ಸಿಂಧನೂರು ಸರ್ಕಾರಿ ಬಾಲಕರ ಪ್ರೌಢ ಶಾಲೆಯಲ್ಲಿ ಗುರುವಾರ ಅಗಸ್ತ್ಯ ಅಂತಾರಾಷ್ಟ್ರೀಯ ಪ್ರತಿಷ್ಠ್ಠಾನ ವತಿಯಿಂದ ನಾವೀನ್ಯತಾ ಮೇಳ ನಡೆಸಲಾಯಿತು. ಜಿಲ್ಲೆಯ ವಲಯ ಮುಖ್ಯಸ್ಥ ಜ್ಯೋತಿಬಾ ಸೂರ್ಯವಂಶಿ, ತಾಲೂಕು ಸಂಚಾಲಕ ಶಿವಗೇನಪ್ಪ ಕೊಮ್ಮನೂರು ಗೌಡನಬಾವಿ, ಮುಖ್ಯಶಿಕ್ಷಕ ರವೀಂದ್ರಗೌಡ ಇತರರಿದ್ದರು. 
ರಾಯಚೂರು

ಮಕ್ಕಳ ಕೌಶಲ ವೃದ್ಧಿಗೆ ಶಿಕ್ಷಕರು ಪ್ರೇರೇಪಿಸಲಿ

ಪ್ರಮುಖ ಮುಖ್ಯಾಂಶಗಳು

  • ಮಕ್ಕಳಲ್ಲಿ
  • ಕೌಶಲ
  • ವೃದ್ಧಿಸಲು
ಸಿಂಧನೂರು: ನಗರದ ಬಾಲಕರ ಸರ್ಕಾರಿ ಪ್ರೌಢ ಶಾಲೆಯಲ್ಲಿ ಗುರುವಾರ ಅಗಸ್ತ್ಯ ಅಂತಾರಾಷ್ಟ್ರೀಯ ಪ್ರತಿಷ್ಠಾನದಿಂದ ನಾವೀನ್ಯತಾ ಮೇಳ ನಡೆಯಿತು.
ಪ್ರಭಾರ ಮುಖ್ಯಶಿಕ್ಷಕ ರವೀಂದ್ರಗೌಡ ಮಾತನಾಡಿ, ಇಂದಿನ ದಿನಮಾನಗಳಲ್ಲಿ ಸಮಸ್ಯೆಗಳಿಗೆ ಪರಿಹಾರ ಕಂಡುಹಿಡಿಯುವ ಕೌಶಲಗಳು ಅತ್ಯಂತ ಅಗತ್ಯವಾಗಿವೆ. ಇಂಥಹ ನಾವೀನ್ಯತಾ ಚಟುವಟಿಕೆಗಳ ಮೂಲಕ ಮಕ್ಕಳಲ್ಲಿ ಕೌಶಲಗಳನ್ನು ವೃದ್ಧಿಸಲು ಶಿಕ್ಷಕರು ಪ್ರೇರೇಪಿಸಬೇಕು ಎಂದರು.
ವಿದ್ಯಾರ್ಥಿಗಳು 20ಕ್ಕೂ ಹೆಚ್ಚು ನವೀನ ವಿಜ್ಞಾನ ಮಾದರಿಗಳನ್ನು ಪ್ರದರ್ಶಿಸಿ, ತಮ್ಮ ಸೃಜನಾತ್ಮಕ ಮತ್ತು ಸಮಸ್ಯೆ ಪರಿಹಾರ ಕೌಶಲ ಮೆರೆದರು. ಶಾಲೆಗಳ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಭೇಟಿ ನೀಡಿ, ವಿದ್ಯಾರ್ಥಿಗಳ ಮಾದರಿಗಳನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.
ಅಗಸ್ತ್ಯ ಅಂತಾರಾಷ್ಟ್ರೀಯ ಪ್ರತಿಷ್ಠಾನದ ಜಿಲ್ಲೆಯ ವಲಯ ಮುಖ್ಯಸ್ಥ ಜ್ಯೋತಿಬಾ ಸೂರ್ಯವಂಶಿ ಪ್ರತಿಯೊಂದು ಮಾದರಿಯ ಸಾಧಕ-ಬಾಧಕಗಳನ್ನು ವಿವರಿಸಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು. ತಾಲೂಕು ಸಂಚಾಲಕ ಶಿವಗೇನಪ್ಪ ಕೊಮ್ಮನೂರು ಗೌಡನಬಾವಿ, ಶಿಕ್ಷಕರಾದ ರಾಮದಾಸ, ತುಳಸಿದಾಸ, ವೀರೇಶಪ್ಪ, ಅಂಜನಾದೇವಿ, ವಾಸಂತಿ ಕೆ., ಖಾಜಾ ಬನ್ನಿ ರೇಷ್ಮಾ, ಚನ್ನವೀರಮ್ಮ ಇತರರಿದ್ದರು.