ಯಾದಗಿರಿ ಜಿಲ್ಲೆ ಪೂಲಭಾವಿ ಹನುಮಂತ ದೇವರ ಜಾತ್ರೆಯಲ್ಲಿ ಭಾರದ ಕಲ್ಲು ಎಳೆದು ಪ್ರಥಮ ಸ್ಥಾನ ಗಳಿಸಿದ ಹನುಮಪ್ಪ ಕಾಟಗಲ್ ಎತ್ತುಗಳು. 
ರಾಯಚೂರು

ಕಾಟಗಲ್ ಕುಟುಂಬಕ್ಕೆ ಕೀರ್ತಿ ತಂದ ಎತ್ತುಗಳು

ಗುರುಗುಂಟಾ: ಕಾಟಗಲ್ ದೊಡ್ಡಿಯ ಹನುಮಂತ ಅವರು ದೇಸಿ ತಳಿಯ ಹಳ್ಳಿಕಾರ್ ಎತ್ತುಗಳನ್ನು ಸಾಕುವ ಮೂಲಕ ಗಮನ ಸೆಳೆದಿದ್ದಾರೆ. ಆಧುನಿಕತೆ ಭರಾಟೆಯಲ್ಲಿ ಅವಸಾನದ ಅಂಚಿನಲ್ಲಿರುವ ಈ ತಳಿಯನ್ನು ಉಳಿಸಲು ಅವರು ಶ್ರಮಿಸುತ್ತಿದ್ದಾರೆ. 
ಕಳೆದ ಎಂಟು ವರ್ಷಗಳಿಂದ ಎತ್ತುಗಳನ್ನು ಮಕ್ಕಳಂತೆ ಪೋಷಿಸುತ್ತಿದ್ದು, ಇದಕ್ಕಾಗಿ ಮಾಸಿಕ 15 ರಿಂದ 20 ಸಾವಿರ ರೂ ವ್ಯಯಿಸುತ್ತಿದ್ದಾರೆ. ಎತ್ತುಗಳಿಗೆ ಜೋಳ, ಸಜ್ಜೆ, ಗೋಧಿ, ಮೆಕ್ಕೆಜೋಳದ ಜತೆಗೆ ಕೋಳಿ ಮೊಟ್ಟೆಯನ್ನೂ ನೀಡಿ ಪೈಲ್ವಾನರಂತೆ ಬೆಳೆಸಿದ್ದಾರೆ. 
ಯಾದಗಿರಿ ಜಿಲ್ಲೆಯ ಪೂಲಭಾವಿ ಹನುಮಂತ ದೇವರ ಜಾತ್ರೆಯಲ್ಲಿ ನಡೆದ ಕಲ್ಲು ಎಳೆಯುವ ಸ್ಪರ್ಧೆಯಲ್ಲಿ ಇವರ ಎತ್ತುಗಳು 1.8 ಟನ್ ಭಾರದ ಕಲ್ಲನ್ನು 1100 ಮೀಟರ್ ಎಳೆದು ಪ್ರಥಮ ಸ್ಥಾನ ಗಳಿಸಿವೆ. 15 ಸಾವಿರ ರೂ. ನಗದು ಹಾಗೂ ಸತ್ಕಾರ ಪಡೆದು ಕುಟುಂಬಕ್ಕೆ ಕೀರ್ತಿ ತಂದಿವೆ. ರಾಜ್ಯದ ಎಲ್ಲ ಸ್ಪರ್ಧೆಗಳಲ್ಲಿ ಇವರ ಎತ್ತುಗಳು ಬಹುಮಾನ ಗೆಲ್ಲುತ್ತಿವೆ.
"

ರಾಜ್ಯದ ವಿವಿಧೆಡೆ ಹಮ್ಮಿಕೊಂಡ ಕಲ್ಲು ಭಾರ ಎಳೆಯುವ ಸ್ಪರ್ಧೆಗಳಲ್ಲಿ ನನ್ನ ಎತ್ತುಗಳು ಭಾಗವಹಿಸಿವೆ. ಬಹುಮಾನ ಪಡೆಯದೆ ಮನೆಗೆ ಮರಳಿಲ್ಲ. ಪ್ರಥಮ ಸ್ಥಾನದಲ್ಲಿ ಗೆದ್ದು ಬೀಗಿ ಮನೆತನದ ಹೆಸರಿನ ಜೊತೆಗೆ ಹುಟ್ಟೂರಿನ ಹೆಸರನ್ನು ಪರಿಚಯಿಸಿವೆ.