ಯದ್ದಲದೊಡ್ಡಿ ಗ್ರಾಮದಲ್ಲಿ ಸಿದ್ಧಲಿಂಗ ಶಿವಯೋಗಿಗಳ ಜಾತ್ರೆ ನಿಮಿತ್ತ ಅದ್ದೂರಿಯಾಗಿ ರಥೋತ್ಸವ ಜರುಗಿತು. 
ರಾಯಚೂರು

ಯದ್ದಲದೊಡ್ಡಿ ಸಿದ್ಧಲಿಂಗ ಶ್ರೀಗಳ ರಥೋತ್ಸವ

ಸಿಂಧನೂರು: ತಾಲೂಕಿನ ಯದ್ದಲದೊಡ್ಡಿ ಗ್ರಾಮದಲ್ಲಿ ಲಿಂ.ಸಿದ್ಧಲಿಂಗ ಶಿವಯೋಗಿಗಳ ಜಾತ್ರೋತ್ಸವ ನಿಮಿತ್ತ ಶನಿವಾರ ಸಂಜೆ ರಥೋತ್ಸವ ಅದ್ದೂರಿಯಾಗಿ ಜರುಗಿತು. 
ಬೆಳಗ್ಗೆ ಸಿದ್ಧಲಿಂಗ ಶಿವಯೋಗಿಗಳ ಕರ್ತೃ ಗದ್ದುಗೆಗೆ ಮಹಾರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆ, ವಿಶೇಷ ಪೂಜಾ ಕೈಂಕರ್ಯಗಳು ನೆರವೇರಿದವು. ನಂತರ ಭಕ್ತರಿಗೆ ಅನ್ನ ಸಂತರ್ಪಣೆ ನಡೆಯಿತು. 
ಒಳಬಳ್ಳಾರಿ ಸುವರ್ಣಗಿರಿ ವಿರಕ್ತಮಠದ ಡಾ.ಸಿದ್ಧಲಿಂಗ ಸ್ವಾಮೀಜಿ ರಥೋತ್ಸವಕ್ಕೆ ಚಾಲನೆ ನೀಡಿದರು. ರಥ ಮುಂದೆ ಸಾಗುತ್ತಿದ್ದಂತೆ ಭಕ್ತರು ಉತ್ತತ್ತಿ, ಬಾಳೆಹಣ್ಣು ತೂರಿ ಭಕ್ತಿ ಸಮರ್ಪಿಸಿದರು. 
ಯದ್ದಲದೊಡ್ಡಿ ಶ್ರೀಮಠದ ಮಹಾಲಿಂಗ ಸ್ವಾಮೀಜಿ, ಶಹಾಪುರದ ಗುರುಪಾದ ಸ್ವಾಮೀಜಿ, ಉಗರಗೋಳ ಮಹಾಂತ ಸ್ವಾಮೀಜಿ, ಒಳಬಳ್ಳಾರಿ ಸುವರ್ಣಗಿರಿ ವಿರಕ್ತಮಠದ ಬಸವಲಿಂಗ ಸ್ವಾಮೀಜಿ, ಬಳಗಾನೂರು ಸಿದ್ಧಬಸವ ಸ್ವಾಮೀಜಿ, ಅಂಕಶದೊಡ್ಡಿ ವಾಮದೇವ ಶಿವಾಚಾರ್ಯರು, ಅಡವಿ ಅಮರೇಶ್ವರದ ತೋಂಟದಾರ್ಯ ಸ್ವಾಮೀಜಿ ಇತರರಿದ್ದರು.