ಬಂಗಾರಿ ಕ್ಯಾಂಪ್‌ನಲ್ಲಿ ಶ್ರೀಶೈಲ ಪೀಠದ ಡಾ.ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯರ ಅಡ್ಡಪಲ್ಲಕ್ಕಿ ಉತ್ಸವ ಅದ್ದೂರಿಯಾಗಿ ಜರುಗಿತು. 
ರಾಯಚೂರು

ಶ್ರೀಶೈಲ ಶ್ರೀಗಳ ಅಡ್ಡಪಲ್ಲಕ್ಕಿ ಉತ್ಸವ ಅದ್ದೂರಿ

ಗೊರೇಬಾಳ: ಸಮೀಪದ ರವಡಕುಂದಾ ಗ್ರಾಪಂ ವ್ಯಾಪ್ತಿಯ ಬಂಗಾರಿ ಕ್ಯಾಂಪ್‌ನ ಸಿದ್ಧಾಶ್ರಮದಲ್ಲಿ ಭಕ್ತ ಸದನ ಉದ್ಘಾಟನೆ ಹಾಗೂ ಧರ್ಮಸಭೆ ನಿಮಿತ್ತ ಸೋಮವಾರ ಸಂಜೆ ಶ್ರೀಶೈಲ ಪೀಠದ ಜಗದ್ಗುರು ಶ್ರೀ ಡಾ.ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯರ ಅಡ್ಡಪಲ್ಲಕ್ಕಿ ಉತ್ಸವ ಅದ್ದೂರಿಯಾಗಿ ಜರುಗಿತು.
 ಬೆಳಗ್ಗೆ ಬ್ರಾಹ್ಮೀ ಮುಹೂರ್ತದಲ್ಲಿ ಶ್ರೀ ಗಣೇಶ, ಗಾಯತ್ರಿ, ರೇಣುಕರ ಮೂರ್ತಿಗಳಿಗೆ ರುದ್ರಾಭಿಷೇಕ, ಬಿಲ್ವಾರ್ಚನೆ, ಕುಂಕುಮಾರ್ಚನೆ, ವಿಶೇಷ ಅಲಂಕಾರ ಹಾಗೂ ಮಹಾ ಮಂಗಳಾರತಿ, ಸುದರ್ಶನಹೋಮ ಹಾಗೂ ಪೂರ್ಣಾಹುತಿ ನೆರವೇರಿಸಲಾಯಿತು. 
ಸಂಜೆ ಮುತ್ತೈದಯರ ಕುಂಭ, ಕಳಸ ಮತ್ತು ಆಕರ್ಷಕ ಜಾನಪದ ಕಲಾ ತಂಡಗಳೊಂದಿಗೆ ಶ್ರೀಶೈಲ ಶ್ರೀಗಳ ಅಡ್ಡಪಲ್ಲಕ್ಕಿ ಉತ್ಸವ ವಿಜೃಂಭಣೆಯಿಂದ ನೆರವೇರಿಸಲಾಯಿತು. 
ದೇವರಭೂಪುರ ಬೃಹನ್ಮಠದ ಗಜದಂಡ ಶಿವಾಚಾರ್ಯರು, ರವಡಕುಂದ ಸಂಸ್ಥಾನ ಹಿರೇಮಠದ ಶಿವಯೋಗಿ ಶಿವಾಚಾರ್ಯರು, ರಂಭಾಪುರಿ ಶಾಖಾ ಮಠದ ಸೋಮನಾಥ ಶಿವಾಚಾರ್ಯರು, ಬಂಗಾರಿ ಕ್ಯಾಂಪಿನ ಸಿದ್ಧಾಶ್ರಮದ ಡಾ.ಸಿದ್ಧರಾಮೇಶ್ವರ ಶರಣರು ಮತ್ತು ಸದಾನಂದ ತಾತ ಹಾಗೂ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಿದ್ದರು.