ನಾಗರಬೆಂಚಿ ಗ್ರಾಮದ ಜ್ಯೋತಿ ಸಂಜೀವಿನಿ ಸ್ವಸಹಾಯ ಒಕ್ಕೂಟದ ಕೋಳಿ ಫಾರ್ಮ್‌ಗೆ ಜಿಪಂ ಮುಖ್ಯಯೋಜನಾಧಿಕಾರಿ ಡಾ.ಟಿ.ರೋಣಿ ವೀಕ್ಷಿಸಿದರು. ತಾಪಂ ಇಒ ಅಮರೇಶ ಯಾದವ, ಪಿಡಿಒ ತಿಮ್ಮನಗೌಡ, ಎನ್‌ಆರ್‌ಎಲ್‌ಎಂ ಈರಪ್ಪ, ಪ್ರಕಾಶ ಇತರರಿದ್ದರು. 
ರಾಯಚೂರು

ಕೋಳಿಗಳ ಆರೈಕೆಗೆ ವಿಶೇಷ ಕಾಳಜಿವಹಿಸಿ

ನರೇಶ್ ಕುಮಾರ್
ಮಸ್ಕಿ: ಸ್ವಸಹಾಯ ಗುಂಪಿನ ಮಹಿಳೆಯರು ಕುಕ್ಕುಟ ಸಂಜೀವಿನಿ ಯೋಜನೆಯಡಿ ಹೆಚ್ಚು ತೊಡಗಿಸಿಕೊಳ್ಳುವ ಮೂಲಕ ಲಾ ಕಂಡುಕೊಳ್ಳಬೇಕು ಎಂದು ಜಿಪಂ ಮುಖ್ಯ ಯೋಜನಾಧಿಕಾರಿ ಡಾ.ಟಿ.ರೋಣಿ ಹೇಳಿದರು. 
ಮೆದಿಕಿನಾಳ ಗ್ರಾಪಂ ವ್ಯಾಪ್ತಿಯ ನಾಗರಬೆಂಚಿ ಗ್ರಾಮದ ಜ್ಯೋತಿ ಸಂಜೀವಿನಿ ಸ್ವಸಹಾಯ ಗುಂಪಿನ ಮಹಿಳೆಯರು ಕುಕ್ಕುಟ ಸಂಜೀವಿನಿ ಯೋಜನೆಯಡಿ ಆರಂಭಿಸಿದ ಕೋಳಿ ಫಾರ್ಮ್‌ಗೆ ಭೇಟಿ ನೀಡಿ ಪರಿಶೀಲಿಸಿ ಮಾತನಾಡಿದರು. 
ಕೋಳಿ ಫಾರ್ಮ್‌ನನ್ನು ವ್ಯವಸ್ಥಿತವಾಗಿ ನಿರ್ವಹಣೆ ಮಾಡಬೇಕು. ಬಿಸಿಲಿನ ಝಳ ಹೆಚ್ಚುತ್ತಿರುವುದರಿಂದ ಕೋಳಿಗಳ ಆರೈಕೆಗೆ ವಿಶೇಷ ಗಮನಹರಿಸಬೇಕು. ಪಶು ವೈದ್ಯರ ಸಲಹೆಗಳನ್ನು ಪಾಲಿಸಬೇಕು ಎಂದ ಅವರು, ಕುಕ್ಕುಟೋದ್ಯಮದಲ್ಲಿ ತೊಡಗಿರುವ ಮಹಿಳೆಯರನ್ನು ಕೇಂದ್ರ ಸರ್ಕಾರದಿಂದ ದೆಹಲಿಯಲ್ಲಿ ಜರುಗುವ ಕಾರ್ಯಕ್ರಮದಲ್ಲಿ ಭಾಗವಹಿಸಲು ಶಿಫಾರಸು ಮಾಡಲಾಗುವುದು ಎಂದು ತಿಳಿಸಿದರು. 
ನಂತರ ವಟಗಲ್ ಗ್ರಾಪಂಗೆ ಭೇಟಿ ನೀಡಿ ಸಿಬ್ಬಂದಿ ಹಾಜರಾತಿ ಪರಿಶೀಲಿಸಿ, ತೆರಿಗೆ ವಸೂಲಾತಿ, ಆಸ್ತಿ ಸಮೀಕ್ಷೆ ಕುರಿತು ಮಾಹಿತಿ ಪಡೆದರು. ನಂತರ ಗುಡಿಹಾಳ ಗ್ರಾಮದ ಬಹುಗ್ರಾಮ ಕುಡಿವ ನೀರಿನ ಕೆರೆಗೆ ತೆರಳಿ ವೀಕ್ಷಿಸಿದರು. ತಾಪಂ ಇಒ ಅಮರೇಶ ಯಾದವ, ವಟಗಲ್ ಪಿಡಿಒ ತಿಮ್ಮನಗೌಡ, ಎನ್‌ಆರ್‌ಎಲ್‌ಎಂ ಅಧಿಕಾರಿ ಈರಪ್ಪ, ಪ್ರಕಾಶ ಇತರರಿದ್ದರು.