ಮಾನ್ವಿ ತಾಲೂಕಿನ ಜಾನೇಕಲ್ ಗ್ರಾಮದ ಜೀವೈಕ್ಯ ವಿಜಯರುದ್ರ ಮಹಾಸ್ವಾಮಿಗಳ ಮಠದಲ್ಲಿ ಏರ್ಪಡಿಸಿದ್ದ ಪುರಾಣ ಪ್ರವಚನ ಕಾರ್ಯಕ್ರಮವನ್ನು ಕಿಲ್ಲೇ ಬೃಹನ್ಮಠದ ಶಾಂತಮಲ್ಲ ಶಿವಾಚಾರ್ಯರು ಉದ್ಘಾಟಿಸಿದರು.
ಮಾನ್ವಿ: ಜಾನೇಕಲ್ ಗ್ರಾಮದಲ್ಲಿ ಜೀವೈಕ್ಯರಾದ ವಿಜಯರುದ್ರ ಸ್ವಾಮಿಗಳು ಭಕ್ತರನ್ನು ಉದ್ಧಾರ ಮಾಡುತ್ತಿದ್ದಾರೆ. ಅನೇಕ ಲೀಲೆಗಳನ್ನು ತೋರುತ್ತ ಧರ್ಮ ಮಾರ್ಗದಲ್ಲಿ ನಡೆಯುವಂತೆ ಅನುಗ್ರಹ ಮಾಡುತ್ತ ಬಂದಿದ್ದಾರೆ ಎಂದು ರಾಯಚೂರಿನ ಕಿಲ್ಲೇ ಬೃಹನ್ಮಠದ ಶಾಂತಮಲ್ಲ ಶಿವಾಚಾರ್ಯರು ಹೇಳಿದರು.
ಜಾನೇಕಲ್ ಗ್ರಾಮದ ಜೀವೈಕ್ಯ ವಿಜಯರುದ್ರ ಸ್ವಾಮಿಗಳ ಮಠದಲ್ಲಿ ಸ್ವಾಮಿಗಳ 11ನೇ ವರ್ಷದ ಜಾತ್ರೆ ಅಂಗವಾಗಿ ಏರ್ಪಡಿಸಿದ್ದ ಎಮ್ಮಿಗನೂರು ಜಡೆಸಿದ್ಧೇಶ್ವರ ಸ್ವಾಮಿ ಪುರಾಣ ಪ್ರವಚನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಕರೆಗುಡ್ಡ ಮಹಾಂತೇಶ್ವರ ಮಠದ ಮಹಾಂತಲಿಂಗ ಶ್ರೀಗಳು ಆಶೀರ್ವಚನ ನೀಡಿದರು. ಎಮ್ಮಿಗನೂರು ಜಡೆಸಿದ್ಧೇಶ್ವರ ಸ್ವಾಮಿ ಪುರಾಣ ಪ್ರವಚನವನ್ನು ಖರಾಬದಿನ್ನಿ ದೊಡ್ಡ ಬಸಯ್ಯಶಾಸ್ತ್ರಿ ಹಾಗೂ ಶರಣಯ್ಯಸ್ವಾಮಿ ಸೋಮನಾಳ ಸಂಗೀತ, ಆರ್.ಪಿ. ಮಲ್ಲಿನಾಥ ಸ್ವಾಮಿ ತಬಲಾ ಸಾಥ್ ನೀಡಿದರು.
ಶ್ರೀಮಠದ ಸೂಗೂರಯ್ಯಸ್ವಾಮಿ , ಶರಣಯ್ಯಸ್ವಾಮಿ, ಗ್ರಾಪಂ ಸದಸ್ಯರಾದ ಮೌನೇಶಗೌಡ, ಕಲ್ಯಾಣಬಸವ, ಪ್ರಮುಖರಾದ ಬಸವರಾಜಪ್ಪ ಹೊಸಗೌಡರು, ಅಮರೇಗೌಡ ಪೊಪಾ, ರಾಮನಗೌಡ ಪೊಪಾ, ನಿಲ್ಲಪ್ಪಗೌಡ ಮಾಲಿಪಾಟೀಲ್, ದೊಡ್ಡಬಸವನಗೌಡ ಬಲಟಗಿ, ರುದ್ರಗೌಡ ಪೊಪಾ, ಮಲ್ಲಿಕಾರ್ಜುನ ಹೊಸಗೌಡರು, ಅಯ್ಯಣ್ಣ ಕುಂಬರ , ಬಿ.ಶಂಕರಗೌಡ, ಅಮರೇಶ ನಾಯಕ ಇತರರಿದ್ದರು.