ಸಿಂಧನೂರಿನಲ್ಲಿ ತಹಸಿಲ್ ಕಚೇರಿಯ ಶಿರಸ್ತೇದಾರ್ ಅಂಬಾದಾಸ್‌ಗೆ ಬಿಜೆಪಿ ಮುಖಂಡರು ಮನವಿ ಸಲ್ಲಿಸಿದರು. ಮುಖಂಡರಾದ ಕೆ.ಕರಿಯಪ್ಪ, ಎಂ.ದೊಡ್ಡಬಸವರಾಜ, ಅಮರೇಶ ರೈತನಗರಕ್ಯಾಂಪ್, ಸಿದ್ದರಾಮೇಶ ಮನ್ನಾಪುರ, ಯಂಕೋಬ ರಾಮತ್ನಾಳ ಇತರರಿದ್ದರು.
ದ್ವೇಷಭಾಷಣ ತಡೆ ವಿಧೇಯಕ ಜಾರಿ ಬೇಡ
ಸಿಂಧನೂರು: ರಾಜ್ಯದಲ್ಲಿ ದ್ವೇಷಭಾಷಣ ಮತ್ತು ದ್ವೇಷ ಅಪರಾಧಗಳ (ಪ್ರತಿಬಂಧಕ) ತಡೆ ವಿಧೇಯಕ 2025 ವಿರೋಧಿಸಿ ಬಿಜೆಪಿ ಮುಖಂಡರು ಗುರುವಾರ ನಗರದಲ್ಲಿ ಪ್ರತಿಭಟನೆ ನಡೆಸಿ ತಹಸಿಲ್ ಕಚೇರಿಯ ಶಿರಸ್ತೇದಾರ್ ಅಂಬಾದಾಸ್‌ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.
ರಾಜ್ಯ ಸರ್ಕಾರ ಜಾರಿಗೆ ತರಲು ಮುಂದಾಗಿರುವ ವಿಧೇಯಕ ನಾಗರಿಕರ ಹಕ್ಕನ್ನು ಕಸಿಯುವ ಯತ್ನವಾಗಿದೆ. ಸಂವಿಧಾನದ ಅಭಿವ್ಯಕ್ತಿ ಮತ್ತು ವಾಕ್ ಸ್ವಾತಂತ್ರ್ಯ ಹತ್ತಿಕ್ಕಲು ಮುಂದಾಗಿರುವುದು ಖಂಡನೀಯ.
ಡಾ.ಅಂಬೇಡ್ಕರ್ ಸಂವಿಧಾನದ ಮೂಲಕ ಸಾರ್ವಜನಿಕರಿಗೆ ನೀಡಿದ ಅವಕಾಶವನ್ನು ಕಾಂಗ್ರೆಸ್ ಸರ್ಕಾರ ಕಿತ್ತುಕೊಳ್ಳುತ್ತಿದೆ. ಸರ್ಕಾರದ ವಿರುದ್ಧ ಮಾತನಾಡದಂತೆ ಬಾಯಿಮುಚ್ಚಿಸುವ ಪ್ರಯತ್ನ ನಡೆದಿದೆ. ಯಾವುದೇ ಕಾರಣಕ್ಕೂ ವಿಧೇಯಕವನ್ನು ಜಾರಿಗೊಳಿಸಬಾರದು ಎಂದು ಒತ್ತಾಯಿಸಿದರು.
ಬಿಜೆಪಿ ನಗರ ಘಟಕ ಅಧ್ಯಕ್ಷ ಸಿದ್ದರಾಮೇಶ ಮನ್ನಾಪುರ, ಗ್ರಾಮೀಣ ಘಟಕದ ಅಧ್ಯಕ್ಷ ಯಂಕೋಬ ರಾಮತ್ನಾಳ, ಪ್ರಮುಖರಾದ ಕೆ.ಕರಿಯಪ್ಪ, ಎಂ.ದೊಡ್ಡಬಸವರಾಜ, ಅಮರೇಶ ರೈತನಗರಕ್ಯಾಂಪ್, ಲಿಂಗರಾಜ ಹೂಗಾರ,ಸಿದ್ದಲಿಂಗಯ್ಯಸ್ವಾಮಿ ವಕೀಲ, ಪರಮೇಶದಪ್ಪ ಆದಿಮನಿ, ಮುತ್ತು ಬರ್ಸಿ, ರಾಘವೇಂದ್ರ, ಅಕ್ಷಯಗೌಡ, ವೆಂಕಟೇಶ ಬಾದರ್ಲಿ, ರವಿ ರಾಠೋಡ ಇತರರಿದ್ದರು.