ಕವಿತಾಳದಲ್ಲಿ ನಾಡಕಚೇರಿಯ ಎಸ್‌ಡಿಎ ವಿಜಯಲಕ್ಷ್ಮೀಗೆ ದಲಿತ ಸಂರಕ್ಷ ಸಮಿತಿ ಮನವಿ ಸಲ್ಲಿಸಿತು. ಮುಖಂಡರಾದ ಹುಚ್ಚಪ್ಪ ಬುಳ್ಳಾಪುರ, ಈರಣ್ಣ ಕೆಳಗೇರಾ, ಬಾಲಸ್ವಾಮಿ ಜಿನ್ನಾಪುರ, ಹುಚ್ಚಪ್ಪ ವಡವಟ್ಟಿ, ಚಂದ್ರು, ಹುಲುಗಪ್ಪ ಇತರರಿದ್ದರು. 
ರಾಯಚೂರು

ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮಕೈಗೊಳ್ಳಿ

ಕವಿತಾಳ: ಹಟ್ಟಿಚಿನ್ನದಗಣಿಯಲ್ಲಿ ನರ್ಸ್ ಜ್ಯೋತಿ ಸಾವಿನ ಪ್ರಕರಣಕ್ಕೆ ಸಂಬಂಧಿಸಿ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿ ದಲಿತ ಸಂರಕ್ಷ ಸಮಿತಿ ಸದಸ್ಯರು ಸೋಮವಾರ ಆನ್ವರಿ ಕ್ರಾಸ್‌ನಲ್ಲಿ ಪ್ರತಿಭಟನೆ ನಡೆಸಿ ನಾಡಕಚೇರಿ ಎಸ್‌ಡಿಎ ವಿಜಯಕ್ಷ್ಮೀ ಮೂಲಕ ಸಿಎಂ ಹಾಗೂ ಗೃಹಸಚಿವರಿಗೆ ಮನವಿ ಸಲ್ಲಿಸಿದರು. 
ಜ್ಯೋತಿಯನ್ನು ಜ್ಞಾನೇಂದ್ರ ಎನ್ನುವ ವ್ಯಕ್ತಿ ಪ್ರೀತಿಸಿ ಮದುವೆಯಾಗುತ್ತೇನೆ ಎಂದು ನಂಬಿಸಿದ್ದ. ಡಿ.21ರಂದು ಸ್ನೇಹಿತೆ ಮನೆಗೆ ಹೋಗಿ ಬರುತ್ತೇನೆಂದು ಹೇಳಿ ಹೋದ ಜ್ಯೋತಿ ಸೋಮವಾರವಾದರೂ ಮನೆಗೆ ಬರಲಿಲ್ಲ. ರಸ್ತೆ ಪಕ್ಕದಲ್ಲಿ ನಿಂತಿರುವ ರೋಡ್ ರೋಲರ್ ವಾಹನಕ್ಕೆ ನೇಣು ಹಾಕಿಕೊಂಡ ಸ್ಥಿತಿಯಲ್ಲಿ ಜ್ಯೋತಿ ಸಾವಿಗೀಡಾಗಿದ್ದಾರೆ. ಆದರೆ, ಇದು ಆತ್ಮಹತ್ಯೆಯಲ್ಲ, ಕೊಲೆಯಾಗಿದ್ದು, ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂದು ಆಗ್ರಹಿಸಿದರು. 
ಮುಖಂಡರಾದ ಹುಚ್ಚಪ್ಪ ಬುಳ್ಳಾಪುರ, ಈರಣ್ಣ ಕೆಳಗೇರಾ, ಬಾಲಸ್ವಾಮಿ ಜಿನ್ನಾಪುರ, ಹುಚ್ಚಪ್ಪ ವಡವಟ್ಟಿ, ಚಂದ್ರು, ಹುಲುಗಪ್ಪ, ಬಸವರಾಜ, ಮೌನೇಶ ಕೊಡ್ಲಿ, ರಫಿ ಒಂಟಿಬಂಡಿ, ನಿಂಗಪ್ಪ ತೋಳ ಇತರರಿದ್ದರು.