ಲಿಂಗಸುಗೂರು ಬಸ್ ನಿಲ್ದಾಣ ಸರ್ಕಲ್‌ನಲ್ಲಿ ದಲಿತ ಸಂಘಟನೆ ಮುಖಂಡರು ಬೃಹತ್ ಪ್ರತಿಭಟನೆ ನಡೆಸಿದರು. ಮುಖಂಡರಾದ ಹನಮಂತಪ್ಪ ವೆಂಕಟಾಪೂರು, ಮಲ್ಲಯ್ಯ ಬುಳ್ಳಾ, ಶರಣಪ್ಪ ಕಟ್ಟಿಮನಿ, ಆಜಪ್ಪ ಕರಡಕಲ್, ಮೋಹನ ಗೋಸ್ಲೆ, ಲಕ್ಕಪ್ಪ ನಾಗರಾಳ, ಹನಮಂತಪ್ಪ ಕುಣೆಕೆಲ್ಲೂರು, ಬಸವರಾಜ ಮುದಗಲ್ಲ ಇತರರಿದ್ದರು.
- ದಲಿತ
- ಸಂಘಟನೆಗಳಿಂದ
- ಪ್ರತಿಭಟನೆ
ಲಿಂಗಸುಗೂರು: ಹುಬ್ಬಳ್ಳಿ ಇನಾಂ ವೀರಾಪೂರ ಗ್ರಾಮದ ಗರ್ಭಿಣಿ ಮಾನ್ಯಳ ಹತ್ಯೆ ಮತ್ತು ತಾಲೂಕಿನ ಹಟ್ಟಿ ಚಿನ್ನದ ಗಣಿಸ್ಟಾಫ್ ನರ್ಸ್ ಕು.ಜ್ಯೋತಿ ಹತ್ಯೆ ಖಂಡಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ, ಮಾದಿಗ ಮೀಸಲಾತಿ ಹೋರಾಟ ಸಮಿತಿ ಜಾಗೃತಿ ಮಹಿಳಾ ಸಂಘಟನೆಗಳಿಂದ ಬುಧವಾರ ಪಟ್ಟಣದ ಬಸ್ ನಿಲ್ದಾಣ ಸರ್ಕಲ್‌ನಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು.
ಪರಿಶಿಷ್ಟ ಜಾತಿಯ ಯುವಕನನ್ನು ಪ್ರೀತಿಸಿ, ಮದುವೆಯಾಗಿದ್ದಾಳೆಂದು ಮಾನ್ಯ ಅವರ ಮನೆತನದ ಮರ್ಯಾದೆಗೆ ಕುಂದು ತಂದಳೆಂದು ಸ್ವಂತ ಮಗಳನ್ನೇ ತಂದೆ ಹತ್ಯೆ ಮಾಡಿರುವುದು ಇಡೀ ನಾಗರಿಕ ಸಮಾಜ ತಲೆ ತಗ್ಗಿಸುವಂಥ ಮಾಡಿದೆ. ಈ ಮೊದಲು ಉತ್ತರ ಪ್ರದೇಶ, ಬಿಹಾರ, ಹರಿಯಾಣದಂತಹ ರಾಜ್ಯಗಳಲ್ಲಿ ನಡೆಯುತ್ತಿದ್ದ ಮರ್ಯಾದಾ ಹತ್ಯೆ ದಕ್ಷಿಣ ಭಾರತಕ್ಕೂ ಕಾಲಿಟ್ಟಿರುವುದು ಆತಂಕಕಾರಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ತಾಲೂಕಿನ ಹಟ್ಟಿಚಿನ್ನದಗಣಿಯ ಸ್ಟಾಫ್ ನರ್ಸ್ ಕು.ಜ್ಯೋತಿಯನ್ನು ಕೊಲೆ ಮಾಡಿ ಪಾಮನಕಲ್ಲೂರು ಮುಖ್ಯ ರಸ್ತೆಯಲ್ಲಿ ನಿಂತಿದ್ದ ರೋಡ್ ರೂಲರ್‌ಗೆ ನೇಣು ಬಿಗಿಲಾಗಿದೆ ಎಂಬ ಬಲವಾದ ಆರೋಪ ಕೇಳಿ ಬಂದಿದೆ. ಇಂಥಾ ಘಟನೆಗಳಿಗೆ ಕಾರಣರಾದ ತಪ್ಪಿತಸ್ಥರನ್ನು ಗಲ್ಲು ಶಿಕ್ಷೆಗೆ ಗುರಿಪಡಿಸಬೇಕು. ಈ ಎರಡೂ ದಲಿತ ಕುಟುಂಬಗಳಿಗೆ ಸೂಕ್ತ ರಕ್ಷಣೆ ನೀಡಬೇಕೆಂದು ಎಂದು ಆಗ್ರಹಿಸಿದರು.
ದಲಿತ ಸಂಘಟನೆ ಮುಖಂಡರಾದ ನಾಗರಾಜ ಯರಡೋಣ, ಹುಸೇನಪ್ಪ ದೊಡ್ಡಮನಿ, ಬಸವರಾಜ ಕುಣೆಕೆಲ್ಲೂರು, ಮೌನೇಶ ಮಸ್ಕಿ, ನಾಗರಾಜ ಮುಂದಿನಮನಿ ಇತರರಿದ್ದರು.