ಸಿಂಧನೂರಿನಲ್ಲಿ ಹಮ್ಮಿಕೊಂಡಿದ್ದ ಸಂತ ಕವಿ ಕನಕದಾಸರ ಜೀವನ ದರ್ಶನ ಮತ್ತು ರಾಮಧಾನ್ಯ ಚರಿತೆ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ ಮುಕ್ಕಣ್ಣ ಕರಿಗಾರ ಉದ್ಘಾಟಿಸಿದರು. ಜಮಾಅತೆ ಇಸ್ಲಾಮಿ ಹಿಂದ್ ತಾಲೂಕು ಅಧ್ಯಕ್ಷ ಟಿ.ಹುಸೇನಸಾಬ್, ಬಸವಕೇಂದ್ರದ ಅಧ್ಯಕ್ಷ ಕರೇಗೌಡ ಕುರುಕುಂದಿ, ನಿವೃತ್ತ ಶಿಕ್ಷಣಾಧಿಕಾರಿ ಎಚ್.ಜಿ.ಹಂಪಣ್ಣ ಇತರರಿದ್ದರು. 
ರಾಯಚೂರು

ಸಮಾನತೆ ಸಂದೇಶ ಸಾರಿದ ರಾಮಧಾನ್ಯ ಚರಿತೆ

ಪ್ರಮುಖ ಮುಖ್ಯಾಂಶಗಳು

  • ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ ಮುಕ್ಕಣ್ಣ ಕರಿಗಾರ ಹೇಳಿಕೆ
  • ಸಿಂಧನೂರು ವಿಶೇಷ ಉಪನ್ಯಾಸ ಕಾರ್ಯಕ್ರಮ
ಸಿಂಧನೂರು: ಕನಕದಾಸರ ಸಾಹಿತ್ಯ, ಚಿಂತನೆಗಳು ಸಾರ್ವಕಾಲಿಕ ಎಂದು ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ ಮುಕ್ಕಣ್ಣ ಕರಿಗಾರ ಹೇಳಿದರು.
ಅನಿಕೇತನ ಪದವಿ ಕಾಲೇಜಿನಲ್ಲಿ ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರದಿಂದ ಹಮ್ಮಿಕೊಂಡಿದ್ದ ಸಂತ ಕವಿ ಕನಕದಾಸರ ಜೀವನ ದರ್ಶನ ಮತ್ತು ರಾಮಧಾನ್ಯ ಚರಿತೆ ವಿಶೇಷ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಹರಿದಾಸರಲ್ಲಿ ಕನಕದಾಸರು ಮಾತ್ರ ಕವಿ ಮತ್ತು ಕೀರ್ತನಕಾರರಾಗಿದ್ದರು. ರಾಮಧಾನ್ಯ ಚರಿತೆಯು ಶ್ರೀಮಂತ, ಬಡವ, ಮೇಲು-ಕೀಳು ಎನ್ನುವ ತಾರತಮ್ಯ ನಿವಾರಿಸುವ ಮತ್ತು ಅಸಮಾನತೆ ತೊಲಗಿಸುವ ನಿಟ್ಟಿನಲ್ಲಿ ಧಾನ್ಯಗಳನ್ನು ಸಾಂಕೇತಿಕವಾಗಿ ಇಟ್ಟುಕೊಂಡು ರಚಿತವಾಗಿರುವ ಅಪರೂಪದ ಕಾವ್ಯವಾಗಿದೆ. ಕುವೆಂಪು ಅವರು ಈ ಕೃತಿಯನ್ನು ಅಣಕು ಮಹಾಕಾವ್ಯ ಎಂದು ಹೇಳಿದ್ದಾರೆ. ಕನಕದಾಸರು ತಮ್ಮ ಬದುಕಿನಲ್ಲಿ ಅನುಭವಿಸಿದ ನೋವುಗಳನ್ನು ಅತ್ಯಂತ ಸೂಕ್ಷ್ಮ ಸಂವೇದನೆಗಳಿಂದ ವ್ಯಕ್ತಪಡಿಸಿದ್ದಾರೆ. ಅವರನ್ನು ಸುತ್ತುವರಿದ ಮತ್ತು ಅಸ್ಮಿತೆಯನ್ನು ನುಂಗುವ ಮೋಸ ಕೂಟದಿಂದ ಮುಕ್ತಗೊಳಿಸಿ ಜನಸಾಮಾನ್ಯರತ್ತ ತರುವುದೇ ಪ್ರಾಧಿಕಾರದ ಉದ್ದೇಶವಾಗಿದೆ ಎಂದರು.
ಉಪನ್ಯಾಸಕ ಡಾ.ಎನ್.ಎಚ್.ಪೂಜಾರ್, ಸಂಸ್ಕಾರ ಭಾರತೀ ಅಧ್ಯಕ್ಷ ವೆಂಕಣ್ಣ ಜೋಷಿ ಮಾತನಾಡಿದರು. ಅನಿಕೇತನ ಕಾಲೇಜು ಅಧ್ಯಕ್ಷ ಡಿ.ಎಚ್.ಕಂಬಳಿ ಅಧ್ಯಕ್ಷತೆ ವಹಿಸಿದ್ದರು. ಪದವಿ ಕಾಲೇಜು ಪ್ರಾಚಾರ್ಯ ತಿಮ್ಮಣ್ಣ ರಾಮತ್ನಾಳ, ಜಮಾಅತೆ ಇಸ್ಲಾಮಿ ಹಿಂದ್ ತಾಲೂಕು ಅಧ್ಯಕ್ಷ ಟಿ.ಹುಸೇನಸಾಬ್, ಬಸವಕೇಂದ್ರದ ಅಧ್ಯಕ್ಷ ಕರೇಗೌಡ ಕುರುಕುಂದಿ, ನಿವೃತ್ತ ಶಿಕ್ಷಣಾಧಿಕಾರಿ ಎಚ್.ಜಿ.ಹಂಪಣ್ಣ, ಚುಸಾಪ ಅಧ್ಯಕ್ಷ ಬೀರಪ್ಪ ಶಂಭೋಜಿ, ಅನಿಕೇತನ ಪಪೂ ಕಾಲೇಜು ಪ್ರಾಚಾರ್ಯ ನಾಗರಾಜ ಮುಕ್ಕುಂದ, ಉಪನ್ಯಾಸಕರಾದ ಡಾ.ರಾಮಕೃಷ್ಣ ಭಂಡಾರಿ, ತಾಯಪ್ಪ, ಅಂಜಲಿ, ಈರಣ್ಣ, ಸುರೇಖಾ, ಸುಭಾಷಿಣಿ, ರಾಧಾ ಇತರರಿದ್ದರು.