ತೋರಣದಿನ್ನಿ ಮುಖ್ಯರಸ್ತೆ ಕಾಮಗಾರಿಗೆ ಕಳಪೆ ಮಣ್ಣು ಬಳಸಿರುವುದು.
ಕವಿತಾಳ: ಸಮೀಪದ ತೋರಣದಿನ್ನಿಯ ಮುಖ್ಯರಸ್ತೆ ಕಾಮಗಾರಿಗೆ ಕಳಪೆ ಮಣ್ಣು ಬಳಕೆ ಮಾಡಲಾಗಿದೆ ಎಂಬ ಆರೋಪ ಕೇಳಿ ಬಂದಿದೆ.
ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಿಂದ ಮಾಡುತ್ತಿರುವ ಕಾಮಗಾರಿಗೆ ಮಣ್ಣು ಬಳಸದೆ ಕೆಂಪು ಮಿಶ್ರಿತ ಮಳೆಗೆ ಹಾಳಾಗುವ ಕಳಪೆ ಮಣ್ಣು ಬಳಸಲಾಗಿದೆ. ಈ ಮೊದಲು ಮಸ್ಕಿ ಕ್ರಾಸ್‌ನಿಂದ ಗ್ರಾಮದ ವರೆಗೆ ರಸ್ತೆಯನ್ನು ಮಾಡಲಾಗಿತ್ತು. ಕಳಪೆ ಕಾಮಗಾರಿಯಿಂದ ರಸ್ತೆಯ ತುಂಬ ತಗ್ಗುಗಳು ಬಿದ್ದಿದ್ದವು. ಆರು ತಿಂಗಳಿನಿಂದಲು ಸಾರ್ವಜನಿಕರು ರಸ್ತೆ ದುರಸ್ತಿ ಕಾಮಗಾರಿ ಮಾಡಬೇಕು ಎಂದು ಒತ್ತಾಯ ಮಾಡಲಾಯಿತು. ಈಗ ಕಳಪೆ ಮಣ್ಣಿನಿಂದ ರಸ್ತೆಯನ್ನು ಮಾಡಲಾಗುತ್ತಿದೆ. ಗುಣಮಟ್ಟದ ರಸ್ತೆಯನ್ನು ಮಾಡಬೇಕು ಎಂದು ಗ್ರಾಮಸ್ಥರಾದ ಹನುಮಂತ ನಾಯಕ, ಶರಣಪ್ಪ, ರವಿಕುಮಾರ, ಶರಣಬಸವ ಒತ್ತಾಯಿಸಿದ್ದಾರೆ.
ಕಾಮಗಾರಿಯನ್ನು ಗುಣಮಟ್ಟದಿಂದ ಮಾಡಲಾಗುವುದು. ಕಳಪೆಯಾಗಿದ್ದರೆ ಕ್ರಮ ಕೈಗೊಳ್ಳಲಾಗುವುದು.