ಕಾನಿಹಾಳ ಗ್ರಾಮದಲ್ಲಿ ಉಟಕನೂರು ಶ್ರೀ ಮರಿಬಸಲಿಂಗ ತಾತನ ರಥೋತ್ಸವ ಅದ್ದೂರಿಯಾಗಿ ಜರುಗಿತು. 
ರಾಯಚೂರು

ಮರಿಬಸವಲಿಂಗ ತಾತನ ರಥೋತ್ಸವ ಸಂಪನ್ನ

ಸಿಂಧನೂರು: ತಾಲೂಕಿನ ಕಾನಿಹಾಳ ಗ್ರಾಮದಲ್ಲಿ ಉಟಕನೂರು ಶ್ರೀ ಮರಿಬಸಲಿಂಗ ತಾತನ ಜಾತ್ರೆ ನಿಮಿತ್ತ ಸೋಮವಾರ ಸಂಜೆ ಅದ್ದೂರಿಯಾಗಿ ರಥೋತ್ಸವ ಜರುಗಿತು.
ಬೆಳಗ್ಗೆ ಮರಿಬಸವಲಿಂಗ ತಾತನ ಮೂರ್ತಿಗೆ ಮಹಾರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆ ಸೇರಿದಂತೆ ವಿವಿಧ ಪೂಜಾ ಕೈಂಕರ್ಯಗಳು ನೆರವೇರಿದವು. ನಂತರ ಅನ್ನ ಸಂತರ್ಪಣೆ ನಡೆಯಿತು. 
ಸಂಜೆ ತಾತನ ರಥೋತ್ಸವ ವಿಜೃಂಭಣೆಯಿಂದ ಜರುಗಿತು. ಭಕ್ತರು ಉತ್ತತ್ತಿ, ಬಾಳೆಹಣ್ಣು ತೂರಿ ಭಕ್ತಿ ಸಮರ್ಪಿಸಿದರು. 
ಉಟಕನೂರು ಅಡವಿಸಿದ್ಧೇಶ್ವರ ಮಠದ ಮರಿಬಸವರಾಜ ದೇಶಿಕೇಂದ್ರ ಸ್ವಾಮೀಜಿ, ತಿಮ್ಮಾಪುರ ಕಲ್ಯಾಣಾಶ್ರಮದ ಮಹಾಂತ ಸ್ವಾಮೀಜಿ ಸಾಲಿಮಠ, ಹುಸ್ಕಿಹಾಳ ಮಹರ್ಷಿ ವಾಲ್ಮೀಕಿ ಗುರುಪೀಠದ ಆತ್ಮಾನಂದ ಸ್ವಾಮೀಜಿ, ರಾಚಯ್ಯಸ್ವಾಮಿ ಬಪ್ಪೂರ, ಗಂಗಾಧರ ಗುರುವಿನ್, ಚನ್ನಯ್ಯಸ್ವಾಮಿ ಹಿರೇಮಠ ಮಾಟೂರು, ದೇವಯ್ಯಸ್ವಾಮಿ ಬಪ್ಪೂರು, ಶಾಸಕ ಆರ್.ಬಸನಗೌಡ ತುರ್ವಿಹಾಳ, ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್ ಇತರರಿದ್ದರು. 
ಜಾತ್ರೆ ಅಂಗವಾಗಿ ಅನ್ನದಾನೇಶ್ವರ ರಕ್ತಕೇಂದ್ರದಿಂದ ರಕ್ತದಾನ ಶಿಬಿರ ನಡೆಯಿತು. ಅಣ್ಣನ ಆಜ್ಞೆ ತಮ್ಮನ ಪ್ರತಿಜ್ಞೆ ಸಾಮಾಜಿಕ ನಾಟಕ ಪ್ರದರ್ಶನಗೊಂಡಿತು.