mahendra kumara mitra 
ರಾಯಚೂರು

ಸರ್ಕಾರ ಕೆನೆಪದರು ಅಳವಡಿಸಲು ಸರ್ಕಾರ ಮುಂದಾಗುತ್ತಿಲ್ಲ

ರಾಯಚೂರು ಪರಿಶಿಷ್ಟಜಾತಿಗಳ ಒಳ ಮೀಸಲಾತಿಗೆ ಸುಪ್ರಿಂಕೋರ್ಟಿ ತೀರ್ಪಿನ ಅನ್ವಯ ಉಪಜಾತಿವಾರು ಜನಸಂಖ್ಯೆಯೊಂದಿಗೆ ಒಳ ಮೀಸಲಾತಿ ಹಾಗೂ ಕೆನೆಪದರು ಅಳವಡಿಸಲು ಸೂಚಿಸಲಾಗಿತ್ತು. ಮೀಸಲಾತಿ ಹಂಚಿಕೆ ವಿಷಯವಷ್ಟೆ ಸರ್ಕಾರ ಆಯೋಗ ಗಮನಹರಿಸಿದೆ ಹೊರತು ಕೆನೆಪದರು ಅಳವಡಿಸಲು ಮುಂದಾಗುತ್ತಿಲ್ಲವೆಂದು ಡಾ.ಅಂಬೇಡ್ಕರ ಪಿಪುಲ್ಸ್ ಪಾರ್ಟಿ ಕಾರ್ಯಾಧ್ಯಕ್ಷ ಮಹೇಂದ್ರ ಕುಮಾರ ಮಿತ್ರ ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬ್ರಿಜ್ ಮೋಹನ ಲಾಲ್ ವಿರುದ್ದ ಯುನಿಯೂನ್ ಆಫ್ ಇಂಡಿಯಾ 2012 ಪ್ರಕರಣದಲ್ಲಲಿ ಭಾರತ ಸಂವಿಧಾನ 141 ಮತ್ತು 144 ಅನುಚ್ಚೇದಗಳು ಸರ್ವೋಚ್ಚ ನ್ಯಾಯಾಲಯದ ಘೋಷಣೆ ಮಾಡಿದ್ದ ಹಿನ್ನಲೆಯಲ್ಲ ಎಲ್ಲಾ ನ್ಯಾಯಾಲಯಗಳು ಮತ್ತು ಪ್ರಾಧಿಕಾರಗಳು ನಿರ್ಬಂಧಕ್ಕೆ ಒಳಪಟ್ಟಿವೆ ಎಂದರು.
ನ್ಯಾಯಮೂರ್ತಿ ನಾಗಮೋಹನದಾಸ್ ಇವರೇ ನೀಡಿರುವ ವರದಿಯಲ್ಲಿ 101 ಪರಿಶಿಷ್ಟ ಜಾತಿಗಳ ಪಟ್ಟಿಯಲ್ಲಿರುವ ಅಸಂವಿಧಾನಿಕವಾಗಿ ಸೇರ್ಪಡೆಗೊಂಡಿರುವ 12 ಸ್ಪಶ್ಯ ಜಾತಿಗಳನ್ನು 341(2) ಪ್ರಕಾರ ಪರಿಶಿಷ್ಟ ಜಾತಿಗಳ ಪಟ್ಟಿಯಿಂದ ಕೈ ಬಿಡಲು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಿಲ್ಲ. ಸ್ಪಶ್ಯ ಜಾತಿಗಳನ್ನು ಎಸ್ಸಿ ಪಟ್ಟಿಯಿಂದ ಕೈಬಿಡಲು ನ್ಯಾಯಮೂರ್ತಿ ಸಂತೋಷ ಹೆಗ್ಡೆನೇತೃತ್ವದಲ್ಲಿ ಆಯೋಗ ರಚಿಸಬೇಕು ಎಂದರು.
ಈ ಸಂದರ್ಭದಲ್ಲಿ ಪ್ರಮುಖರಾದ ಹುಸೇನ ಬಾಷಾ, ನರಸಿಂಹ ಗಧಾರ ಇದ್ದರು.