ಮಸ್ಕಿಯಲ್ಲಿ ತಾಲೂಕು ಶರಣ ಸಾಹಿತ್ಯ ಪರಿಷತ್ತಿನಿಂದ ಏರ್ಪಡಿಸಿದ್ದ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಶರಣ ತಿಮ್ಮನಗೌಡ ಚಿಲ್ಕರಾಗಿ, ಪ್ರಮುಖರಾದ ಮನೋಹರ ಮಸ್ಕಿ, ನಾಗರಾಜ ಮಸ್ಕಿ, ದುರ್ಗಣ್ಣ, ಎಂ.ಪ್ರಭುದೇವ, ವೀರೇಶ ಸೌದ್ರಿ ಇದ್ದರು.  
ರಾಯಚೂರು

ಶರಣರ ಅನುಭಾವಗಳೇ ವಚನಗಳು

ಪ್ರಮುಖ ಮುಖ್ಯಾಂಶಗಳು

  • ಮಸ್ಕಿಯಲ್ಲಿ ಶರಣ ತಿಮ್ಮನಗೌಡ ಚಿಲ್ಕರಾಗಿ ಹೇಳಿಕೆ
  • ಶರಣ ಸಾಹಿತ್ಯ ಪರಿಷತ್ತಿನಿಂದ ದತ್ತಿ ಉಪನ್ಯಾಸ ಕಾರ್ಯಕ್ರಮ
ಮಸ್ಕಿ: ಶರಣರು, ಕಾಯಕ ಜೀವಿಗಳು, ಶ್ರಮಜೀವಿಗಳು ಅವರ ಬದುಕಿನ ಅನುಭಾವಗಳೇ ವಚನಗಳು. ನಿಜದ ನಿಲುವನ್ನು ಅರಿಯುವವರಿಗೆ ವಚನಗಳು ರಹದಾರಿಗಳಾಗಿವೆ ಎಂದು ಶರಣ ತಿಮ್ಮನಗೌಡ ಚಿಲ್ಕರಾಗಿ ಹೇಳಿದರು.
ತಾಲೂಕು ಶರಣ ಸಾಹಿತ್ಯ ಪರಿಷತ್ತಿನಿಂದ ಪಟ್ಟಣದ ಡಾ.ಎಂ.ಬಸವರಾಜ ಅವರ ಮನೆಯಲ್ಲಿ ಭಾನುವಾರ ಆಯೋಜಿಸಿದ್ದ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು. ವಚನಗಳು ಎಂದರೆ ಪ್ರಮಾಣ, ಪ್ರಮಾಣ ಎಂದರೆ ಸತ್ಯ, ಸತ್ಯದಂತೆ ಬದುಕುವುದು, ಸಕಲ ಜೀವರಾಶಿಗಳನ್ನು ದಯೆ, ಕರುಣೆ, ವಾತ್ಸಲ್ಯದಿಂದ ಪ್ರೀತಿಸುವುದೇ ನಿಜವಾದ ಧರ್ಮವಾಗಿದೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಮಾಜಿ ಎಂಎಲ್ಸಿ ಮನೋಹರ ಮಸ್ಕಿ ಮಾತನಾಡಿ, ಶರಣರ ಸಂದೇಶಗಳನ್ನು ಅರ್ಥಮಾಡಿಕೊಂಡು ನಡೆ ನುಡಿ ಒಂದಾಗಿಸಿ ಬದಕುವುದರಲ್ಲಿ ಸಾರ್ಥಕತೆ ಇದೆ ಎಂದರು. 
ಶರಣ ಸಾಹಿತ್ಯ ಪರಿಷತ್ ಜಿಲ್ಲಾ ಅಧ್ಯಕ್ಷ ಮಸ್ಕಿ ನಾಗರಾಜ ವಕೀಲ, ಮಹಾಮನೆ ಸಮಿತಿ ಅಧ್ಯಕ್ಷ ದುರ್ಗಣ್ಣ, ಶಸಾಪ ತಾಲೂಕು ಅಧ್ಯಕ್ಷ ವೀರೇಶ ಸೌದ್ರಿ ಮಾತನಾಡಿದರು. ಪ್ರಮುಖರಾದ ಎಂ.ಪ್ರಭುದೇವ, ಮಹಾಂತೇಶ, ಮಹೇಶ ಶೆಟ್ಟರ್ ಇದ್ದರು. 
23-ಎಂಎಸ್‌ಕೆ-1