ಶಿವರಾಜ ಜಾನೇಕಲ್  
ರಾಯಚೂರು

ಆ.16 ರಂದು ಪ್ರತಿಭಾ ಪುರಸ್ಕಾರ

ರಾಚಯ್ಯ ಸ್ವಾಮಿ

ಛಲವಾದಿ ಮಹಾಸಭಾ ಸಿಂಧನೂರು ಮತ್ತು ಮಸ್ಕಿ ತಾಲೂಕ ಘಟಕಗಳಿಂದ ಆ.16 ರಂದು ಬೆಳಗ್ಗೆ 10:30 ಕ್ಕೆ ಸಿಂಧನೂರಿ ಟೌನ್ ಹಾಲ್‌ನಲ್ಲಿ ಎಸ್‌ಎಸ್‌ಎಲ್ಸಿ ಮತ್ತು ಪಿಯುಸಿಯಲ್ಲಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಆಯೋಜಿಸಲಾಗಿದೆಂದು ಮಹಾಸಭಾದ ಜಿಲ್ಲಾಧ್ಯಕ್ಷ ಶಿವರಾಜ ಜಾನೇಕಲ್ ತಿಳಿಸಿದರು.

ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಶೇ. 70 ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನಿಸಲಾಗಿದ್ದು, 150ಕ್ಕೂ ಹೆಚ್ಚು ವಿದ್ಯಾರ್ಥಿಗಳು ನೊಂದಣಿ ಮಾಡಿಕೊಂಡಿದ್ದಾರೆ.
ಸಾನಿಧ್ಯವನ್ನು ಬೀದರ ಬುದ್ಧ ವಿಹಾರದ ಪೂಜ್ಯ ಧಮ್ಮದೀಪ ಭಂತೇಜಿಗಳು, ಮೈಸೂರಿನ ಉರಿಲಿಂಗ ಪೆದ್ದಿ ಮಠದ ಶ್ರೀ ಜ್ಞಾನ ಪ್ರಕಾಶ ಮಹಾಸ್ವಾಮೀಜಿ, ಛಲವಾದಿ ಗುರುಪೀಠದ ಶ್ರೀ ಬಸವನಾಗಿದೇವ ಶರಣರು, ವೆಂಕಟಗಿರಿ ಕ್ಯಾಂಪಿನ ಶ್ರೀ ಸಿದ್ದಾಶ್ರಮದ ಡಾ.ಸಿದ್ದರಾಮೇಶ್ವರ ಶರಣರು ಗೋನವಾರದ ಬಸವರಾಜ ಸ್ವಾಮೀಜಿಗಳು ವಹಿಸಲಿದ್ದಾರೆ. ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಉದ್ಘಾಟಿಸಲಿದ್ದಾರೆ. ಸಚಿವರಾದ ಪ್ರಿಯಾಂಕ ಖರ್ಗೆ, ಪಿ.ಎಂ.ನರೇಂದ್ರಸ್ವಾಮಿ, ಡಾ.ಎಚ್.ಸಿ,ಮಹಾದೇವಪ್ಪ, ಶಾಸಕ ಹಂಪನಗೌಡ ಬಾದರ್ಲಿ,ಆರ್.ಬಸನಗೌಡ ತುರ್ವಿಹಾಳ, ಅಬಯ್ಯ ಪ್ರಸಾದ, ಬಸನಗೌಡ ಬಾದರ್ಲಿ, ಡಾ.ಶಿವರಾಜ ಪಾಟೀಲ್ ಸೇರಿದಂತೆ ಅನೇಕರು ಆಗಮಿಸಲಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಪ್ರಮುಖರಾದ ಬಸವರಾಜ,ಸಂತೋಷ,ಯಲ್ಲಪ್ಪ,ಶ್ರೀನಿವಾಸ,ನಾಗರಾಜ ಇದ್ದರು.