ಲಿಂಗಸುಗೂರು ಸಮೀಪ ಪೂಲಭಾವಿ ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬಿಇಒ ಸುಜಾತಾ ಹೂನೂರು ಅವರನ್ನು ಸನ್ಮಾನಿಸಲಾಯಿತು. ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಮಾರ್ಟಿನ್ ಅಮಲ್‌ರಾಜ್, ಶಿಕ್ಷಣ ಸಂಯೋಜಕ ಬಸವರಾಜ ಗುಡಿಹಾಳ, ಸಿಆರ್‌ಪಿ ಶರಣಬಸವ ನಿಡಗುಂದಿ, ಮುಖ್ಯಶಿಕ್ಷಕ ಮೌನೇಶ ಕಂಬಾರ, ಗ್ರಾಪಂ ಪ್ರತಿನಿಧಿ ಮಹಾದೇವಪ್ಪ ಕಾಟಗಲ್ಲ, ಹಿರಿಯ ಶಿಕ್ಷಕರಾದ ರಾಮಜಿ ರಾಠೋಡ, ವೀರೇಶ ಹೊಸಗೌಡರ ಇತರರಿದ್ದರು.
- ಪ್ರತಿಭಾ ಕಾರಂಜಿ
- ಸಹಕಾರಿ
- ಪ್ರತಿಭಾನ್ವಿತ ವಿದ್ಯಾರ್ಥಿ
ಪ್ರತಿಭೆ ಹೊರತರಲು ಪ್ರತಿಭಾ ಕಾರಂಜಿ ಸಹಕಾರಿ
ಲಿಂಗಸುಗೂರು: ಸರ್ಕಾರಿ ಶಾಲೆಗಳಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿದ್ದು, ಪ್ರತಿಭೆ ಹೊರತರಲು ಪ್ರತಿಭಾ ಕಾರಂಜಿ ಸಹಕಾರಿ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಸುಜಾತಾ ಹೂನೂರು ಹೇಳಿದರು.
ಪೂಲಭಾವಿ ಸರ್ಕಾರಿ ಉನ್ನತೀಕರಿಸಿದ ಮಾದರಿಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಕಾಳಾಪೂರ ವಲಯ ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು. ಕಲಿಕೆ ಎಂದರೆ ಕೇವಲ ಅಂಕಗಳಲ್ಲ. ಪಠ್ಯೆತರ ಚಟುವಟಿಕೆಗಳ ಮೂಲಕ ಮಕ್ಕಳ ವ್ಯಕ್ತಿತ್ವ ಹಾಗೂ ಸ್ಪರ್ಧಾತ್ಮಕ ಮನೋಭಾವಕ್ಕೆ ಪ್ರತಿಭಾಕಾರಂಜಿ ಸಹಕಾರಿ ಎಂದರು.
ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಮಾರ್ಟಿನ್ ಅಮಲ್‌ರಾಜ್, ಶಿಕ್ಷಣ ಸಂಯೋಜಕ ಬಸವರಾಜ ಗುಡಿಹಾಳ, ಸಿಆರ್‌ಪಿ ಶರಣಬಸವ ನಿಡಗುಂದಿ, ಮುಖ್ಯಶಿಕ್ಷಕ ಮೌನೇಶ ಕಂಬಾರ, ಗ್ರಾಪಂ ಪ್ರತಿನಿಧಿ ಮಹಾದೇವಪ್ಪ ಕಾಟಗಲ್ಲ, ಶಿಕ್ಷಕರಾದ ರಾಮಜಿ ರಾಠೋಡ, ವೀರೇಶ ಹೊಸಗೌಡರ, ಶಿವರಾಜ, ರಾಮಣ್ಣ ಬೇವೂರು, ಅಮರೇಶ ಅರಿಕೇರಿ, ಕನಕರಾಜ, ಜಯಪ್ಪ ಇತರರಿದ್ದರು.