ಮುದಗಲ್‌ನ ರಾಮಲಿಂಗೇಶ್ವರ ದೇವಸ್ಥಾನದಲ್ಲಿ ತಾಲೂಕು ಮಟ್ಟದ ಮಹಿಳಾ ವಿಚಾರಗೋಷ್ಠಿಯನ್ನು ಗ್ರಾಮೀಣಾಭಿವೃಧ್ಧಿ ಸಂಸ್ಥೆಯ ಪ್ರಾದೇಶಿಕ ನಿರ್ದೇಶಕ ಜೆ.ಚಂದ್ರಶೇಖರ ಉದ್ಘಾಟಿಸಿದರು. ಉಪನ್ಯಾಸಕಿ ಶರಣ್ಯಾ ಹರೀಶ ಅಂಗಡಿ, ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷೆ ಶಶಿಕಲಾ ಭೋವಿ, ಉಪಾಧ್ಯಕ್ಷೆ ತೋಟಮ್ಮ ಪ್ರಮುಖರಾದ ಗ್ಯಾನನಗೌಡ ನಾಗಲಾಪುರ, ಆಂಜನೇಯ ಇತರರಿದ್ದರು. 
ರಾಯಚೂರು

ಮಹಿಳಾ ಸಬಲೀಕರಣಕ್ಕೆ ಸಂಸ್ಥೆ ಬದ್ಧ

ಪ್ರಮುಖ ಮುಖ್ಯಾಂಶಗಳು

  • ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ
  • ಮಹಿಳಾ ಸಬಲೀಕರಣ
  • ಬಿ.ಸಿ.ಟ್ರಸ್ಟ್

ಮಹಿಳಾ ಸಬಲೀಕರಣಕ್ಕೆ ಸಂಸ್ಥೆ ಬದ್ಧ

ಮುದಗಲ್: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಮಹಿಳಾ ಸಬಲೀಕರಣಕ್ಕೆ ಬದ್ಧವಾಗಿದೆ ಎಂದು ಯೋಜನೆಯ ಪ್ರಾದೇಶಿಕ ನಿರ್ದೇಶಕ ಜೆ.ಚಂದ್ರಶೇಖರ ಹೇಳಿದರು.
ಪಟ್ಟಣದ ಐತಿಹಾಸಿಕ ಶ್ರೀ ರಾಮಲಿಂಗೇಶ್ವರ ದೇವಸ್ಥಾನದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ಲಿಂಗಸುಗೂರು ವತಿಯಿಂದ ಮಹಿಳಾ ಜ್ಞಾನ ವಿಕಾಸ ಕಾರ್ಯಕ್ರಮದಡಿ ಬುಧವಾರ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ಮಹಿಳಾ ವಿಚಾರಗೋಷ್ಠಿಯಲ್ಲಿ ಮಾತನಾಡಿದರು.
ರಾಜ್ಯಾದ್ಯಂತ 58 ಲಕ್ಷ ಕುಟುಂಬಗಳು, 3.5 ಕೋಟಿ ಜನರ ಸದಸ್ಯತ್ವವನ್ನು ಸಂಸ್ಥೆ ಹೊಂದಿದೆ. ಮಹಿಳಾ ಸದಸ್ಯರಿಗೆ ನೆರವು ನೀಡಿ ಸಬಲೀಕರಣದಲ್ಲಿ ಮುಂಚೂಣಿಯಲ್ಲಿದ್ದೇವೆ. ಗ್ರಾಮಾಭಿವೃದ್ಧಿ ಸಂಸ್ಥೆ ಸ್ವ ಸಹಾಯ ಸಂಘಗಳ ಮೂಲಕ ವ್ಯವಹಾರ ಮಾಡದೆ ಸಮಾಜ ಸೇವೆ ಮಾಡುತ್ತಿದೆ.
ರಾಜ್ಯದಲ್ಲಿ 1.17 ಲಕ್ಷ ವಿದ್ಯಾರ್ಥಿಗಳಿಗೆ ವಾರ್ಷಿಕ ಸ್ಕಾಲರ್‌ಷಿಪ್ ನೀಡಿ ಮಕ್ಕಳ ವಿದ್ಯಾಭ್ಯಾಸಗಳಿಗೆ ಪ್ರೋತ್ಸಾಹಿಸಲಾಗುತ್ತಿದೆ. ಜ್ಞಾನದೀಪ ಯೋಜನೆಯಡಿ ಅಗತ್ಯವಿದ್ದಲ್ಲಿ ಶಾಲೆಗಳಿಗೆ ಅತಿಥಿ ಶಿಕ್ಷಕರನ್ನು ನಿಯೋಜಿಸಲಾಗುತ್ತಿದೆ. ಮನೆಯಲ್ಲಿಯೇ ಮಕ್ಕಳಿಗೆ ಸಂಸ್ಕಾರ, ಸಂಸ್ಕೃತಿ ನೀಡಿ ಸಮಾಜಕ್ಕೆ ಒಳ್ಳೆಯ ಪ್ರಜೆಯನ್ನು ನೀಡಬೇಕು ಎಂದರು.
ಉಪನ್ಯಾಸಕಿ ಶರಣ್ಯಾ ಹರೀಶ ಅಂಗಡಿ, ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷೆ ಶಶಿಕಲಾ ಭೋವಿ, ಉಪಾಧ್ಯಕ್ಷೆ ತೋಟಮ್ಮ, ವೀರಶೈವ ಸಮುದಾಯದ ಅಧ್ಯಕ್ಷ ಸುರೇಂದ್ರಗೌಡ ಪಾಟೀಲ್ ಆದಾಪುರ ಇತರರಿದ್ದರು.