ಸಿರವಾರ ಪಟ್ಟಣ ಪಂಚಾಯಿತಿ ಕಚೇರಿಯಲ್ಲಿ ಅಮರಶಿಲ್ಪಿ ಜಕಣಾಚಾರಿ ಜಯಂತಿ ಆಚರಿಸಲಾಯಿತು. ಅಧ್ಯಕ್ಷ ವೈ.ಭೂಪನಗೌಡ, ಉಪಾಧ್ಯಕ್ಷೆ ಲಕ್ಷ್ಮೀ ಆದೆಪ್ಪ, ಸದಸ್ಯರಾದ ಕೃಷ್ಣ ನಾಯಕ, ಮೌಲಸಾಬ ವರ್ಚಸ್ ಇತರರಿದ್ದರು.
- ಪಪಂ ಅಧ್ಯಕ್ಷ ವೈ.ಭೂಪನಗೌಡ ಅಭಿಪ್ರಾಯ
- ಸಿರವಾರ ಅಮರಶಿಲ್ಪಿ ಜಕಣಾಚಾರಿ ಜಯಂತಿ
ಸಿರವಾರ: ಇಲ್ಲಿನ ಪಟ್ಟಣ ಪಂಚಾಯಿತಿ ಹಾಗೂ ಮುಖ್ಯ ರಸ್ತೆಯಲ್ಲಿ ಗುರುವಾರ ಅಮರಶಿಲ್ಪಿ ಜಕಣಾಚಾರಿ ಜಯಂತಿ ಆಚರಿಸಲಾಯಿತು.
ಪಪಂನಲ್ಲಿ ಅಧ್ಯಕ್ಷ ವೈ.ಭೂಪನಗೌಡ ಮಾತನಾಡಿ, ಜಕಣಾಚಾರಿ ಅವರು ಕರ್ನಾಟಕದ ಒಬ್ಬ ಪ್ರಸಿದ್ಧ ಶಿಲ್ಪಿ. ನಮ್ಮ ಶಿಲ್ಪಕಲೆ ಭಾರತೀಯ ಸಂಸ್ಕೃತಿಯ ಪ್ರತೀಕವಾಗುವಂತೆ ಮಾಡಿದರು. ಬೇಲೂರು, ಹಳೇಬೀಡು ಹಾಗೂ ವಿವಿಧೆಡೆ ಅವರ ಶಿಲ್ಪಕಲೆ ನೋಡಿದರೆ ಕಲ್ಲುಗಳಿಗೆ ಜೀವ ತುಂಬಿದ ಮಹನೀಯ ಎಂದರು.
ಪಪಂ ಉಪಾಧ್ಯಕ್ಷೆ ಲಕ್ಷ್ಮೀ ಆದೆಪ್ಪ, ಸದಸ್ಯರಾದ ಕೃಷ್ಣ ನಾಯಕ, ಮೌಲಸಾಬ ವರ್ಚಸ್, ಮುಖಂಡರಾದ ಮಲ್ಲಪ್ಪ, ಪ್ರಭುಸ್ವಾಮಿ, ಮಲ್ಲಿಕಾರ್ಜುನ್, ಸುರೇಶ, ರಾಜ್ ಪತ್ತಾರ್, ಕಾಳಪ್ಪ, ಕಾಶಿಪತಿ ಇತರರಿದ್ದರು.