ಸಿಂಧನೂರಿನ ಶ್ರೀಮಠ ಸೇವಾ ಟ್ರಸ್ಟ್‌ನ ಹರೇಟನೂರು ಕಾರುಣ್ಯ ನೆಲೆ ವೃದ್ಧಾಶ್ರಮ ಹಾಗೂ ವಯಸ್ಕರ ಬುದ್ಧಿಮಾಂದ್ಯ ಆಶ್ರಮದಲ್ಲಿ ಗುರುವಾರ ಸಿದ್ಧಗಂಗಾ ಮಠದ ಡಾ.ಶಿವಕುಮಾರ ಶ್ರೀಗಳ ಪುಣ್ಯಸ್ಮರಣೋತ್ಸವ ಆಚರಿಸಲಾಯಿತು. ಬಂಗಾರಿಕ್ಯಾಂಪ್ ಸಿದ್ಧಾಶ್ರಮದ ಸದಾನಂದ ಶರಣರು, ಶಾಂಭವಿ ಪುಣ್ಯಾಶ್ರಮದ ಪೀಠಾಧಿಪತಿ ವೀರೇಶ ಯಡಿಯೂರುಮಠ, ದೇವಿ ಆರಾಧಕ ನಾಗರಾಜಸ್ವಾಮಿ, ರುದ್ರಸ್ವಾಮಿ ಹಿರೇಮಠ ಪಗಡದಿನ್ನಿ, ಗಂಗಾಮತ ಸಮಾಜದ ತಾಲೂಕು ಅಧ್ಯಕ್ಷ ರಾಮಣ್ಣ ಜವಳಗೇರಾ ಇದ್ದರು.
ಸಿಂಧನೂರು: ಜಗತ್ತಿನಲ್ಲಿ ದಾಸೋಹಕ್ಕೆ ಹೊಸ ಭಾಷ್ಯ ಬರೆದವರು ಡಾ.ಶಿವಕುಮಾರ ಸ್ವಾಮೀಜಿ ಎಂದು ಬಂಗಾರಿಕ್ಯಾಂಪ್ ಸಿದ್ಧಾಶ್ರಮದ ಸದಾನಂದ ಶರಣರು ಹೇಳಿದರು.
ನಗರದ ಒಳಬಳ್ಳಾರಿ ರಸ್ತೆಯ ಶ್ರೀಮಠ ಸೇವಾ ಟ್ರಸ್ಟ್ ಹರೇಟನೂರು ಕಾರುಣ್ಯ ನೆಲೆ ವೃದ್ಧಾಶ್ರಮ ಹಾಗೂ ವಯಸ್ಕರ ಬುದ್ಧಿಮಾಂದ್ಯ ಆಶ್ರಮದಲ್ಲಿ ಗುರುವಾರ ತ್ರಿವಿಧ ದಾಸೋಹಿಮೂರ್ತಿ ಸಿದ್ಧಗಂಗಾ ಮಠದ ಡಾ.ಶಿವಕುಮಾರ ಸ್ವಾಮೀಜಿ ಪುಣ್ಯಸ್ಮರಣೆ ಹಾಗೂ ನಿಜ ಶರಣ ಅಂಬಿಗರ ಚೌಡಯ್ಯ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಶ್ರೀಗಳು ಹಾಕಿಕೊಟ್ಟ ಮಾರ್ಗದಲ್ಲಿಯೇ ಅನೇಕ ದಾಸೋಹ ಕಾರ್ಯಗಳು ನಡೆಯುತ್ತಿವೆ. ಆಶ್ರಯದ ಜತೆಗೆ ಅನ್ನ, ಜ್ಞಾನದಾಸೋಹವನ್ನು ಮಾನವ ಧರ್ಮಕ್ಕೆ ಉಣ ಬಡಿಸಿ ಜಗತ್ತಿಗೆ ಬೆಳಕಾದರು ಎಂದರು. ಶ್ರೀ ಶಾಂಭವಿ ಪುಣ್ಯಾಶ್ರಮದ ಪೀಠಾಧಿಪತಿ ವೀರೇಶ ಯಡಿಯೂರುಮಠ ಮಾತನಾಡಿದರು. ದೇವಿ ಆರಾಧಕ ನಾಗರಾಜಸ್ವಾಮಿ ಸಾನ್ನಿಧ್ಯ ವಹಿಸಿದ್ದರು.
ಗಂಗಾಮತ ಸಮಾಜದ ತಾಲೂಕು ಉಪಾಧ್ಯಕ್ಷ ಕೋಮಾರೆಪ್ಪ ಜವಳಗೇರಾ, ಪ್ರಮುಖರಾದ ವೀರೇಶ ಕೋರಿ ಉದ್ಬಾಳ ಇ., ಜೆ.ಬಸಪ್ಪ ಕೋರಿ, ಅಮರೇಶ ಹುಡಾ, ವೆಂಕಟೇಶ ನವಲಿ, ವೆಂಕೋಬ, ಅಮರೇಶ ಬಾಗೋಡಿ, ವೀರೇಶ ಒಂಟಿಗೇರ, ಕರಿಯಣ್ಣ ಕಲ್ಲೂರು, ಹೊಸಗೇರಪ್ಪ ಗೊರೇಬಾಳ, ಆಶ್ರಮದ ಕಾರ್ಯಾಧ್ಯಕ್ಷ ಡಾ.ಚನ್ನಬಸಯ್ಯಸ್ವಾಮಿ ಹಿರೇಮಠ, ಶ್ರೀಮಠ ಸೇವಾ ಟ್ರಸ್ಟ್ ಸದಸ್ಯೆ ಸುಜಾತಾ ಹಿರೇಮಠ ಇದ್ದರು.