ಲಿಂಗಸುಗೂರು ಸಹಾಯಕ ಆಯುಕ್ತ ಬಸವಣೆಪ್ಪ ಕಲಶೆಟ್ಟಿಗೆ ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘ ತಾಲೂಕು ಘಟಕದಿಂದ ಮನವಿ ಸಲ್ಲಿಸಿದರು. ಸಂಘದ ತಾಲೂಕು ಅಧ್ಯಕ್ಷ ಅಮರೇಶಪ್ಪ ಹೂನೂರು, ರಾಜ್ಯ ಸಂಘದ ಜಂಟಿ ಕಾರ್ಯದರ್ಶಿ ಭೀಮಪ್ಪ ನಾಯಕ, ಪಂಪನಗೌಡ ಪಾಟೀಲ್, ಶರಣಪ್ಪ ಕಗ್ಗಲ್, ಮೋಹನ್ ಜೋಶಿ, ಮಲ್ಲಯ್ಯ ಹಿರೇಮಠ, ಚಾಂದ್ ಪಟೇಲ್, ಗದ್ದೆಪ್ಪ, ಪ್ರಾಣೇಶ, ಮರಿಯಪ್ಪ, ಜಯಸಿಂಗ್ ಠಾಕೂರ್ ಇತರರಿದ್ದರು.
ಕೇಂದ್ರ ಸರ್ಕಾರ ಆರ್ಥಿಕ ಕಾಯ್ದೆ ಹಿಂಪಡೆಯಲಿ
ಲಿಂಗಸುಗೂರು: ಕೇಂದ್ರದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಲೋಕಸಭೆಯಲ್ಲಿ ಮಂಡಿಸಿ ಅನುಮೋದನೆ ಪಡೆದಿರುವ 2025ರ ಕೇಂದ್ರ ಸರ್ಕಾರದ ಆರ್ಥಿಕ ಕಾಯ್ದೆ ಹಿಂಪಡೆಯಲು ಒತ್ತಾಯಿಸಿ ಸರ್ಕಾರಿ ನಿವೃತ್ತ ನೌಕರರ ಸಂಘ ತಾಲೂಕು ಘಟಕದ ನೌಕರರು ಕಪ್ಪು ಪಟ್ಟಿ ಧರಿಸಿ ಎಸಿ ಬಸವಣೆಪ್ಪ ಕಲಶೆಟ್ಟಿಗೆ ಬುಧವಾರ ಮನವಿ ಸಲ್ಲಿಸಿದರು.
ಅಖಿಲಭಾರತ ನಿವೃತ್ತ ಪಿಂಚಣಿದಾರರಿಗೆ ಹಾಗೂ ಕುಟುಂಬ ಪಿಂಚಣಿದಾರರಿಗೆ ಸಂಬಂಧಿಸಿದಂತೆ ವೇತನ ಶ್ರೇಣಿ ಹೆಚ್ಚಿಸುವುದಿಲ್ಲ. ಕಾಲಕಾಲಕ್ಕೆ ಕೊಡುವ ಡಿಎ ಕೊಡುವ ಅವಶ್ಯಕತೆ ಇಲ್ಲ ಎಂಬ ನಿಯಮಗಳನ್ನು ಈ ಆರ್ಥಿಕ ಕಾಯ್ದೆಯಲ್ಲಿ ಅಳವಡಿಸಲಾಗಿದೆ. ಇದರಿಂದ ಪಿಂಚಣಿದಾರರಿಗೆ ಸಮಸ್ಯೆ ಎದುರಾಗಲಿದೆ. ಹೀಗಾಗಿ ಆರ್ಥಿಕ ಕಾಯ್ದೆಯನ್ನು ಕೇಂದ್ರ ಸರ್ಕಾರ ಹಿಂಪಡೆಯಲಿ ಎಂದು ಆಗ್ರಹಿಸಿದರು.
ಸರ್ಕಾರಿ ನಿವೃತ್ತ ನೌಕರರ ಸಂಘದ ತಾಲೂಕು ಅಧ್ಯಕ್ಷ ಅಮರೇಶಪ್ಪ ಹೂನೂರು, ರಾಜ್ಯ ಸಂಘದ ಜಂಟಿ ಕಾರ್ಯದರ್ಶಿ ಭೀಮಪ್ಪ ನಾಯಕ, ಪ್ರಮುಖರಾದ ಪಂಪನಗೌಡ ಪಾಟೀಲ್, ಶರಣಪ್ಪ ಕಗ್ಗಲ್, ಮೋಹನ್ ಜೋಶಿ, ಮಲ್ಲಯ್ಯ ಹಿರೇಮಠ, ಚಾಂದ್ ಪಟೇಲ್, ಗದ್ದೆಪ್ಪ, ಪ್ರಾಣೇಶ, ಮರಿಯಪ್ಪ, ಜಯಸಿಂಗ್ ಠಾಕೂರ್, ಮಲ್ಲಾರೆಡ್ಡಿ, ಮಹಾಂತೇಶ, ಜಾಫರ್ ಹುಸೇನ್, ಬಾಲಕೃಷ್ಣ ಒಡೆಯರ್, ಭೀಮಾಶಂಕರ್, ಶರಣಪ್ಪ ಮೇಟಿ, ಮಲ್ಲಣ್ಣ ಮೇಟಿ, ಅಮರೇಶ ಕುಂಬಾರ, ಶಾಂತಾಬಾಯಿ ಇತರರಿದ್ದರು.