ಮುದಗಲ್ ಪುರಸಭೆಯಲ್ಲಿ ವ್ಯಸನಮುಕ್ತ ದಿನ ಆಚರಿಸಲಾಯಿತು. 
ರಾಯಚೂರು

ವ್ಯಸನಗಳಿಂದ ಕುಟುಂಬದ ಮೇಲೆ ದುಷ್ಪರಿಣಾಮ

ಮುದಗಲ್: ಯುವಜನರು ಯಾವುದೇ ರೀತಿಯ ವ್ಯಸನಗಳಿಗೆ ಬಲಿಯಾಗದೆ ಆರೋಗ್ಯಕರ ಜೀವನಶೈಲಿ ಅಳವಡಿಸಿಕೊಳ್ಳಬೇಕೆಂದು ಪುರಸಭೆ ಮುಖ್ಯಾಧಿಕಾರಿ ಪ್ರವೀಣಕುಮಾರ ಬೋಗಾರ ಹೇಳಿದರು.

ಪುರಸಭೆಯಲ್ಲಿ ವ್ಯಸನಮುಕ್ತ ದಿನಾಚರಣೆ ಕಾರ್ಯಕ್ರಮದಲ್ಲಿ ಶನಿವಾರ ಮಾತನಾಡಿದರು. ಮದ್ಯಪಾನ, ತಂಬಾಕು ಹಾಗೂ ಇತರ ಮಾದಕ ವ್ಯಸನಗಳು ಆರೋಗ್ಯ, ಕುಟುಂಬ ಮತ್ತು ಸಮಾಜದ ಮೇಲೆ ದುಷ್ಪರಿಣಾಮ ಬೀರುತ್ತವೆ ಎಂದು ತಿಳಿಸಿದರು. ಡಾ.ಮಹಾಂತ ಸ್ವಾಮೀಜಿ ಭಾವಚಿತ್ರಕ್ಕೆ ಸಮುದಾಯ ಸಂಘಟನಾಧಿಕಾರಿ ಚನ್ನಮ್ಮ ಪೂಜೆ ಸಲ್ಲಿಸಿದರು.
ವ್ಯಸನದ ದುಷ್ಪರಿಣಾಮಗಳ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಪ್ರತಿಜ್ಞಾವಿಧಿಯನ್ನು ಆರೋಗ್ಯ ಅಧಿಕಾರಿ ಆರೀಫುನ್ನಿಸಾ ಬೇಗಂ ಬೋಧಿಸಿದರು. ಪಂಚಮಸಾಲಿ ಸಮಾಜದ ಜಿಲ್ಲಾಧ್ಯಕ್ಷ ಮಹಾಂತೇಶ ಪಾಟೀಲ್, ಪ್ರಮುಖರಾದ ಲಿಂಗಪ್ಪ ಹಣಗಿ, ಶಿವಾನಂಧ ಸುಂಕದ, ಶಿವಕುಮಾರ ಪಾಟೀಲ್, ವಿಶ್ವನಾಥ ಹಣಗಿ, ಮಹೇಶ ವಸ್ತ್ರದ, ಮಹಾಂತೇಶ ಅಕ್ಷತಿ, ಮಲ್ಲಪ್ಪ ಮಾಟೂರು, ಉದಯಕುಮಾರ ಕಮ್ಮಾರ, ವ್ಯವಸ್ಥಾಪಕ ಜಗದೀಶ, ಸಿಬ್ಬಂದಿ ಅಂತೋನಿ ರಾಜ್, ನಿಸಾರ್, ಜಿಲಾನಿ ಪಾಷಾ ಇತರರಿದ್ದರು.
ಉಪ ತಹಸಿಲ್ ಕಚೇರಿ, ಸಮುದಾಯ ಆರೋಗ್ಯ ಕೇಂದ್ರ, ರೈತಸಂಪರ್ಕ ಕೇಂದ್ರ, ಶಾಲೆ, ಕಾಲೇಜುಗಳಲ್ಲಿ ವ್ಯಸನಮುಕ್ತ ದಿನ ಆಚರಿಸಲಾಯಿತು.