ಗುರುರಾಜ ರ್ಯಾರಂ 
ರಾಯಚೂರು

ಸರ್ಕಾರ ಭೂ ಮಾಪಕರ ಸಮಸ್ಯೆಗಳಿಗೆ ಪರಿಹಾರ ನೀಡಲಿ

ರಾಯಚೂರು
ಕಳೆದ ಎರಡು ತಿಂಗಳಿನಿಂದ ಭೂ ಮಾಪಕರುಮುಷ್ಕರದಲ್ಲಿ ತೊಡಗಿದ್ದರಿಂದ ರೈತರಿಗೆ ತೀವ್ರ ತೊಂದರೆಯಾಗುತಿದ್ದು ವಾರದೊಳಗೆ ಸರ್ಕಾರ ಪರ್ಯಾಯ ವ್ಯವಸ್ಥೆ ಮಾಡಬೇಕೆಂದು ರೈತ ಸಂಘದ ಜಿಲ್ಲಾ ಸಂಚಾಲಕ ಗುರುರಾಜ ಯರ‌್ರಂ ಒತ್ತಾಯಿಸಿದರು.

ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಂದಾಯ ಇಲಾಖೆ ವ್ಯಾಪ್ತಿಯಲ್ಲಿರುವ ಸರ್ವೆಯರ್‌ಗಳು ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಮುಷ್ಕರ ಮಾಡುತ್ತಿದ್ದಾರೆ. ರೈತರ ವಿವಿಧ ಕಾರ್ಯಗಳು ಸ್ಥಗಿತಗೊಂಡಿವೆ. ಜಿಲ್ಲೆಯೊಂದರಲ್ಲಿಯೇ ಸರಿ ಸುಮಾರು 20 ಸಾವಿರ ಅರ್ಜಿಗಳು ರೈತರು ಸಲ್ಲಿಸಿದ್ದಾರೆ. ರಾಜ್ಯಾದಂತ ಲಕ್ಷಾಂತರ ಅರ್ಜಿಗಳು ಭಾಗಿ ಉಳಿದಿವೆ. ಪೋಡಿ, ದಾಖಲೆ ಬದಲು ಸರ್ವೆ ಕಾರ್ಯ ನಡೆಯದೇ ತೀವ್ರ ತೊಂದರ ಅನುಭವಿಸುತ್ತಿದ್ದಾರೆ. ಕೂಡಲೇ ಸಮಸ್ಯೆ ಪರಿಹಾರ ಒದಗಿಸಬೇಕು.
ಇಲ್ಲ ಪರ್ಯಾಯ ಕ್ರಮವಾದರೂ ಕೈಗೊಂಡು ರೈತರಿಗೆ ಆಗುತ್ತಿರುವ ತೊಂದರೆಯಾದರೂ ನಿವಾರಿಸಬೇಕು ಎಂದರು.

ಈ ಸಂದರ್ಭದಲ್ಲಿ ಪ್ರಮುಖರಾದ ಶಿವರಾಜ, ಸಂಗಮೇಶ ನಾಯಕ, ರಂಗನಾಥ ಇದ್ದರು.