ರಾಯಚೂರಿನ ಎಂಎಂ ಪದವಿ ಕಾಲೇಜಿನಲ್ಲಿ ಜಿಲ್ಲಾ ಹಾಗೂ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನಿಂದ ಆಯೋಜನೆ ಮಾಡಲಾಗಿದ್ದ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಆಯುರ್ವೇದ ವೈದ್ಯಡಾ. ನಂದಾ ಅವರನ್ನು ಸನ್ಮಾನಿಸಲಾಯಿತು. ಪ್ರಾಧ್ಯಾಪಕ ಡಾ. ಶರಣಪ್ಪ ಚಲವಾದಿ, ಕಾಲೇಜಿನ ಪ್ರಾಚಾರ್ಯ ಶರಣಬಸವ ಆಶಾಪೂರು, ತಾಲೂಕು ಕಸಾಪ ಅಧ್ಯಕ್ಷ ಡಾ.ಬಿ.ವಿಜಯ ರಾಜೇಂದ್ರ, ಪ್ರಮುಖರಾದ ಪ್ರತಿಭಾ ಗೋನಾಳ, ರಾಮಣ್ಣ ಬೋಯರ್, ಡಾ. ಸರ್ವಮಂಗಳ ಸಕ್ರಿ, ವೀರೇಶ್ ಇದ್ದರು.
ರಾಯಚೂರು ಪ್ರಸ್ತುತ ದಿನಗಳಲ್ಲಿ ದೈಹಿಕ, ಮಾನಸಿಕ, ಹಾಗೂ ಸಾಮಾಜಿಕ ಆರೋಗ್ಯ ಕಾಪಾಡಿಕೊಳ್ಳುವುದು ಬಹುಮುಖ್ಯವಾಗಿದೆ. ಒಂದು ವೇಳೆ ಸರಿಯಾಗಿ ಕಾಪಾಡಿಕೊಳ್ಳದಿದ್ದರೆ, ಮುಂದಿನ ದಿನಗಳಲ್ಲಿ ನಮ್ಮ ದೇಶ ಅನಾರೋಗ್ಯದಲ್ಲಿ ಮೊದಲನೇ ಸ್ಥಾನದಲ್ಲಿ ಇರುತ್ತದೆಂದು ಆಯುರ್ವೇದ ವೈದ್ಯಡಾ. ನಂದಾ ಹೇಳಿದರು.
ನಗರದ ಎಂಎಂ ಪದವಿ ಕಾಲೇಜಿನಲ್ಲಿ ಜಿಲ್ಲಾ ಹಾಗೂ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನಿಂದ ಆಯೋಜನೆ ಮಾಡಲಾಗಿದ್ದ ದಿ.ಆರ್. ಆಂಜನೇಯ ಸ್ಮಾರಕ ದತ್ತಿ, ದಿ.ಚಂದ್ರಶೇಖರ ಪಾಟೀಲ್ ಎ. ಕಾರ್ಲಕುಂಟಿ ದತ್ತಿ ಹಾಗೂ ಕೊಂಡ ಹನುಮಂತಯ್ಯ ಸರಸ್ವತಮ್ಮ ಫೌಂಡೇಶನ್ ಟ್ರಸ್ಟ್ ದತ್ತಿಗಳ ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಆರೋಗ್ಯವೇ ಭಾಗ್ಯ ಎಂಬ ನುಡಿ ಮುತ್ತಿನಂತೆ ಒಬ್ಬ ವ್ಯಕ್ತಿಯು ದೈಹಿಕ ಮಾನಸಿಕ ಹಾಗೂ ಸಾಮಾಜಿಕವಾಗಿ ಸಮ ಸ್ಥಿತಿಯಲ್ಲಿರುವ ಅಂತಹ ವ್ಯಕ್ತಿಗೆ ಉತ್ತಮ ಆರೋಗ್ಯವಂತ ವ್ಯಕ್ತಿ ಎನ್ನುಬಹುದು.
ಪ್ರಸ್ತುತ ದಿನಗಳಲ್ಲಿ ನಮ್ಮ ಜೀವನ ಶೈಲಿಗೆ ಬದಲಾಗಿದೆ. ಹಾಗಾಗಿ ಎಲ್ಲಾ ರೋಗಗಳಿಗೆ ಮೂಲ ಕಾರಣವಾಗಿದೆ. ನಮ್ಮ ಆಹಾರ ಪದ್ಧತಿಯಲ್ಲಿ ಸಾಕಷ್ಟು ತಪ್ಪು ವಿಧಾನಗಳನ್ನು ಅನುಸರಿಸುತ್ತಿದ್ದಾರೆ. ಅದನ್ನು ಸರಿಯಾಗಿ ಬಳಸಬೇಕು. ಆಹಾರ ಮತ್ತು ನಿದ್ದೆ ಎರಡು ದೇಹದ ಆಧಾರ ಸ್ತಂಭಗಳು ಯಾರು ಇದನ್ನು ಸರಿಯಾಗಿ ಪಾಲಿಸುತ್ತಾರೆ ಅವರು ಆರೋಗ್ಯವಂತರಾಗಿ ಇರುತ್ತಾರೆ. ಉತ್ತಮ ಆರೋಗ್ಯವಂತರಾಗಬೇಕಾದರೆ ಆಹಾರ ಪದ್ಧತಿ ಮತ್ತು ಜೀವನ ಶೈಲಿಯನ್ನು ಉತ್ತಮಪಡಿಸಿಕೊಳ್ಳಿ ಎಂದು ಹೇಳಿದರು.
ಪ್ರಾಧ್ಯಾಪಕ ಡಾ. ಶರಣಪ್ಪ ಚಲವಾದಿ ಮಾತನಾಡಿ,ದೇಶದ ಯಾವುದೇ ಜನಾಂಗದಲ್ಲಿ ಸಾಮಾಜಿಕವಾಗಿ, ಆರ್ಥಿಕವಾಗಿ ಹಿಂದುಳಿದ ಜನರಿಗೆ ನಾವು ದಲಿತ ಎಂದು ಕರೆಯುತ್ತೇವೆ. ಇಲ್ಲಿ ನೋವುಗಳನ್ನು ಅನುಭವಿಸಿದವರೇ ತಮ್ಮ ಸಾಹಿತ್ಯದ ಮೂಲಕ ದಲಿತರ ನೋವುಗಳನ್ನು ಜನಸಾಮಾನ್ಯರಿಗೆ ತಲುಪಿಸುವ ಪ್ರಯತ್ನ ಮಾಡಿದ್ದಾರೆ.
ಚಳುವಳಿ ಮತ್ತು ಸಾಹಿತ್ಯ ಇವು ಎರಡು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಚಳುವಳಿಯ ಮುಖಾಂತರವೇ ಇಂದು ಸಾಹಿತ್ಯ ಹುಟ್ಟಿಕೊಂಡಿದೆ. ಪ್ರಸ್ತುತದಲ್ಲಿ ಮನುಷ್ಯರು ಮನುಷ್ಯರಂತೆ ಕಾಣಬೇಕು, ಅಂದಾಗ ಮಾತ್ರ ಏಕತೆಯ ಭಾವನೆಯನ್ನು ಕಾಣಬಹುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಚಾರ್ಯ ಶರಣಬಸವ ಆಶಾಪೂರು, ತಾಲೂಕು ಕಸಾಪ ಅಧ್ಯಕ್ಷ ಡಾ.ಬಿ.ವಿಜಯ ರಾಜೇಂದ್ರ, ಪ್ರಮುಖರಾದ ಪ್ರತಿಭಾ ಗೋನಾಳ, ರಾಮಣ್ಣ ಬೋಯರ್, ಡಾ. ಸರ್ವಮಂಗಳ ಸಕ್ರಿ, ವೀರೇಶ್ ಸೇರಿ ಅನೇಕರು ಇದ್ದರು.