ ಆವರಣದಲ್ಲಿ ಸಸಿಗಳನ್ನು ನೆಡಲಾಯಿತು.
ಸುವರ್ಣಗಿರಿ ವಿರಕ್ತಮಠ ಯದ್ದಲದೊಡ್ಡಿಯ ಮಹಾಲಿಂಗ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು. ರಾಜ್ಯ ಜೆಡಿಎಸ್ ಯುವ ಘಟಕದ ಉಪಾಧ್ಯಕ್ಷ ರಾಜಾ ರಾಮಚಂದ್ರ ನಾಯಕ, ಮಲ್ಲಿಕಾರ್ಜುನ ಪೋತ್ನಾಳ, ಮೌನೇಶ ರಾಜಲದಿನ್ನಿ, ಬಸನಗೌಡ ಮಾಲಿಪಾಟೀಲ್, ದೊಡ್ಡ ಬಸಪ್ಪಗೌಡ, ಹನುಮಂತಗೌಡ ಕೊಟ್ನೆಕಲ್, ಜಗದೀಶ ಓತೂರು, ಸದಶಿವಪ್ಪಗೌಡ, ಶ್ರೀನಿವಾಸ ನಾಯಕ, ಅಮರಯ್ಯ ಮ್ಯಾಕಲ್ ಇತರರಿದ್ದರು.