ರಾಯಚೂರಿನ ಪತ್ರಿಕಾ ಭವನದಲ್ಲಿ ರಿಪೋರ್ಟ್ ರ್ಸ್ ಗಿಲ್ಡ್ ನಿಂದ ಪತ್ರಕರ್ತರ ಮಕ್ಕಳಿಗಾಗಿ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿಯಲ್ಲಿ ಹೆಚ್ಚಿನ ಅಂಕ ಪಡೆದ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ವಿಜಯವಾಣಿ ಪತ್ರಿಕೆಯ ಜಿಲ್ಲಾ ಛಾಯಾಗ್ರಾಹಕ ಸುರೇಶ ಸ್ವಾಮಿ ಪುತ್ರಿ ಸ್ವಪ್ನಾ ಸುರೇಶಸ್ವಾಮಿ ಕುಟುಂಬವನ್ನು ಸನ್ಮಾನಿಸಲಾಯಿತು. ಹಿರಿಯ ಪತ್ರಕರ್ತ ಸುಶೀಲೇಂದ್ರ ಸೋದೆಗಾರ, ಗಿಲ್ಡ್ ಅಧ್ಯಕ್ಷ ವಿಜಯಕುಮಾರ ಜಾಗಟಗಲ್,ಕಾರ್ಯದರ್ಶಿ ವೆಂಕಟೇಶ ಹೂಗಾರ ,ಸದಸ್ಯ ಕೆ.ಸತ್ಯ ನಾರಾಯಣ, ಸಂಪಾದಕರ ಸಂಘದ ಅಧ್ಯಕ್ಷ ಚನ್ನಬಸವ ಬಾಗಲವಾಡ, ಕೆ.ಶಿವರಾಜ ಇದ್ದರು.
- ವಿಜಯವಾಣಿ ಛಾಯಾಗ್ರಾಹಕನ ಪುತ್ರಿಗೆ ಬಹುಮಾನ
ರಾಯಚೂರು
ಪತ್ರಕರ್ತರ ಮಕ್ಕಳಿಗೆ ವಿದ್ಯೆಗೆ ಪ್ರೋತ್ಸಾಹ ನೀಡಲು ಪತ್ರಕರ್ತರ ಸಂಘಗಳು ಸರಕಾರದ ಮೇಲೆ ಒತ್ತಡ ಹಾಕಬೇಕೆಮದು ಹಿರಿಯ ಪತ್ರಕರ್ತ ಸುಶೀಲೇಂದ್ರ ಸೋದೆಗಾರ ಸಲಹೆ ನೀಡಿದರು.
ನಗರದ ಪತ್ರಿಕಾ ಭವನದಲ್ಲಿ ಪತ್ರಕರ್ತರ ಮಕ್ಕಳಿಗಾಗಿ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿಯಲ್ಲಿ ಹೆಚ್ಚಿನ ಅಂಕ ಪಡೆದ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಪತ್ರಕರ್ತರ ಮಕ್ಕಳಿಗಾಗಿ ಉತ್ತಮ ಕೆಲಸ ಆಯೋಜಿಸಿದ್ದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಮಧ್ಯಮ ವರ್ಗದಿಂದ ಅನೇಕ ಪತ್ರಕರ್ತರು ಬಂದಿದ್ದು, ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಶುಲ್ಕ ಕಟ್ಟುವಷ್ಟು ಆರ್ಥಿಕ ಸಾಮರ್ಥ್ಯ ಇರುವುದಿಲ್ಲ.
ಎಲ್ಲರೂ ಸೇರಿ ಮಕ್ಕಳಿಗೆ ವಿದ್ಯಾಭ್ಯಾಸಕ್ಕಾಗಿ ಅಗತ್ಯ ನೆರವು ಸಿಗುವಂತೆ ಸಂಘಟನೆಗಳು ಸರ್ಕಾರದ ಮೇಲೆ ಒತ್ತಡ ಹಾಕಬೇಕು. ಪತ್ರಕರ್ತರ ಮಕ್ಕಳಿಗೆ ನೆರವು ಕೊಡಿಸಲು ಸಲಹೆ ಮಾಡಿದರು. ನಗದು ಬಹುಮಾನ 5ಸಾವಿರ ರೂ ನೀಡುತ್ತಿರುವುದಕ್ಕೆ ಶ್ಲಾಘಿಸಿದರು.
ಗಿಲ್ಡ್ ಸದಸ್ಯ ಕೆ.ಸತ್ಯ ನಾರಾಯಣ ಮಾತನಾಡಿ, ಸಮಾಜದಲ್ಲಿ ಅಂಕುಡೊಂಕುಗಳಿಗೆ ಪರಿಹಾರ ಹುಡುಕುವ ಜೊತೆಗೆ ಕುಟುಂಬ ನಿರ್ವಹಣೆ ಮಾಡಲು ಎಲ್ಲರೂ ಶ್ರಮ ಪಡುತ್ತಾರೆ. ಗಿಲ್ಡ್ ನ ಅನೇಕ ಕಾರ್ಯಕ್ರಮದ ಮಧ್ಯೆ ಮೊದಲ ಕಾರ್ಯಕ್ರಮ ಇದಾಗಿದೆ. ಮಕ್ಕಳಿಗೆ ಪಾಲಕರ ಕ್ಷೇತ್ರದಲ್ಲಿ ಸಿಗುವ ಗೌರವ ಖುಷಿ ಇಮ್ಮಡಿಯಾಗಿದೆ.
ಮಕ್ಕಳ ಕುಟುಂಬಕ್ಕೆ ಹುದ್ದೆ ಬಗ್ಗೆ ಮಾಹಿತಿ ನೀಡಬೇಕು. ್ಸಮಾಜದಲ್ಲಿ ನಮಗೆ ಸಿಗುವ ಗೌರವದ ಜೊತೆಗೆ ಅವರ ಮಕ್ಕಳಿಗೆ ಇನ್ನಷ್ಟು ಪೂರಕ ಕಾರ್ಯಕ್ರಮ ಮಾಡಲಿ ಎಂದು ಸಲಹೆ ನೀಡಿದರು.
ಗಿಲ್ಡ್ ಅಧ್ಯಕ್ಷ ವಿಜಯಕುಮಾರ ಜಾಗಟಗಲ್ ಮಾತನಾಡಿ, ಮಕ್ಕಳನ್ನು ಬೌದ್ಧಿಕವಾಗಿ ಬೆಳೆಸಲು ಕಾರ್ಯಕ್ರಮ ಮುಂದಿನ ದಿನಗಳಲ್ಲಿ ಆಯೋಜಿಸ ಲಾಗುತ್ತದೆಂದರು. ಪತ್ರಕರ್ತರ ಕ್ಷೇಮಾಭಿವೃದ್ಧಿ ಜೊತೆಗೆ ಇತರ ಕಾರ್ಯಕ್ರಮ ಗಳನ್ನು ಹಿರಿಯರ ಮಾರ್ಗದರ್ಶನದಲ್ಲಿ ಮಾಡುತ್ತೇವೆ. ಸಾಧನೆಯಲ್ಲಿ ಮಕ್ಕಳ ಗುರುತಿಸಲು ಪಾಲಕರು ಪ್ರಯತ್ನ ಮಾಡಬೇಕು ಅಲ್ಲದೆ, ಕೌಶಲಗಳನ್ನು ಬೆಳೆಸಲು ಪ್ರಯತ್ನ ಮಾಡಲು ಹೇಳಿದರು. ಸಂಪಾದಕರ ಸಂಘದ ಅಧ್ಯಕ್ಷ ಚನ್ನಬಸವ ಬಾಗಲವಾಡ ಮಾತನಾಡಿದರು.
ನಂತರ ವಿಜಯವಾಣಿ ಪತ್ರಿಕೆಯ ಜಿಲ್ಲಾ ಛಾಯಾಗ್ರಾಹಕ ಸುರೇಶ ಸ್ವಾಮಿ ಪುತ್ರಿ ಸ್ವಪ್ನಾ ಸುರೇಶಸ್ವಾಮಿ ಹಾಗೂ ಪತ್ರಕರ್ತ ಶಿವಪ್ಪ ಮಡಿವಾಳರ ಪುತ್ರಿ ಕಾಳಿಕಾದೇವಿ ಅವರಿಗೆ 5 ಸಾವಿರ ನಗದು ಪ್ರೋತ್ಸಾಹ ಧನ ನೀಡಿ ಪ್ರತಿಭಾ ಪುರಸ್ಕಾರ ಮಾಡಲಾಯಿತು. ಯಶಸ್ವಿನಿ ಆರೋಗ್ಯ ಕಾರ್ಡ್ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಪತ್ರಕರ್ತರಾದ ಎಚ್.ಶಿವರಾಜ್, ಕಾರ್ಯದರ್ಶಿ ವೆಂಕಟೇಶ ಹೂಗಾರ ಸೇರಿ ಅನೇಕರು ಇದ್ದರು.
ಈ ಸಂದರ್ಭದಲ್ಲಿ ಪತ್ರಕರ್ತರಾದ ಎಚ್.ಶಿವರಾಜ್, ಕಾರ್ಯದರ್ಶಿ ವೆಂಕಟೇಶ ಹೂಗಾರ ಸೇರಿ ಅನೇಕರು ಇದ್ದರು.