ಮಸ್ಕಿ ಪುರಸಭೆಯಲ್ಲಿ ಬುಧವಾರ ಅಧ್ಯಕ್ಷ ಮಲ್ಲಯ್ಯ ಅಂಬಾಡಿ ಅಧ್ಯಕ್ಷತೆಯಲ್ಲಿ ಸಾಮಾನ್ಯ ಸಭೆ ನಡೆಯಿತು. 
ರಾಯಚೂರು

ಕುಡಿವ ನೀರಿನ ಸಮಸ್ಯೆ ಆಗದಂತೆ ಗಮನಹರಿಸಿ

ಪ್ರಮುಖ ಮುಖ್ಯಾಂಶಗಳು

  • ಪುರಸಭೆ ಅಧ್ಯಕ್ಷ ಮಲ್ಲಯ್ಯ ಅಂಬಾಡಿ ಸೂಚನೆ
  • ಮಸ್ಕಿಯಲ್ಲಿ ಸಾಮಾನ್ಯ ಸಭೆ
ಮಸ್ಕಿ: ಪಟ್ಟಣದ ಜನರಿಗೆ ಮುಂದಿನ ಬೇಸಿಗೆ ಸಮಯದಲ್ಲಿ ಕುಡಿವ ನೀರಿನ ತೊಂದರೆ ಆಗದಂತೆ ಈಗಿನಿಂದಲೇ ಮುತುವರ್ಜಿ ವಹಿಸಬೇಕು ಎಂದು ಪುರಸಭೆ ಅಧ್ಯಕ್ಷ ಮಲ್ಲಯ್ಯ ಅಂಬಾಡಿ ಸೂಚಿಸಿದರು.
ಪಟ್ಟಣದ ಪುರಸಭೆಯಲ್ಲಿ ಬುಧವಾರ ಏರ್ಪಡಿಸಿದ್ದ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜನವರಿ ಮೊದಲ ವಾರದಲ್ಲಿ ತುಂಗಭದ್ರಾ ಎಡದಂಡೆ ಕಾಲುವೆಗೆ ನೀರು ಸ್ಥಗಿತಗೊಳ್ಳಲಿದೆ. ಮುಂಜಾಗ್ರತ ಕ್ರಮವಾಗಿ ಎರಡು ಕೆರೆಗಳಿಗೆ ನೀರು ತುಂಬಿಸಬೇಕು. ವಾರಕ್ಕೆ ಐದು ದಿನ ನೀರು ಪೂರೈಕೆಗೆ ಕ್ರಮವಹಿಸಬೇಕು ಎಂದು ಅಧಿಕಾರಿಗಳಿಗೆ ಸಲಹೆ ನೀಡಿದರು.
ಇತ್ತೀಚೆಗೆ ಸುರಿದ ಮಳೆಗೆ ಚರಂಡಿಗಳು ಹಾಳಾಗಿದ್ದು, ಬ್ಲಾಕ್ ಆಗಿವೆ. ಹಲವು ವಾರ್ಡ್‌ಗಳು ಮೂಲ ಸೌಕರ್ಯಗಳ ಕೊರತೆ ಕಾಡುತ್ತಿವೆ ಎಂದು ಸದಸ್ಯರು ದೂರಿದರು. ಪಟ್ಟಣದ 23 ವಾರ್ಡ್‌ಗಳಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಯಲಿವೆ. ಮಳೆಗೆ ರಸ್ತೆ, ಚರಂಡಿ ಹಾಳಾಗಿದ್ದು, ದುರಸ್ತಿಗೆ ಮೊದಲ ಆದ್ಯತೆ ನೀಡುವುದಾಗಿ ಮಲ್ಲಯ್ಯ ಭರವಸೆ ನೀಡಿದರು. ಪಟ್ಟಣದ ಮುಖ್ಯ ವೃತ್ತಗಳ ಬಳಿ ಪರವಾನಗಿ ಪಡೆಯದೆ ಬ್ಯಾನರ್ ಅಳವಡಿಸುತ್ತಿದ್ದು, ಗ್ರಾಮದ ಸೌಂದರ್ಯ ಹಾಳಾಗುತ್ತಿದೆ. ಪುರಸಭೆ ಅನುಮತಿ ಇಲ್ಲದೆ ಬ್ಯಾನರ್ ಅಳವಡಿಕೆಗೆ ಕಡಿವಾಣ ಹಾಕಬೇಕು ಎಂದು ಕೆಲ ಸದಸ್ಯರು ಒತ್ತಾಯಿಸಿದರು. 
ಪುರಸಭೆ ಉಪಾಧ್ಯಕ್ಷೆ ಗೀತಮ್ಮ ಶಿವರಾಜ ಬುಕ್ಕಣ್ಣ, ಸ್ಥಾಯಿ ಸಮಿತಿ ಅಧ್ಯಕ್ಷ ಚೇತನ ಪಾಟೀಲ್, ಮುಖ್ಯಾಧಿಕಾರಿ ನರಸರಡ್ಡಿ ಇತರರಿದ್ದರು. 
20-ಎಂಎಸ್‌ಕೆ-2
ಮಸ್ಕಿ ಪುರಸಭೆಯಲ್ಲಿ ಬುಧವಾರ ಅಧ್ಯಕ್ಷ ಮಲ್ಲಯ್ಯ ಅಂಬಾಡಿ ಅಧ್ಯಕ್ಷತೆಯಲ್ಲಿ ಸಾಮಾನ್ಯ ಸಭೆ ನಡೆಯಿತು.