ರಾಯಚೂರಿನ ಅಂಗಡಿಯೊಂದರಲ್ಲಿ ಕೃಷಿ ಸಂಬಂಧಿತ ಪರಿಕರಗಳ ಮಾರಾಟಕ್ಕೆ ಇಟ್ಟಿರುವುದು.
ರಾಯಚೂರು ಮಧ್ಯ ಪ್ರಾಚ್ಯದಲ್ಲಿ ಯುದ್ಧ ಪ್ರಾರಂಭದಿಂದಲು ಜಿಲ್ಲೆಯಲ್ಲಿ ಒಂದಲ್ಲ. ಒಂದು ಸಮಸ್ಯೆ ಎದುರಾಗುತ್ತಿದ್ದು, ಗ್ಯಾಸ್ ಸಿಲಿಂಡರ್, ಪೆಟ್ರೋಲ್,ಎಲ್‌ಪಿಜಿ ಗ್ಯಾಸ್‌ನಂತರ ಇದಿಗಾ ಕೃಷಿ ಪರಿಕರಿಗಳಿಗೆ ಭಾರಿ ಪೆಟ್ಟು ಬಿದ್ದಿದ್ದು, ಯುದ್ಧ ಪೀಡಿತ ಪ್ರದೇಶಗಳಿಂದ ಕೃಷಿ ಯಂತ್ರೋಪಕರಣಗಳ ಉತ್ಪಾದನೆಗೆ ಅಗತ್ಯವಿರುವ ಕಚ್ಚಾ ವಸ್ತುಗಳು ಮತ್ತು ಬಿಡಿ ಭಾಗಗಳ ಆಮದು ಸ್ಥಗಿತಗೊಂಡಿರುವುದರಿಂದ ಯಂತ್ರಗಳ ದುರಸ್ತಿಗೆ ಅಡಚಣೆಯಾಗಿದೆ.
ಇರಾನ್ ಇಸ್ರೆಲ್ ಯುದ್ದದ ಸೈಡ್ ಎಫೆಕ್ಟ್‌ನಿಂದ ಕೃಷಿ ಉಪಕರಣ, ಕೃಷಿ ಸಂಬಂಧಿತ ವಾಹನಗಳ ಸ್ಪೇರ್ ಪಾರ್ಟ್ಸ್, ಟೈಯರ್ ವ್ಯಾಪಾರಕ್ಕೆ ಪೆಟ್ಟು ಬಿದ್ದಿದ್ದು, ಗ್ಯಾಸ್ ಸಿಲಿಂಡರ್ ಕೊರತೆ ಹಾಗೂ ಕಚ್ಚಾ ವಸ್ತುಗಳ ಬೆಲೆ ಏರಿಕೆ ಹಿನ್ನೆಲೆ ಆಟೋ ಮೊಬೈಲ್ ಹಾಗೂ ಸ್ಪೇರ್ ಪಾರ್ಟ್ಸ್ ವ್ಯಾಪಾರ ತೀವ್ರವಾಗಿ ಕುಸಿತವಾಗಿದೆ. ಕಚ್ಚಾವಸ್ತುಗಳ ಬೆಲೆ ಏರಿಕೆ, ಅಲಭ್ಯತೆ ಹಾಗೂ ಗ್ಯಾಸ್ ಸಿಲಿಂಡರ್ ಸಮಸ್ಯೆಯಿಂದ ಅಂಗಡಿಗಳಿಗೆ ಸ್ಟಾಕ್ ಬಾರದೆ ಹಳೆಯ ಸ್ಟಾಕ್‌ನ್ನಷ್ಟೇ ವ್ಯಾಪಾರಿಗಳು ಮಾರಾಟ ಮಾಡುತ್ತಿದ್ದಾರೆ.
ಬೇಸಿಗೆಯಲ್ಲಿಯೇ ವ್ಯಾಪಾರ ಹೆಚ್ಚು
ಪ್ರತಿ ವರ್ಷ ಬೇಸಿಗೆಯಲ್ಲಿಯೇ ಕೃಷಿ ಪರಿಕರಗಳು ಹಾಗೂ ಸಣ್ಣ ಪ್ರಮಾಣದ ಗೂಡ್ಸ್ ವಾಹನಗಳಿಗೆ ಬೇಕಾಗುವ ಟೈಯರ್ ಹಾಗೂ ಕೃಷಿ ಪರಿಕರಗಳು ಹೆಚ್ಚಿನ ಪ್ರಮಾಣದಲ್ಲಿ ಮಾರಾಟವಾಗುತ್ತವೆ. ಆದರೆ ಗ್ಯಾಸ್ ಸಮಸ್ಯೆಯಿಂದ ಸ್ಪೇರ್ ಪಾರ್ಟ್ಸ್‌ಗೆ ತುಕ್ಕುರಹಿತ ಪೇಂಟಿಂಗ್ ಮಾಡಲು ಸಂಕಷ್ಟ ಎದುರಾಗಿದ್ದು, ಕೃಷಿ ಸಲಕರಣೆಗಳು ಮಾರುಕಟ್ಟೆಗೆ ಬರುತ್ತಿಲ್ಲ. ಕೃಷಿ ಚಟುವಟಿಕೆಗಳಿಗೆ ಹೆಚ್ಚು ಬಳಕೆಯಾಗುವ ವಾಹನಗಳ ವೀಲ್ ರಿಮ್, ಜಾಕ್‌ಗಳು, ಹೈಡ್ರಾಲಿಕ್ ಜಾಕ್ಸ್ ,ಮೆಕಾನಿಕ್ ಜಾಕ್ಸ್ , ನೇಗಿಲು ರಾಡ್‌ಗಳು ಟ್ರಾಲಿ ಹುಕ್ಸ್ , ಟಿಲ್ಲರ್ ಪಾಯಿಂಟ್ ಸೆಟ್ಸ್ ಸೇರಿ ಹಲವಾರು ಉಪಕರಣಗಳು ಹಾಗೂ ಬಿಡಿಭಾಗಗಳ ಸ್ಟಾಕ್ ಬರದೆ ವ್ಯಾಪಾರ ಕುಂಠಿತವಾಗಿದೆ. ಇನ್ನೂ ಹೊಸ ಸ್ಟಾಕ್ ಬಂದಾಗ ಬೆಲೆ ಏರಿಕೆ ಬಿಸಿ ರೈತರು, ವಾಹನಗಳ ಮಾಲೀಕರು, ವ್ಯಾಪಾರಿಗಳಿಗೆ ತಟ್ಟುವ ಆತಂಕ ಎದುರಾಗಿದೆ ಅಂತ ಆಟೋಮೊಬೈಲ್ ಅಂಗಡಿ ಮಾಲೀಕರು ಅಳಲು ವ್ಯಕ್ತಪಡಿಸಿದ್ದಾರೆ.